ವಿನೂತನ ರೀತಿಯಲ್ಲಿ ಮಾಜಿ ಶಾಸಕ ಸೋಮಶೇಖರ್ ಬಂದ್‍ಗೆ ಬೆಂಬಲ ಕೋರಿಕೆ
ಮೈಸೂರು

ವಿನೂತನ ರೀತಿಯಲ್ಲಿ ಮಾಜಿ ಶಾಸಕ ಸೋಮಶೇಖರ್ ಬಂದ್‍ಗೆ ಬೆಂಬಲ ಕೋರಿಕೆ

September 11, 2018

ಮೈಸೂರು: ಭಾರತ್ ಬಂದ್ ಹಿನ್ನೆಲೆಯಲ್ಲಿ ಮೈಸೂ ರಿನ ಕೃಷ್ಣರಾಜ ಕ್ಷೇತ್ರದ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ವಿವಿಧೆಡೆ ಪ್ರತಿಭಟನೆ ನಡೆಸಿ, ಸಾರ್ವಜನಿಕರಿಗೆ ಗುಲಾಬಿ ನೀಡುವ ಮೂಲಕ ಬಂದ್‍ಗೆ ಬೆಂಬಲ ಕೋರಿದರು. ಸೋಮವಾರ ಮುಂಜಾನೆಯಿಂದಲೇ ರಸ್ತೆಗಿಳಿದ ಎಂ.ಕೆ. ಸೋಮಶೇಖರ್, ಮೈಸೂರು ಗ್ರಾಮಾಂ ತರ ಹಾಗೂ ನಗರ ಬಸ್ ನಿಲ್ದಾಣ, ದೇವರಾಜ ಅರಸು ರಸ್ತೆ, ಅರಣ್ಯ ಇಲಾಖೆ ಕಚೇರಿ, ಕಾಡಾ ಕಚೇರಿ, ನಗರ ಪಾಲಿಕೆ, ಮಿನಿ ವಿಧಾನಸೌಧ, ಚಾಮರಾಜ ಜೋಡಿ ರಸ್ತೆ, ಅಗ್ರಹಾರ ಸೇರಿದಂತೆ ವಿವಿಧೆಡೆ ಸಂಚರಿಸಿ, ಕಚೇರಿಗಳಲ್ಲಿದ್ದ ಅಧಿಕಾರಿ ಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರಿಗೆ ಗುಲಾಬಿ ನೀಡಿ, ತೈಲ ಬೆಲೆ ಏರಿಕೆ ವಿರು ದ್ಧದ ಭಾರತ್ ಬಂದ್‍ಗೆ ಬೆಂಬಲ ನೀಡು ವಂತೆ ಮನವಿ ಮಾಡಿದರು.

ಪೆಟ್ರೋಲ್, ಡೀಸೆಲ್, ಗ್ಯಾಸ್ ಸೇರಿದಂತೆ ದಿನಬಳಕೆ ವಸ್ತುಗಳ ಬೆಲೆ ದಿನೇ ದಿನೆ ಏರಿಕೆಯಾಗು ತ್ತಿದೆ. ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಪೊಳ್ಳು ಭರವಸೆ ನೀಡುವುದರಲ್ಲೇ ತಲ್ಲೀನ ವಾಗಿದೆ. ಜನ ಸಾಮಾನ್ಯರ ಸಂಕಷ್ಟದ ಬಗ್ಗೆ ಕಿಂಚಿತ್ತೂ ಗಮನಹರಿಸಿಲ್ಲ. ಪ್ರಧಾನಿ ಮೋದಿಯವರು, ಒಳ್ಳೆಯ ದಿನ ಬರುತ್ತದೆ ಎಂದು ಹೇಳುತ್ತಲೇ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡುತ್ತಿದ್ದಾರೆ. ಈ ಬಗ್ಗೆ ಎಚ್ಚೆತ್ತು ಕೊಂಡು ಪ್ರತಿಭಟಿಸದಿದ್ದರೆ ಸಾಮಾನ್ಯರ ಬದುಕು ಮತ್ತಷ್ಟು ದುಸ್ತರವಾಗುತ್ತದೆ. ಎಲ್ಲರೂ ಒಗ್ಗಟ್ಟಿನಿಂದ ಸ್ವಯಂ ಪ್ರೇರಿತ ರಾಗಿ ಕೇಂದ್ರದ ನಡೆಯನ್ನು ಖಂಡಿಸ ಬೇಕೆಂದು ಎಂ.ಕೆ.ಸೋಮಶೇಖರ್ ತಿಳಿ ಹೇಳುತ್ತಿದ್ದದ್ದು ಕಂಡು ಬಂದಿತು.

ನಗರ ಪಾಲಿಕೆ ಸದಸ್ಯರಾದ ಶೋಭಾ ಸುನಿಲ್ ಕುಮಾರ್, ಗೋಪಿ, ಲೋಕೇಶ್ ಪಿಯಾ, ಕಾಂಗ್ರೆಸ್ ಮುಖಂಡರಾದ ಶೇಖರ್, ಶ್ರೀನಿವಾಸ್, ಶ್ರೀಧರ, ಮಂಜು, ಸೋಮಶೇಖರ್, ಗುಣಶೇಖರ್ ಸೇರಿ ದಂತೆ ಅನೇಕ ಕಾರ್ಯಕರ್ತರು ಎಂಕೆಎಸ್ ಜೊತೆಗಿದ್ದರು.

Translate »