ಉನ್ನತ ಶಿಕ್ಷಣ ಸಚಿವ ಜಿಟಿಡಿ ಭರವಸೆ ಹಿನ್ನೆಲೆ ಪ್ರತಿಭಟನೆ ಕೈಬಿಟ್ಟ ಸಂಗೀತ ವಿವಿ ವಿದ್ಯಾರ್ಥಿಗಳು
ಮೈಸೂರು

ಉನ್ನತ ಶಿಕ್ಷಣ ಸಚಿವ ಜಿಟಿಡಿ ಭರವಸೆ ಹಿನ್ನೆಲೆ ಪ್ರತಿಭಟನೆ ಕೈಬಿಟ್ಟ ಸಂಗೀತ ವಿವಿ ವಿದ್ಯಾರ್ಥಿಗಳು

September 11, 2018

ಮೈಸೂರು: ಡಾ. ಗಂಗೂಬಾಯಿ ಹಾನಗಲ್ ಸಂಗೀತ ವಿವಿಯಲ್ಲಿ ಹಲವು ಮೂಲಭೂತ ಸೌಲಭ್ಯದ ಕೊರತೆಯಿದ್ದು, ಶೀಘ್ರ ಬಗೆಹರಿಸುವುದಾಗಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಭರವಸೆ ನೀಡಿದ ಮೇರೆಗೆ ವಿದ್ಯಾರ್ಥಿಗಳು ಪ್ರತಿಭಟನೆ ಕೈಬಿಟ್ಟರು.

ಮೂಲಭೂತ ಸೌಲಭ್ಯಗಳಿಗೆ ಆಗ್ರಹಿಸಿ ಕಳೆದ 10 ದಿನಗಳಿಂದ ಡಾ.ಗಂಗೂಬಾಯಿ ಹಾನಗಲ್ ಸಂಗೀತ ವಿವಿ ವಿದ್ಯಾರ್ಥಿಗಳು ವಿವಿ ಆವರಣದಲ್ಲಿ ನಡೆಸುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಸೋಮವಾರ ಮಧ್ಯಾಹ್ನ ಸಚಿವ ಜಿ.ಟಿ.ದೇವೇಗೌಡ ಭೇಟಿ ನೀಡಿ, ಕಟ್ಟಡದ ಎಲ್ಲ ಕೊಠಡಿಗಳು, ಸಂಗೀತ ಸಲಕರಣೆ ಗಳನ್ನು ಪರಿಶೀಲಿಸಿದರು. ನಂತರ ವಿದ್ಯಾರ್ಥಿ ಗಳಿಂದ ಸಮಸ್ಯೆ ಆಲಿಸಿ, ಶೀಘ್ರ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.

ನಂತರ ಮಾಧ್ಯಮದೊಂದಿಗೆ ಸಚಿವ ಜಿ.ಟಿ.ದೇವೇಗೌಡರು ಮಾತನಾಡಿ, ಈ ಕಟ್ಟಡದಲ್ಲಿ ಬಹಳಷ್ಟು ಸೌಲಭ್ಯದ ಕೊರತೆ ಇದ್ದು, ವಿದ್ಯಾರ್ಥಿಗಳ ವ್ಯಾಸಂಗಕ್ಕೆ ತೊಂದರೆಯಾಗುತ್ತಿದೆ. ಹಾಗಾಗಿ ವರ್ಷದಲ್ಲಿ ಸುಸ ಜ್ಜಿತ ಕಟ್ಟಡವನ್ನು ಇಲ್ಲಿಯೇ ನಿರ್ಮಿಸಲಾಗುವುದು. ಆದರೆ, ಕಾಮಗಾರಿ ಕೈಗೊಂಡರೆ ತರಗತಿಗಳು ನಡೆಯಲು ಸಾಧ್ಯವಾಗುವುದಿಲ್ಲ. ಹಾಗಾಗಿ, ಮಂಡಕಳ್ಳಿ ಬಳಿ ಕೆಎಸ್ಓಯುಗೆ ಸೇರಿದ ಕಟ್ಟಡವೊಂದಿದ್ದು, ತಾತ್ಕಾಲಿಕವಾಗಿ ವಿವಿಯನ್ನು ಅಲ್ಲಿಗೆ ಸ್ಥಳಾಂತರಿಸಲಾಗುವುದು. ಈ ಕುರಿತು ಮುಕ್ತ ವಿವಿ ಕುಲಪತಿಗಳೊಂದಿಗೆ ಮಾತ ನಾಡುತ್ತೇನೆ ಎಂದರು.

ಶೀಘ್ರ ಪ್ರಸ್ತಾವನೆ ಸಲ್ಲಿಸಿ: ಸಂಗೀತ ವಿವಿ ಕುಲಸಚಿವ ಡಾ.ನಾಗೇಶ್ ಬೆಟ್ಟಕೋಟೆ ಅವರು ಸಂಗೀತ ವಿವಿ ಜಾಗ, ಕಟ್ಟಡ ಪ್ರಾಥ ಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಗೆ ಸೇರಿದೆ ಎಂದು ಸಚಿವರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಆ ಇಲಾಖೆಯ ಮಂತ್ರಿಗಳೊಂದಿಗೆ ಮಾತನಾಡುತ್ತೇನೆ. ಸ್ಥಳ ಹಸ್ತಾಂತರಕ್ಕೆ ಸಂಬಂದಿಸಿದಂತೆ ಕೂಡಲೇ ಪ್ರಸ್ತಾವನೆ ನೀಡಿ. ಜತೆಗೆ ವಿವಿ ಯಲ್ಲಿ ಎಷ್ಟು ಮಂದಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಇದ್ದಾರೆ ಎಂಬು ದನ್ನು ತಿಳಿಸಿ. ಎಷ್ಟು ಸಿಬ್ಬಂದಿ ಬೇಕಾಗಿದೆ ಎಂಬುದರ ಬಗ್ಗೆಯೂ ಪ್ರಸ್ತಾವನೆ ಸಲ್ಲಿಸಿ ಎಂದು ಹೇಳಿದರು.

ಅಗತ್ಯವಿಲ್ಲದ ವಿಷಯ ಕೈಬಿಡಿ: ಸಂಗೀತದ ವಿದ್ಯಾರ್ಥಿಗಳಿಗೆ ಸಂಬಂದಿಸಿಲ್ಲದ ವಿಷಯವನ್ನು ಅಳವಡಿಸಿದ್ದು, ಬೋಧಿಸಲು ಪ್ರಾಧ್ಯಾಪಕರಿಲ್ಲ ಎಂದು ವಿದ್ಯಾರ್ಥಿಗಳು ಸಚಿವರ ಬಳಿ ದೂರಿತ್ತರು. ಈ ವೇಳೆ ಕುಲಪತಿ ಡಾ.ರಾಜೇಶ್, ಎಲ್ಲ ಪದವಿ ವಿದ್ಯಾರ್ಥಿಗಳು ಭಾರತ ಸಂವಿಧಾನ, ಪರಿಸರ ಅಧ್ಯಯನ, ಕಂಪ್ಯೂಟರ್ ಅಪ್ಲಿಕೇ ಶನ್ ವಿಷಯಗಳನ್ನು ಕಲಿಯಲೇಬೇಕು ಎಂದು ಯುಜಿಸಿಯ ಗೈಡ್‍ಲೈನ್ ಇದೆ ಎಂದು ಸಚಿವರಿಗೆ ತಿಳಿಸಿದರು.

ಇದಕ್ಕೆ ವಿದ್ಯಾರ್ಥಿಗಳು, ನಮಗೆ ಸಂಬಂಧವಿಲ್ಲದ ವಿಜ್ಞಾನ ಮತ್ತು ತಂತ್ರಜ್ಞಾನ ನಿರ್ವ ಹಣೆಯನ್ನು ಪಠ್ಯವಾಗಿ ಇಡಲಾಗಿದೆ ಎಂದು ಮರು ದೂರಿತ್ತರು. ಈ ವೇಳೆ ಸಚಿ ವರು, ಈ ವಿಷಯ ಸಂಗೀತದ ವಿದ್ಯಾರ್ಥಿ ಗಳಿಗೆ ಅಗ ತ್ಯವೇ ಎಂದು ಕುಲಪತಿಯನ್ನು ಪ್ರಶ್ನಿಸಿದಾಗ, ಸಂಗೀತದ ವಿದ್ಯಾರ್ಥಿಗಳು ವಿಜ್ಞಾನ ಮತ್ತು ತಂತ್ರಜ್ಞಾನ ನಿರ್ವಹಣೆ ವಿಷಯ ಕಲಿಯುವ ಅಗತ್ಯವಿಲ್ಲ ಎಂದರು. ಹಾಗಾದರೆ, ಈ ವಿಷಯವನ್ನು ಕೈ ಬಿಡುವಂತೆ ತಿಳಿಸಿದರು.

ಅಂಕಪಟ್ಟಿ ಸಮಸ್ಯೆ ಬಗೆಹರಿಸಿ: ಅಂಕಪಟ್ಟಿ ಯಲ್ಲಿ ಕೇವಲ ಅಂಕಿಗಳು ಪ್ರಕಟವಾಗುತ್ತವೆ ಹೊರತು ವಿಷಯದ ಟೈಟಲ್‍ಗಳು ಇರುವುದಿಲ್ಲ ಎಂದು ವಿದ್ಯಾರ್ಥಿಗಳು ಸಚಿ ವರ ಬಳಿ ಸಮಸ್ಯೆಯನ್ನು ಅಲವತ್ತು ಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ತಿಂಗಳೊಳಗೆ ಅಂಕಪಟ್ಟಿ ದೋಷ ಪರಿ ಹರಿಸಬೇಕು. ಇಲ್ಲವಾದರೆ, ನಾನು ಸಭೆ ಕರೆದು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

Translate »