ಮೈಸೂರಿನ ವಿವಿಧೆಡೆಯಿಂದ ಹರಿದು ಬಂದ ಕಾಂಗ್ರೆಸ್ ಕಾರ್ಯಕರ್ತರ ದಂಡು
ಮೈಸೂರು

ಮೈಸೂರಿನ ವಿವಿಧೆಡೆಯಿಂದ ಹರಿದು ಬಂದ ಕಾಂಗ್ರೆಸ್ ಕಾರ್ಯಕರ್ತರ ದಂಡು

September 11, 2018

ಮೈಸೂರು: ಭಾರತ್ ಬಂದ್ ಹಿನ್ನೆಲೆಯಲ್ಲಿ ಮೈಸೂರಿನ ವಿವಿಧ ಬಡಾವಣೆಗಳಿಂದ ಕಾಂಗ್ರೆಸ್ ಕಾರ್ಯ ಕರ್ತರು ಮೆರವಣಿಗೆಯಲ್ಲಿ ಅರಮನೆಯ ಉತ್ತರ ದ್ವಾರದಲ್ಲಿರುವ ಕೋಟೆ ಆಂಜನೇಯ ಸ್ವಾಮಿ ದೇವಾಲಯ ಆವರಣಕ್ಕೆ ಬಂದು, ಅಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಕರೆ ನೀಡಿದ್ದ ಭಾರತ್ ಬಂದ್, ಮೈಸೂರಲ್ಲಿ ಯಶಸ್ವಿಗೊಳಿಸಲೇಬೇಕೆಂದು ಪಣ ತೊಟ್ಟಿದ್ದ ಮೈಸೂರು ನಗರ ಕಾಂಗ್ರೆಸ್ ಸಮಿತಿ, ಬೆಳಿಗ್ಗೆ ಮೈಸೂರು ನಗರದಾ ದ್ಯಂತ ಪಕ್ಷದ ವಿವಿಧ ನಾಯಕರನ್ನು ನಿಯೋಜಿಸಿತ್ತು. ಶಾಸಕರು, ಮಾಜಿ ಶಾಸ ಕರು, ವಿಧಾನ ಪರಿಷತ್ ಸದಸ್ಯರು ಸೇರಿ ದಂತೆ ವಿವಿಧ ನಾಯಕರು ಒಟ್ಟು 14 ಸ್ಥಳದಿಂದ ಪಕ್ಷದ ಕಾರ್ಯಕರ್ತರೊಂದಿಗೆ ಪ್ರತ್ಯೇಕವಾಗಿ ಮೆರವಣಿಗೆಯಲ್ಲಿ ಕೋಟೆ ಆಂಜನೇಯಸ್ವಾಮಿ ದೇವಾಲಯದ ಬಳಿ ಬರುವಂತೆ ಸೂಚಿಸಲಾಗಿತ್ತು. ಬಳಿಕ ಅಲ್ಲಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಭಾರೀ ಮೆರವಣಿಗೆಯಲ್ಲಿ ಸಾಗಿ, ಮನವಿ ಸಲ್ಲಿಸುವುದಕ್ಕೆ ಯೋಜನೆ ರೂಪಿಸಲಾಗಿತ್ತು.

ಮಾಜಿ ಸಚಿವ ಸಿ.ಹೆಚ್.ವಿಜಯ ಶಂಕರ್ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂ ಡರು, ಕಾರ್ಯಕರ್ತರು ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ಕಾರ್ಯಕರ್ತ ರೊಂದಿಗೆ ಬನ್ನಿಮಂಟಪದ ಬಸ್ ಡಿಪೋ ಬಳಿಯಿಂದ, ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ನೇತೃತ್ವದಲ್ಲಿ ಕೆ.ಆರ್. ಕ್ಷೇತ್ರದಿಂದ, ಮಾಜಿ ಶಾಸಕ ವಾಸು ನೇತೃತ್ವದಲ್ಲಿ ಚಾಮರಾಜ ಕ್ಷೇತ್ರದಿಂದ, ವಿಧಾನ ಪರಿಷತ್ ಸದಸ್ಯ ಆರ್.ಧರ್ಮ ಸೇನಾ ನೇತೃತ್ವದಲ್ಲಿ ಎಂ.ಜಿ. ರಸ್ತೆಯಿಂದ, ಮಾಜಿ ಶಾಸಕ ಎಂ.ಸತ್ಯನಾರಾಯಣ್ ನೇತೃತ್ವದಲ್ಲಿ ಎಪಿಎಂಸಿಯಿಂದ ಪಕ್ಷದ ಕಾರ್ಯಕರ್ತರು ಮೆರವಣಿಗೆಯ ಮೂಲಕ ಅರಮನೆಯ ಮುಂಭಾಗಕ್ಕೆ ಬಂದರು.

ನಂತರ ಕೆಲಕಾಲ ಚಾಮರಾಜ ವೃತ್ತ ದಲ್ಲಿ ಮಾನವ ಸರಪಳಿ ರಚಿಸಿ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ದರು. ನಂತರ ದೊಡ್ಡಗಡಿಯಾರ, ಚಿಕ್ಕ ಗಡಿಯಾರ ಹಾಗೂ ದೇವರಾಜ ಅರಸು ರಸ್ತೆ, ಜೆಎಲ್‍ಬಿ ರಸ್ತೆ, ವಿನೋಬ ರಸ್ತೆಯ ಮೂಲಕ ಸಾಗಿದರು.
ಯುವ ಕಾಂಗ್ರೆಸ್ ಕಾರ್ಯಕರ್ತರು ಕಾರು, ಜೀಪು ಹಾಗೂ ದ್ವಿಚಕ್ರ ವಾಹನ ಗಳನ್ನು ಹಗ್ಗ ಕಟ್ಟಿಕೊಂಡು ಎಳೆಯುವ ಮೂಲಕ ಇಂಧನ ಬೆಲೆ ಗಗನಕ್ಕೇರುತ್ತಿರು ವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್ ನಗರಾ ಧ್ಯಕ್ಷ ಆರ್. ಮೂರ್ತಿ, ಜಿಲ್ಲಾಧ್ಯಕ್ಷ ಡಾ. ಬಿ.ಜೆ.ವಿಜಯ್‍ಕುಮಾರ್, ಮುಡಾ ಮಾಜಿ ಅಧ್ಯಕ್ಷ ಡಿ.ಧ್ರುವಕುಮಾರ್, ಮುಖಂಡರು ಗಳಾದ ಡಿ. ನಾಗಭೂಷಣ್, ಶ್ರೀನಾಥ್ ಬಾಬು, ಡಾ. ಹರ್ಷ ವಿ.ಸಿಂಗ್, ಪ್ರಶಾಂತ್ ಗೌಡ, ಹೊಸಹುಂಡಿ ರಘು, ನಾರಾ ಯಣಸ್ವಾಮಿ, ಎನ್.ಭಾಸ್ಕರ್, ಗಿರೀಶ್, ಶೌಕತ್ ಅಲಿ ಖಾನ್, ಅಬ್ದುಲ್ ಖಾದರ್ ಶಾಹಿದ್, ನಗರಪಾಲಿಕೆ ಸದಸ್ಯರಾದ ಲೋಕೇಶ್ ಪಿಯಾ, ಸೈಯದ್ ಹಸ್ರತ್ ಉಲ್ಲಾ, ಪ್ರದೀಪ್ ಚಂದ್ರ, ಪುಷ್ಪಲತಾ ಜಗನ್ನಾಥ್, ಸೈಯದ್ ಅಕ್ಮಲ್, ಗಂಧನ ಹಳ್ಳಿ ಹೇಮಂತ್, ಗಂಧನಹಳ್ಳಿ ಅರುಣ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿ ದ್ದರು.

Translate »