ದಿ ಮೈಸೂರು ಕೋ-ಆಪರೇಟಿವ್ ಬ್ಯಾಂಕ್ ಸದಸ್ಯರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ
ಮೈಸೂರು

ದಿ ಮೈಸೂರು ಕೋ-ಆಪರೇಟಿವ್ ಬ್ಯಾಂಕ್ ಸದಸ್ಯರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ

June 9, 2018

ಮೈಸೂರು: ದಿ ಮೈಸೂರು ಕೋ-ಆಪರೇಟಿವ್ ಬ್ಯಾಂಕ್ ವತಿಯಿಂದ ಬ್ಯಾಂಕಿನ ಸದಸ್ಯರಿಗೆ ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇಂದಿನಿಂದ ಜೂ.10ರವರೆಗೆ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಸದಸ್ಯರು ಈ ಸೌಲಭ್ಯ ಪಡೆದುಕೊಳ್ಳಬಹುದು.

ಮೈಸೂರಿನ ಗಾಂಧಿಚೌಕದಲ್ಲಿರುವ ಬ್ಯಾಂಕಿನ ಮುಖ್ಯ ಕಚೇರಿ ಆವರಣದಲ್ಲಿ ಏರ್ಪಡಿಸಿರುವ ಆರೋಗ್ಯ ತಪಾಸಣಾ ಕಾರ್ಯಕ್ರಮದಲ್ಲಿ ಕಣ ್ಣನ ತಪಾಸಣೆ ಹಾಗೂ ಬಿಪಿ, ಶುಗರ್, ಇಸಿಜಿ, ಇಸಿಹೆಚ್‍ಓ ಪರೀಕ್ಷೆಗಳನ್ನು ಮಾಡಲಾಗುತ್ತದೆ. ಅನ್ನಪೂರ್ಣ ಕಣ ್ಣನ ಆಸ್ಪತ್ರೆ ಮತ್ತು ಸುಯೋಗ್ ಆಸ್ಪತ್ರೆಯ ಸಹಯೋಗದಲ್ಲಿ ಹಮ್ಮಿಕೊಂಡಿರುವ ಈ ಕಾರ್ಯಕ್ರಮಕ್ಕೆ ಶುಕ್ರವಾರ ಸಹಕಾರ ಸಂಘಗಳ ಸಹಾಯಕ ನಿಬಂಧಕ ಜೆ.ವಿಕ್ರಮ ರಾಜೇಅರಸ್ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಪ್ರಸ್ತುತ ಅನಾರೋಗ್ಯ ಸಮಸ್ಯೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂತಹ ಕಾರ್ಯಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ಇಂತಹ ಉಪಯುಕ್ತ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸುಯೋಗ್ ಆಸ್ಪತ್ರೆಯ ಅಧ್ಯಕ್ಷರೂ ಆದ ವೈದ್ಯ ಡಾ.ಎಸ್.ಪಿ.ಯೋಗಣ್ಣ ಮಾತನಾಡಿ, ಉಚಿತ ತಪಾಸಣೆ ವೇಳೆ ಗಂಭೀರ ಅನಾರೋಗ್ಯ ಸಮಸ್ಯೆ ಕಂಡು ಬಂದವರಿಗೆ ನಮ್ಮ ಆಸ್ಪತ್ರೆಯಲ್ಲಿ ರಿಯಾಯಿತಿ ದರದಲ್ಲಿ ಚಿಕಿತ್ಸೆ ಪಡೆದುಕೊಳ್ಳಲು ಅವಕಾಶವಿದೆ. ರೋಗಿಯು ಹಣವಿಲ್ಲ ಎಂಬ ಕಾರಣಕ್ಕೆ ಸಾವು-ನೋವು ಅನುಭವಿಸಬಾರದೆಂಬ ಧ್ಯೇಯದೊಂದಿಗೆ ನಮ್ಮ ಆಸ್ಪತ್ರೆ ಕೆಲಸ ಮಾಡುತ್ತಿದೆ ಎಂದರು ತಿಳಿಸಿದರು.

ಸಕ್ಕರೆ ಇಲ್ಲದ ಮನೆ ಇಲ್ಲ ಎಂಬಂತೆ ಇಂದು ಸಕ್ಕರೆ ಕಾಯಿಲೆ ಇಲ್ಲದ ಮನೆ ಇಲ್ಲ ಎನ್ನುವಂತಾಗಿದೆ. ಸಕ್ಕರೆ ಕಾಯಿಲೆ ನಿಯಂತ್ರಿಸಲು ನಮ್ಮ ಆಸ್ಪತ್ರೆಯಲ್ಲಿ ಸುಯೋಗ್ ಡಯಾಬಿಟಿಸ್ ಹೆಲ್ತ್ ಕ್ಲಬ್ ಆರಂಭಿಸಲಾಗಿದೆ. ಕ್ಲಬ್ ಮೂಲಕ ಮಧುಮೇಹಿಗಳಿಗೆ ಕಾಯಿಲೆ ನಿಯಂತ್ರಣದಲ್ಲಿ ಇಟ್ಟುಕೊಳ್ಳುವ ಬಗ್ಗೆ ಸಲಹೆ-ಮಾರ್ಗದರ್ಶನ ನೀಡಲಾಗುತ್ತದೆ ಎಂದು ಹೇಳಿದರು.

ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಮಹೇಶ್, ಬ್ಯಾಂಕಿನ ಅಧ್ಯಕ್ಷ ಬಿ.ಕೆ.ಪ್ರಕಾಶ್, ನಿರ್ದೇಶಕರಾದ ಆರ್.ರವಿಕುಮಾರ್, ಎಸ್.ಸೋಮಣ್ಣ, ಕೆ.ಉಮಾಶಂಕರ್, ಸಿ.ಚಂದ್ರಶೇಖರ್, ಚೌಹಳ್ಳಿ ಪುಟ್ಟಸ್ವಾಮಿ, ಸಿ.ಎಸ್.ರಾಮಕೃಷ್ಣಯ್ಯ, ಪಿ.ರಾಜೇಶ್ವರಿ, ಪ್ರಭಾರ ಕಾರ್ಯದರ್ಶಿ ಗಾಯಿತ್ರಿ, ಸುಯೋಗ್ ಆಸ್ಪತ್ರೆ ವೈದ್ಯರಾದ ಡಾ.ವಿಶ್ವನಾಥ್, ಡಾ.ಸುಷ್ಮಾ, ಅನ್ನಪೂರ್ಣ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಅಶ್ವಥ್ ರೈ ಮತ್ತಿತರರು ಹಾಜರಿದ್ದರು.

Translate »