ನಾಳೆ ಸೀಡ್‍ಬಾಲ್ ಬಿತ್ತನೆ ಕಾರ್ಯ
ಮೈಸೂರು

ನಾಳೆ ಸೀಡ್‍ಬಾಲ್ ಬಿತ್ತನೆ ಕಾರ್ಯ

June 9, 2018

ಮೈಸೂರು: ಕರ್ನಾಟಕ ನವೋದಯ ವಿದ್ಯಾಲಯಗಳು ಹಾಗೂ ನವೋದಯ ವಿದ್ಯಾಸಂಸ್ಥೆಗಳ ಹಳೇ ವಿದ್ಯಾರ್ಥಿಗಳ ಸಂಘ ಹಾಗೂ ಅರಣ್ಯ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಜೂ.10ರಂದು ಕೋಟಿ ಸೀಡ್‍ಬಾಲ್ ತಯಾರಿಕಾ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಮಂಡ್ಯ ನವೋದಯ ಶಾಲೆಯ ಹಳೇ ವಿದ್ಯಾರ್ಥಿ ಹೆಚ್.ಎನ್.ಭರತ್‍ಕುಮಾರ್ ತಿಳಿಸಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ರಾಜ್ಯದ ಎಲ್ಲಾ

ಜಿಲ್ಲಾ ಕೇಂದ್ರಗಳಲ್ಲಿರುವ ಒಟ್ಟು 28 ನವೋದಯ ವಿದ್ಯಾಲಯಗಳಲ್ಲಿ ಏಕಕಾಲದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಅದರಂತೆ ಮೈಸೂರಿನ ಡಿಎಂಜಿ ಹಳ್ಳಿಯಲ್ಲಿರುವ ನವೋದಯ ಶಾಲೆಯ ಆವರಣದಲ್ಲಿ ಅಂದು ಬೆಳಿಗ್ಗೆ 7.30ಕ್ಕೆ ಸೀಡ್‍ಬಾಲ್ ತಯಾರಿಕಾ ಕಾರ್ಯಕ್ರಮ ಆರಂಭವಾಗಲಿದೆ ಎಂದು ವಿವರಿಸಿದರು.

ತಿ ನವೋದಯ ವಿದ್ಯಾಲಯದಲ್ಲಿ 400ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು, ಇವರು ಮಾತ್ರವಲ್ಲದೆ, 1500ಕ್ಕೂ ಹೆಚ್ಚು ಹಳೇ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸೀಡ್‍ಬಾಲ್ (ಬೀಜದುಂಡೆ) ತಯಾರಿಕೆಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಒಂದು ದಿನದ ಈ ಕಾರ್ಯಕ್ರಮದ ಬಳಿಕ ಆಯಾಯ ನವೋದಯ ಶಾಲೆಗಳ ಆವರಣದಲ್ಲಿ ಸೀಡ್‍ಬಾಲ್‍ಗಳನ್ನು ಒಂದೆರಡು ದಿನಗಳ ಕಾಲ ಒಣಗಿಸಿ, ಬಳಿಕ ಅರಣ್ಯ ಇಲಾಖೆ ಮಾರ್ಗದರ್ಶನದಲ್ಲಿ ಶಾಲಾ-ಕಾಲೇಜು ಆವರಣ, ರಸ್ತೆಬದಿ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ಬೀಜದುಂಡೆಗಳನ್ನು ಬಿತ್ತನೆ ಮಾಡಲಾಗುವುದು ಎಂದು ತಿಳಿಸಿದರು.

ಬೀಜದುಂಡೆ ಮಾಡುವ ವಿಧಾನ: ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕೇರಳ ರಾಜ್ಯಗಳ ಒಟ್ಟು 47 ನವೋದಯ ವಿದ್ಯಾಲಯಗಳಲ್ಲಿ ಇದೇ ರೀತಿ ಏಕಕಾಲದಲ್ಲಿ ಜೂ.24ರಂದು ಸೀಡ್‍ಬಾಲ್ ತಯಾರಿಕಾ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಬೀಜದುಂಡೆ ವಿಧಾನದ ಮೂಲಕ ಅತ್ಯಂತ ಕಡಿಮೆ ವೆಚ್ಚದಲ್ಲಿ ಹೆಚ್ಚು ಪ್ರಯೋಜನ ಪಡೆಯಲು ಸಾಧ್ಯವಿದೆ. ಕೆಮ್ಮಣ್ಣು ಮತ್ತು ಗೋ ಸಗಣ ಯ ಮಿಶ್ರಣ ಮಾಡಿ ಅದರೊಳಗೆ ಬೀಜವನ್ನು ಹಾಕಲಾಗುತ್ತದೆ. ಬಳಿಕ ಉಂಡೆ ಕಟ್ಟಿ ನೆರಳಿನಲ್ಲಿ ಒಣಗಿಸಿ ತದನಂತರ ಖಾಲಿಜಾಗದಲ್ಲಿ ಎಸೆಯಬಹುದು. ಇಲ್ಲವೇ 2 ಇಂಚು ಗುಳಿ ತೆಗೆದು ಬಿತ್ತನೆ ಸಹ ಮಾಡಬಹುದು ಎಂದು ವಿವರಿಸಿದರು.
ಅರಣ್ಯ ಇಲಾಖೆ ಮೈಸೂರು ವಲಯದ ಎಸಿಎಫ್ ಶಶಿ, ಡಿಆರ್‍ಎಫ್‍ಓ ಮಂಜು, ನವೋದಯ ಶಾಲೆ ಹಳೇ ವಿದ್ಯಾರ್ಥಿಗಳಾದ ಡಾ.ಸಿ.ಶಿವಕುಮಾರ್, ಜಗದೀಶ್‍ಬಾಬು, ಶಿವಕೃಷ್ಣ ಗೋಷ್ಠಿಯಲ್ಲಿದ್ದರು.

ಸೀಡ್‍ಬಾಲ್ ಪ್ರಯೋಗದಿಂದ ಸುಟ್ಟು ಕರಕಲಾಗಿದ್ದ ಹೀರೋಸಿಮಾ ಮತ್ತು ನಾಗಸಾಕಿ ಹಸಿರಾಗುತ್ತಿವೆ…

ಈ ಬೀಜದುಂಡೆ ಮೂಲಕ ಬೀತ್ತನೆ ಮಾಡುವುದು ಪ್ರಾಚೀನ ಕಾಲದಿಂದಲೂ ನಡೆದು ಬಂದಿದೆ. ಆದರೆ ಆಧುನಿಕ ಕಾಲದಲ್ಲಿ ಜಪಾನಿನ ಹೀರೋಸಿಮಾ ಮತ್ತು ನಾಗಸಕಿ ಪ್ರದೇಶಗಳಲ್ಲಿ ಈ ವಿಧಾನವನ್ನು ಬೃಹತ್ ಪ್ರಮಾಣದಲ್ಲಿ ನಡೆಸಲಾಯಿತು. ಅಣುಬಾಂಬ್ ದಾಳಿಯಿಂದ ಮರುಭೂಮಿಯಂತಾಗಿದ್ದ ಈ ಪ್ರದೇಶಗಳಲ್ಲಿ ಮಳೆಗಾಲದ ವೇಳೆ ಹೆಲಿಕಾಫ್ಟರ್ ಮೂಲಕ ಸೀಡ್‍ಬಾಲ್‍ಗಳನ್ನು ಎಸೆಯಲಾಯಿತು. ಈ ಪ್ರಯೋಗದಿಂದ ಉತ್ತಮ ಫಲಿತಾಂಶ ಹೊರಹೊಮ್ಮಿದ್ದು, ಇದೀಗ ಈ ಪ್ರದೇಶಗಳಲ್ಲಿ ಹಸಿರು ಮೂಡುತ್ತಿದೆ. – ಹೆಚ್.ಎನ್.ಭರತ್‍ಕುಮಾರ್

Translate »