ದಲಿತ ಸಮುದಾಯದವರ ಭೂಮಿ ಕಬಳಿಕೆ ಆರೋಪ
ಮೈಸೂರು

ದಲಿತ ಸಮುದಾಯದವರ ಭೂಮಿ ಕಬಳಿಕೆ ಆರೋಪ

June 9, 2018

ಮೈಸೂರು:  ಮೈಸೂರು ನಗರದ ಯರಗನಹಳ್ಳಿ ಎಲ್ಲೆಯ ದಲಿತ ಸಮುದಾಯದವರ ಜಮೀನನ್ನು ಕೆಲವರು ಲಪಟಾಯಿಸಲು ಹೊರಟ್ಟಿದ್ದಾರೆ ಎಂದು ದಲಿತ ಅಭಿವೃದ್ಧಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಜಿ.ಎಂ.ಮಹದೇವ ಆರೋಪಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಲಿತ ಸಮುದಾಯದ ಚಿಕ್ಕಮಂಚ ಎಂಬುವವರ ಆಸ್ತಿಯನ್ನು ಕೆಲವರು ಲಪಟಾಯಿಸಲು ಪ್ರಯತ್ನಿಸುತ್ತಿದ್ದಾರೆ. ಚಿಕ್ಕಮಂಚರವರಿಗೆ ಪಿತ್ರಾರ್ಜಿತವಾಗಿ ಬಂದಿರುವ ಸರ್ವೆ ನಂ. 45/2 ಜಮೀನಿನಲ್ಲಿ ನಿವೃತ್ತ ಅಧಿಕಾರಿಯೊಬ್ಬರು ಅಕ್ರಮವಾಗಿ ಬಹುಮಹಡಿ ಕಟ್ಟಡ ಕಟ್ಟಲು ಪಾಯ ತೆಗೆಸಿದ್ದಾರೆ. ಸದರಿ ಸ್ಥಳದಲ್ಲಿ ನಾಳೆ (ಜೂ.9) ಚಿಕ್ಕಮಂಚ ಅವರ ಮೊಮ್ಮಕ್ಕಳಾದ ಗವಿಸಿದ್ದಯ್ಯ ಮತ್ತು ಗುರುಸ್ವಾಮಿ ಅವರು ತಮ್ಮ ಕುಟುಂಬ ಸದಸ್ಯರೊಂದಿಗೆ ಅರ್ಧ ಗಂಟೆ ಕಾಲ ಪ್ರತಿಭಟನಾ ಧರಣ ನಡೆಸಲಿದ್ದಾರೆ ಎಂದರು. ಗವಿಸಿದ್ದಯ್ಯ ಮತ್ತು ಗುರುಸ್ವಾಮಿ ಮತ್ತಿತರರು ಗೋಷ್ಠಿಯಲ್ಲಿದ್ದರು.

Translate »