‘ಕಾಲಾ’ ಪ್ರದರ್ಶನ ಖಂಡಿಸಿ ಪ್ರತಿಭಟನೆ
ಮೈಸೂರು

‘ಕಾಲಾ’ ಪ್ರದರ್ಶನ ಖಂಡಿಸಿ ಪ್ರತಿಭಟನೆ

June 9, 2018

ಮೈಸೂರು:  ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ನಟ ರಜನಿಕಾಂತ್ ವಿವಾದಾತ್ಮಕ ಹೇಳಿಕೆ ನೀಡಿದ್ದರೂ ಮೈಸೂರಿನ ಕೆಲ ಚಿತ್ರಮಂದಿರಗಳಲ್ಲಿ ರಜನಿಕಾಂತ್ ಅಭಿನಯದ ಕಾಲಾ ಚಿತ್ರ ಪ್ರದರ್ಶನ ನಡೆಸಲಾಗುತ್ತಿದೆ. ಇದು ಖಂಡನೀಯ ಎಂದು ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಐನಕ್ಸ್ ಚಿತ್ರಮಂದಿರ ಒಳಗೊಂಡ ಮಾಲ್ ಆಫ್ ಮೈಸೂರ್ ಬಳಿ ಪ್ರತಿಭಟನೆ ನಡೆಸಿದರು.

ವೇದಿಕೆ ಅಧ್ಯಕ್ಷ ಅರವಿಂದ ಶರ್ಮ, ಕನ್ನಡ ಕ್ರಾಂತಿ ದಳದ ಯುವ ಘಟಕದ ಅಧ್ಯಕ್ಷ ತೇಜಸ್ವಿ ಕುಮಾರ್, ರೈತ ಹಿತ ಜಾಗೃತಿ ವೇದಿಕೆ ಅಧ್ಯಕ್ಷ ರಾಜೇಶ್‍ಗಡಿ, ಡಾ.ರಾಜ್ ಕನ್ನಡ ಸೇನೆ ಅಧ್ಯಕ್ಷ ಮಹದೇವಸ್ವಾಮಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Translate »