ವಿಧಾನ ಪರಿಷತ್ ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆ: ಜಿಲ್ಲೆಯಲ್ಲಿ ಶೇ.83.42 ಮತದಾನ
ಹಾಸನ

ವಿಧಾನ ಪರಿಷತ್ ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆ: ಜಿಲ್ಲೆಯಲ್ಲಿ ಶೇ.83.42 ಮತದಾನ

June 9, 2018

ಹಾಸನ: ವಿಧಾನ ಪರಿಷತ್ ದಕ್ಷಿಣ ಶಿಕಕ್ಷರ ಕ್ಷೇತ್ರದ ಮತದಾನ ಶಾಂತಿ ಯುತವಾಗಿ ಮುಕ್ತಾಯಗೊಂಡಿದ್ದು, ಜಿಲ್ಲೆಯಲ್ಲಿ ಶೇ.83.42 ಮತದಾನವಾಗಿದೆ. ಒಟ್ಟು 4,277 ಮತದಾರರಿದ್ದು, 10 ಮತಗಟ್ಟೆಗಳಲ್ಲಿ ನಡೆದ ಮತದಾನದಲ್ಲಿ 2,428 ಪುರುಷರು, 1,141 ಮಹಿಳಾ ಮತದಾರರು ಹಕ್ಕು ಚಲಾಯಿಸಿದ್ದಾರೆ.

ಹಾಸನ ವರದಿ: ನಗರದಲ್ಲಿ ವಿಧಾನ ಪರಿಷತ್‍ನ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆ ಮಳೆ ನಡುವೆಯೂ ಮತದಾನ ಶಾಂತಿಯುತವಾಗಿ ಜರುಗಿತು. ಹಾಸನ ಪೂರ್ವದಲ್ಲಿ ಶೇ.83.25ರಷ್ಟು ಮತ ದಾನವಾಗಿದ್ದು, 181 ಪುರುಷರು ಹಾಗೂ 157 ಮಹಿಳೆಯರು ಮತದಾನ ಮಾಡಿ ದ್ದಾರೆ. ಹಾಸನ ಪಶ್ಚಿಮದಲ್ಲಿ ಶೇ.79.10 ರಷ್ಟು ಮತದಾನವಾಗಿದ್ದು 301 ಪುರುಷರು ಹಾಗೂ 172 ಮಹಿಳೆಯರು ಹಕ್ಕು ಚಲಾಯಿಸಿದ್ದಾರೆ. ಹಾಸನ ಗ್ರಾಮಾಂ ತರದಲ್ಲಿ ಶೇ.82.27ರಷ್ಟು ಮತದಾನ ವಾಗಿದೆ. 434 ಪುರುಷರು ಹಾಗೂ 225 ಮಹಿಳೆಯರು ಮತದಾನ ಮಾಡಿದ್ದಾರೆ. ನಗರದ ಆರ್.ಸಿ.ರಸ್ತೆ ಬಳಿ ಇರುವ ಸರ್ಕಾರಿ ಬಾಲಕರ ಕಾಲೇಜು ಸೇರಿದಂತೆ ವಿವಿಧೆಡೆ ಮತಗಟ್ಟೆ ಕೇಂದ್ರ ಸ್ಥಾಪಿಸಲಾಗಿತ್ತು. ಬೆಳಿಗ್ಗಿನಿಂದಲೇ ಮಳೆ ಆರಂಭವಾಯಿತು. ಶಿಕ್ಷಕರು ಮಳೆ ನಡುವೆ ಮತದಾನ ಮಾಡಿ ದರು. ಬೆಳಿಗ್ಗೆ 8 ರಿಂದ ಸಂಜೆ 4 ರವರೆಗೆ ಶಾಂತಿಯುತವಾಗಿ ಮತದಾನ ನಡೆಯಿತು.

ಹೊಳೆನರಸೀಪುರ ವರದಿ: ಪಟ್ಟಣದಲ್ಲಿ ನಡೆದ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಶೇ.80 ಮತದಾನ ವಾಯಿತು. ತಾಲೂಕು ಕಚೇರಿಯಲ್ಲಿ ಸ್ಥಾಪಿಸಿದ್ದ ಮತಗಟ್ಟೆಯಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸದೆ ಶಾಂತಿ ಯುತವಾಗಿ ನಡೆಯಿತು. 272 ಜನ ಶಿಕ್ಷಕರು ಮತ ಚಲಾವಣೆ ಮಾಡಿದರು. 200 ಪುರುಷರು 72 ಮಹಿಳಾ ಪದವೀಧರರು ಮತದಾನ ಮಾಡಿದರು. ಚುನಾವಣಾ ಅಧಿಕಾರಿಯಾಗಿ ಸತೀಶ್ ಕಾರ್ಯ ನಿರ್ವ ಹಿಸಿದರು. ನಗರ ಠಾಣೆ ಇನ್ಸ್‍ಪೆಕ್ಟರ್ ಮೋಹನ್ ಕೃಷ್ಣ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಅರಸೀಕೆರೆ ವರದಿ: ನಗರದ ಮಿನಿ ವಿಧಾನ ಸೌಧದ ಕಚೇರಿಯಲ್ಲಿ ಜರುಗಿದ ರಾಜ್ಯ ವಿಧಾನ ಪರಿಷತ್ ದಕ್ಷಿಣ ಶಿಕ್ಷಕರ ಕ್ಷೇತ್ರ ಚುನಾವಣೆ ಶಾಂತಿಯುತವಾಗಿ ಪೂರ್ಣ ಗೊಂಡು ಶೇ.88.94ರಷ್ಟು ಮತದಾನ ವಾಯಿತು. 455 ಪುರುಷರು ಹಾಗೂ 156 ಮಹಿಳೆಯರು ಮತದಾನ ಮಾಡಿದರು.

ಶಾಸಕ ಕೆ.ಎಂ.ಶಿವಲಿಂಗೇಗೌಡ, ನಗರಸಭೆ ಅಧ್ಯಕ್ಷ ಶಮೀವುಲ್ಲಾ, ಉಪಾಧ್ಯಕ್ಷ ಪಾರ್ಥಸಾರಥಿ, ಜೆಡಿಎಸ್ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಬಾಬು, ಕಾಂಗ್ರೆಸ್ ಮುಖಂಡರಾದ ಶಶಿ ಧರ್, ಅಣ್ಣಾಯ್ಕನಹಳ್ಳಿ ವಿಜಯಕುಮಾರ್, ಬಾಣಾವರ ಶ್ರೀನಿವಾಸ್, ಬಿಜೆಪಿ ತಾಲೂಕು ಘಕದ ಅಧ್ಯಕ್ಷ ಜಿ.ವಿ.ಟಿ ಬಸವರಾಜು, ಎನ್.ಡಿ.ಪ್ರಸಾದ್, ಮನೋಜ್‍ಕುಮಾರ್, ಕೆಂಪುಸಾಗರ ಶಿವರಾಜ್, ಲಾಳನಕೆರೆ ಯೋಗೀಶ್ ಇನ್ನಿತರರು ತಮ್ಮ ಪಕ್ಷಗಳ ಅಭ್ಯರ್ಥಿಗಳ ಪರವಾಗಿ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು.

ಬೇಲೂರು ವರದಿ: ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ತೆರೆದಿದ್ದ ಮತಗಟ್ಟೆಯಲ್ಲಿ ವಿಧಾನ ಪರಿಷತ್ ಚುನಾವಣೆ ಮತದಾನ ಬಿರುಸಿನಿಂದ ನಡೆದು ಶೇ.86.42ರಷ್ಟು ಮತದಾನವಾಯಿತು. 160 ಪುರುಷರು ಹಾಗೂ 69 ಮಹಿಳಾ ಪದವೀಧರರು ಮತದಾನ ಮಾಡಿದರು.

ಚನ್ನರಾಯಪಟ್ಟಣದಲ್ಲಿ ಶೇ. 85.38 ರಷ್ಟು ಮತದಾನವಾಗಿದ್ದು, 312 ಪುರುಷರು ಹಾಗೂ 120 ಮಹಿಳೆಯರು ಮತ ಚಲಾಯಿಸಿದ್ದಾರೆ. ಆಲೂರಿನಲ್ಲಿ 66 ಪುರುಷರು ಹಾಗೂ 22 ಮಹಿಳೆ ಯರು ಮತದಾನ ಮಾಡಿದ್ದು, ಶೇ. 89.80ರಷ್ಟು ಮತದಾನವಾಗಿದೆ.

ಸಕಲೇಶಪುರದಲ್ಲಿ ಶೇ.77.30ರಷ್ಟು ಮತ ದಾನವಾಗಿದ್ದು 92 ಪುರುಷರು ಹಾಗೂ 51 ಮಹಿಳೆಯರು ಮತದಾನ ಮಾಡಿದ್ದಾರೆ. ಅರಕಲಗೂಡಿನಲ್ಲಿ 236 ಪುರುಷರು ಹಾಗೂ 92 ಮಹಿಳೆಯರು ಮತದಾನ ಮಾಡಿದ್ದು, ಶೇ.83.25ರಷ್ಟು ಮತದಾನವಾಗಿದೆ.

Translate »