ಶಾಲಾ ಪ್ರಾರಂಭೋತ್ಸವ, ಶೈಕ್ಷಣಿಕ ಜಾಥಾ
ಹಾಸನ

ಶಾಲಾ ಪ್ರಾರಂಭೋತ್ಸವ, ಶೈಕ್ಷಣಿಕ ಜಾಥಾ

June 9, 2018

ಹೊಳೆನರಸೀಪುರ:  ಗ್ರಾಮ ಅಭಿವೃದ್ಧಿಯನ್ನು ಅಲ್ಲಿನ ವಿದ್ಯಾವಂತರ ದೃಢಪಡಿಸುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿ ಕಾರಿ ಎಂ.ಶಿವರಾಜು ಅಭಿಪ್ರಾಯಪಟ್ಟರು.

ಪೇಟೆ-2 ಕ್ಲಸ್ಟರ್ ವ್ಯಾಪ್ತಿಯ ಕಡವಿನ ಹೊಸಹಳ್ಳಿ ಸರ್ಕಾರಿ ಹಿರಿಯ ಪಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ಶಾಲಾ ಪ್ರಾರಂ ಭೋತ್ಸವ ಹಾಗೂ `ಶಾಲೆ ಕಡೆ ನನ್ನ ನಡೆ’ ಶೈಕ್ಷಣ ಕ ಜಾಥಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲಾ ಪೋಷಕರೂ ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸುವುದ ರೊಂದಿಗೆ ಸರ್ಕಾರಿ ಶಾಲೆಗಳ ಸಬಲೀ ಕರಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಸರ್ಕಾರಿ ಶಾಲೆಗಳಲ್ಲಿ ದೊರಕುವ ಸೌಲಭ್ಯ ಸದುಪಯೋಗಪಡಿಸಿಕೊಂಡು ಇಂದು ಅನೇಕರು ಉತ್ತಮ ಮಟ್ಟಕ್ಕೆ ಏರಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಉಚಿತ ಬೈಸಿಕಲ್, ವಿದ್ಯಾರ್ಥಿ ವೇತನ, ಪಠ್ಯಪುಸ್ತಕ, ಲೇಖನ ಸಾಮಗ್ರಿ ವಿತರಣೆ, ಕ್ಷೀರಭಾಗ್ಯ ಮಧ್ಯಾಹ್ನದ ಬಿಸಿಯೂಟ, ಸೇರಿದಂತೆ ಇನ್ನಿತರೆ ಹಲವಾರು ಸವಲತ್ತು ಕಲ್ಪಿಸಲಾಗಿದೆ. ಇದೆಲ್ಲವೂ ಬಳಸಿಕೊಳ್ಳು ವಂತಾಗಬೇಕು ಎಂದರು. ಕಾರ್ಯಕ್ರಮ ದಲ್ಲಿ ಸಂಪನ್ಮೂಲ ವ್ಯಕ್ತಿ ಬಾ.ನಂ ಲೋಕೇಶ್, ಶಿಕ್ಷಣ ಸಂಯೋ ಜಕ ಆರ್.ಉಮೇಶ್, ಶಾಲಾ ಮುಖ್ಯ ಶಿಕ್ಷಕ ಎಂ.ಸಿ.ಕಾಂತರಾಜಪ್ಪ ಮಾತನಾಡಿದರು. ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶೈಕ್ಷಣ ಕ ಜಾಥಾ ನಡೆಸಲಾಯಿತು. ಕಾರ್ಯ ಕ್ರಮದಲ್ಲಿ ಎಸ್‍ಡಿಎಂಸಿ ಅಧ್ಯಕ್ಷ ಮೋಹನ್ ಕುಮಾರ್, ಸದಸ್ಯರಾದ ಸುಜಾತ, ಜ್ಯೋತಿ, ತಾಲೂಕು ಮಾದಿಗ ದಂಡೋರ ಅಧ್ಯಕ್ಷ ಕೆ.ಎಂ.ನಾಗರಾಜು ಇತತರಿದ್ದರು.

Translate »