ಮೈಸೂರು, ಜೂ. 24-ಮೈಸೂರಿನ ಸರ ಸ್ವತಿಪುರಂನಲ್ಲಿರುವ ಮಡಿವಾಳ ಸಂಘದ ಕಚೇರಿಯಲ್ಲಿ ಅಗಸರು ಮತ್ತು ಕ್ಷೌರಿಕರಿ ಗಾಗಿ ಕೋವಿಡ್-19 ಪರಿಹಾರಕ್ಕಾಗಿ ಉಚಿತ ಆನ್‍ಲೈನ್ ಅರ್ಜಿ ಸಲ್ಲಿಸುವ ಸಹಾಯ ಕೇಂದ್ರವನ್ನು ಪ್ರಾರಂಭಿಸಲಾಯಿತು.
ನಗರದ ಬೆಳಕು ಸಂಸ್ಥೆ ಮತ್ತು ವೀರ ಮಡಿವಾಳ ಸಂಘದ ಸಹಯೋಗದೊಂ ದಿಗೆ ಪ್ರಾರಂಭಿಸಿರುವ ಈ ಸಹಾಯ ಕೇಂದ್ರ ವನ್ನು ಬೆಳಕು ಸಂಸ್ಥೆಯ ಸಂಸ್ಥಾಪಕ ಕೆ.ಎಂ.ನಿಶಾಂತ್, ನಗರಪಾಲಿಕೆ ಸದಸ್ಯೆ ವೇದಾವತಿ ಉದ್ಘಾಟಿಸಿದರು.
ನಂತರ ಕೆ.ಎಂ.ನಿಶಾಂತ್ ಮಾತನಾಡಿ, ಲಾಕ್‍ಡೌನ್ ಪರಿಣಾಮ ಸಂಕಷ್ಟಕ್ಕೆ ಸಿಲುಕಿ ರುವ ಅಸಂಘಟಿತ ವಲಯದ ವಿವಿಧ ವರ್ಗದ ಕಾರ್ಮಿಕರಿಗೆ ಸಿಎಂ ಬಿ.ಎಸ್. ಯಡಿಯೂರಪ್ಪ 5000 ರೂ ಪರಿಹಾರ ಘೋಷಿಸಿದ್ದರು. ಅದರಂತೆ ಕಳೆದ ವಾರ ಅಗಸರು ಮತ್ತು ಕ್ಷೌರಿಕರಿಗೂ ಪರಿಹಾರ ಘೋಷಿಸಿದ್ದಾರೆ. ಪರಿಹಾರಕ್ಕಾಗಿ ಅರ್ಜಿ ಸಲ್ಲಿಕೆ ಮಾಡಲು ಲಿಂಕ್ ನೀಡಲಾಗಿದ್ದು, ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಲು ಆಗದವ ರಿಗೆ ಸಹಾಯ ಮಾಡುವ ಉದ್ದೇಶದಿಂದ ಈ ಸಹಾಯ ಕೇಂದ್ರವನ್ನು ತೆರೆಯಲಾಗಿದೆ. ಜೂ.31ರವರೆಗೆ ಪ್ರತಿದಿನ ಬೆಳಗ್ಗೆ 10ರಿಂದ ಸಂಜೆ 5ರ ವರೆಗೆ ಈ ಸಹಾಯ ಕೇಂದ್ರ ಸೇವೆಗೆ ಲಭ್ಯವಿರುತ್ತದೆ ಎಂದರು.
ಪಾಲಿಕೆ ಸದಸ್ಯೆ ವೇದಾವತಿ ಮಾತ ನಾಡಿ, ಹಲವಾರು ಅರ್ಹ ಅರ್ಜಿದಾರರಿಗೆ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಬರು ತ್ತಿಲ್ಲ ಮತ್ತು ಸಾಕಷ್ಟು ಅಂತರ್ಜಾಲ ಕೇಂದ್ರ ಗಳಲ್ಲಿ ಅರ್ಜಿ ಸಲ್ಲಿಸಲು ಹಣ ಪಡೆಯುತ್ತಿ ದ್ದಾರೆ. ಇದರಿಂದ ಸಂಕಷ್ಟದಲ್ಲಿರುವ ಕಾರ್ಮಿಕ ವರ್ಗದವರಿಗೆ ಮತ್ತಷ್ಟು ಸಮಸ್ಯೆಯಾಗು ತ್ತಿದೆ. ಈ ಸಹಾಯ ಕೇಂದ್ರದಿಂದ ಇಂತಹ ವರಿಗೆ ಅನುಕೂಲವಾಗುತ್ತದೆ. ಅಲ್ಲದೆ ಈ ಅರ್ಜಿಯೊಂದಿಗೆ ಉದ್ಯೋಗ ದೃಢೀ ಕರಣ ಪತ್ರವನ್ನೂ ನೀಡಬೇಕಿದ್ದು ಅದನ್ನು ಪಾಲಿಕೆ ಕಂದಾಯ ಅಧಿಕಾರಿಗಳೇ ಖುದ್ದು ಈ ಸಹಾಯ ಕೇಂದ್ರಕ್ಕೆ ಬಂದು ಅರ್ಜಿ ಪರಿಶೀಲಿಸಿ ಸ್ಥಳದಲ್ಲೇ ಸಹಿ ಮಾಡಿಕೊಡುವ ವ್ಯವಸ್ಥೆ ಮಾಡಿರುವುದರಿಂದ ಮತ್ತಷ್ಟು ಅನುಕೂಲವಾಗಲಿದೆ. ಇದನ್ನು ಸದುಪ ಯೋಗಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು. ಮಡಿವಾಳ ಸಂಘದ ನಾಗೇಶ್, ರವಿನಂದನ್, ಬಿಜೆಪಿ ಮುಖಂಡ ಶಿವ ಶಂಕರ್, ಸುನೀಲ್, ಅಭಿಷೇಕ್, ಪಾಲಿಕೆ ಕಂದಾಯ ಅಧಿಕಾರಿಗಳು ಮತ್ತು ಹತ್ತಾರು ಅರ್ಜಿದಾರರು ಉಪಸ್ಥಿತರಿದ್ದರು