ನೈರುತ್ಯ ರೈಲ್ವೇ ಮೈಸೂರು ವಿಭಾಗದಿಂದ ಸರ್ಕಾರಿ ಇ-ಮಾರ್ಕೆಟ್ ಮೂಲಕ ಸರಕು ಸೇವೆ
ಮೈಸೂರು

ನೈರುತ್ಯ ರೈಲ್ವೇ ಮೈಸೂರು ವಿಭಾಗದಿಂದ ಸರ್ಕಾರಿ ಇ-ಮಾರ್ಕೆಟ್ ಮೂಲಕ ಸರಕು ಸೇವೆ

July 23, 2020

ಮೈಸೂರು, ಜು.22(ಆರ್‍ಕೆ)-Gem (Government e-market Place) ಪ್ರೊಕ್ಯೂರ್‍ಮೆಂಟ್ ಮೂಲಕ ಸರಕು ಸಾಗಣೆ ಸೇವೆ ಒದಗಿಸಲು ನೈರುತ್ಯ ರೈಲ್ವೇ ಮೈಸೂರು ವಿಭಾಗವು ಮುಂದಾ ಗಿದೆ. ಸರ್ಕಾರದ ಸಚಿವಾಲಯ ಹಾಗೂ ಇಲಾಖೆಗಳಿಗೆ ಸಂಬಂಧಿಸಿದ ಸರಕು ಮತ್ತು ಸೇವೆ ಪೂರೈಸಲು ತಂತ್ರಾಂಶ ಬಳಸಿಕೊಂಡಿರುವ ರೈಲ್ವೇ ಇಲಾಖೆಯು ಇ-ಮಾರ್ಕೆಟ್ ಪದ್ಧತಿಯನ್ನು ಅಳವಡಿಸಿಕೊಂಡಿದೆ. ಅದರಲ್ಲಿ ಟ್ರಾನ್ಸ್‍ಪೋ ರ್ಟೇಷನ್, ಹೌಸ್ ಕೀಪಿಂಗ್ ಮತ್ತು ಸೆಕ್ಯೂರಿಟಿ ಏಜೆನ್ಸಿಯಂತಹ ಚಟುವಟಿಕೆಗಳನ್ನು ಕಾಗದ ರಹಿತ ಹಾಗೂ ನಗದು ರಹಿತ ಪ್ರಕ್ರಿಯೆಗೊಳಪಡಿಸಲಾಗಿದೆ.

ಮಾರಾಟಗಾರರು ತಾಂತ್ರಿಕ ಸ್ಟೆಸಿಫಿಕೇಷನ್‍ನೊಂದಿಗೆ ತಮ್ಮ ಉತ್ಪನ್ನಗಳನ್ನು ಪೋಸ್ಟ್ ಮಾಡಿ ಸರ್ಕಾರದ ಖರೀದಿದಾರರಿಗೆ ಪೂರೈಸಬಹುದು. ಪ್ರಸ್ತುತ 150 ವರ್ಗದ 7,400ಕ್ಕೂ ಹೆಚ್ಚು ಉತ್ಪನ್ನಗಳು ಮತ್ತು 125 ಸೇವೆಗಳನ್ನು ಉem ಪಟ್ಟಿಯಲ್ಲಿ ಸೇರಿಸಲಾಗಿದೆ. ಇದರಿಂದ ಸೂಕ್ಷ್ಮ, ಸಣ್ಣ ಕೈಗಾರಿಕೆಗಳ ಹಿತ ಕಾಯಬಹುದಾಗಿದೆ ಎಂದು ರೈಲ್ವೇ ಇಲಾಖೆ ಪ್ರಕಟಣೆ ಯಲ್ಲಿ ತಿಳಿಸಲಾಗಿದೆ. ಪ್ರಧಾನಮಂತ್ರಿಗಳ `ಮೇಕ್-ಇನ್-ಇಂಡಿಯಾ’ ಇನಿಷಿಯೇಟಿವ್ ನಂತೆ ಡಿಜಿಟಲ್ ಇಂಡಿಯಾ ಸಂಕಲ್ಪವನ್ನು ಪ್ರೋತ್ಸಾಹಿಸಲು ಸರ್ಕಾರದ ಎಲ್ಲಾ ಖರೀದಿ ದಾರರು ಸರಕು ಮತ್ತು ಸೇವೆಯನ್ನು ಉem ಮೂಲಕವೇ ಪ್ರೊಕ್ಯೂರ್‍ಮೆಂಟ್ ಮಾಡುವುದು ಕಡ್ಡಾಯವಾಗಿದೆ. ಮೈಸೂರು ರೈಲ್ವೇ ವಿಭಾಗವು ಆನ್‍ಲೈನ್ ಮೂಲಕವೇ ಗೂಡ್ಸ್ ಅಂಡ್ ಸರ್ವೀಸ್‍ಗಳನ್ನು ನಡೆಸುವುದನ್ನು ಅನುಷ್ಠಾನಗೊಳಿಸಿದ್ದು, ಇದರಿಂದ ಸರಕು ಮತ್ತು ಸೇವೆ ಬಳಕೆದಾರರ ಸ್ನೇಹಿ (Useಡಿ ಜಿಡಿieಟಿಜಟಥಿ)ಯಾಗಲಿದೆ ಎಂದು ರೈಲ್ವೇ ಇಲಾಖೆಯು ತಿಳಿಸಿದೆ.

Translate »