ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದಿಂದ `ಸೌಹಾರ್ದ’ ಕಾರ್ಯಕ್ರಮ
ಮೈಸೂರು

ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದಿಂದ `ಸೌಹಾರ್ದ’ ಕಾರ್ಯಕ್ರಮ

August 6, 2020

ಮೈಸೂರು,ಆ.5(ಆರ್‍ಕೆಬಿ)-ಅಯೋಧ್ಯಾ ಶ್ರೀರಾಮ ಮಂದಿರ ಶಿಲಾನ್ಯಾಸ ಪ್ರಯುಕ್ತ ಮೈಸೂರಿನ ಶಾರದಾದೇವಿನಗರದ `ಶಾರದಾ ತ್ರಿಶಾಖ ವಿಪ್ರ ಬಳಗ’ದ ಕಚೇರಿ ಯಲ್ಲಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಚಾಮುಡೇಶ್ವರಿ ನಗರ ಮಂಡಲ ವತಿ ಯಿಂದ ಬುಧವಾರ ಸೌಹಾರ್ದ ಕಾರ್ಯ ಕ್ರಮ ಆಯೋಜಿಸಲಾಗಿತ್ತು.

ಬಳಗದ ಕಚೇರಿಗೆ ತೆರಳಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಚಾಮುಂಡೇ ಶ್ವರಿ ನಗರ ಮಂಡಲ ಕಾರ್ಯಕರ್ತರು ಅಲ್ಲಿ ನೆರೆದಿದ್ದ ಹಿಂದೂ ಬಾಂಧವರಿಗೆ ಗುಲಾಬಿ ಹೂ ನೀಡಿ ಶುಭಕೋರಿದರು.

ಪರಸ್ಪರ ಸಿಹಿ ವಿನಿಮಯ ಮಾಡಿ ಕೊಂಡರು. ವಿಪ್ರ ಬಳಗದ ಮುಖಂಡರು ಅಲ್ಪಸಂಖ್ಯಾತ ಮುಖಂಡರನ್ನು ಅಭಿನಂದಿಸಿ ದರು. ಈ ಸಂದರ್ಭ ಮಾತನಾಡಿದ ಚಾಮುಂಡೇಶ್ವರಿ ನಗರ ಮಂಡಲದ ಬಿಜೆಪಿ ಅಧ್ಯಕ್ಷ ಬಿ.ಎಂ.ರಘು, ಬಹುಕಾಲದ ಹೋರಾ ಟದ ಮೂಲಕ ಇಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ವಿಧ್ಯುಕ್ತ ಚಾಲನೆ ದೊರೆತಿದೆ. ಇಂಥ ಸಂದರ್ಭ ದಲ್ಲಿ ರಾಮಜನ್ಮಭೂಮಿ ಮತ್ತು ಮಂದಿರ ನಿರ್ಮಾಣಕ್ಕಾಗಿ ಹೋರಾಡಿದವರನ್ನು ತಪ್ಪದೇ ನೆನೆಯಬೇಕಿದೆ. ಹಿಂದೂಗಳ ಅಸ್ಮಿತೆ ಉಳಿಸುವಲ್ಲಿ ಪ್ರಧಾನಿ ಮೋದಿ ಅವರ ಪಾತ್ರ ಬಹುದೊಡ್ಡದು ಎಂದರು.

ವಿಪ್ರ ಬಳಗದ ಅಧ್ಯಕ್ಷ ಶ್ರೀಧರ ಶರ್ಮಾ, ಮೋರ್ಚಾ ಮಂಡಲ ಪ್ರಧಾನ ಕಾರ್ಯ ದರ್ಶಿ ಹೆಚ್.ಜಿ. ರಾಜಾಮಣಿ, ಈರೇಗೌಡ, ಉಪಾಧ್ಯಕ್ಷ ರಾಕೇಶ್ ಭಟ್, ಮುಖಂಡರಾದ ಸಿಖಂದರ್, ಮುನಾವರ್ ಪಾಷ, ರೋಸಾಲಿನ, ರೂಬಿನ್, ಕೇಬಲ್ ಮಹೇಶ್, ಮಹಿಳಾ ಮೋರ್ಚಾ ಅಧ್ಯಕ್ಷೆ ಶುಭಶ್ರೀ, ಪ್ರಧಾನ ಕಾರ್ಯದರ್ಶಿ ಗೀತಾ ಮಹೇಶ್, ಉಪಾಧ್ಯಕ್ಷೆ ರಶ್ಮಿ ಅನಿಲ್, ಮಹ ದೇವಮ್ಮ, ಯುವ ಮೋರ್ಚಾದ ಸಾಗರ ಸಿಂಗ್ ರಜಪೂತ್, ಅನುಪ್ ಮುತಾಲಿಕ್, ಶ್ರೀಧರ್ ಶರ್ಮ, ಸತ್ಯನಾರಾಯಣ, ಕಾಮಾಕ್ಷಿ ಇನ್ನಿತರರು ಉಪಸ್ಥಿತರಿದ್ದರು.

Translate »