ಮೈಸೂರು ಪಾಲಿಕೆ ಪೌರಕಾರ್ಮಿಕರು, ಇತರೆ ಸಿಬ್ಬಂದಿ ಆರೋಗ್ಯದ ನಿಗಾ ವಹಿಸಿದೆ `ಟೆಲಿವೆರಿಫಿಕೇಷನ್ ಅಂಡ್ ಕಮ್ಯುನಿಕೇಷನ್ ಟೀಮ್’
ಮೈಸೂರು

ಮೈಸೂರು ಪಾಲಿಕೆ ಪೌರಕಾರ್ಮಿಕರು, ಇತರೆ ಸಿಬ್ಬಂದಿ ಆರೋಗ್ಯದ ನಿಗಾ ವಹಿಸಿದೆ `ಟೆಲಿವೆರಿಫಿಕೇಷನ್ ಅಂಡ್ ಕಮ್ಯುನಿಕೇಷನ್ ಟೀಮ್’

August 5, 2020

ಮೈಸೂರು, ಆ.4-ಕೊರೊನಾ ಸಂಕಷ್ಟದಲ್ಲೂ ಮೈಸೂ ರಿನ ಸ್ವಚ್ಛತಾ ಕಾರ್ಯದಲ್ಲಿ ಕರ್ತವ್ಯ ಪ್ರಜ್ಞೆ ಮೆರೆಯು ತ್ತಿರುವ ಪೌರಕಾರ್ಮಿಕರು ಹಾಗೂ ಪಾಲಿಕೆ ಸಿಬ್ಬಂದಿ ಆರೋಗ್ಯ ಸುರಕ್ಷೆ ನಿಟ್ಟಿನಲ್ಲಿ ಮೈಸೂರು ಪಾಲಿಕೆ `ಟೆಲಿ ವೆರಿಫಿಕೇಷನ್ ಹಾಗೂ ಕಮ್ಯುನಿಕೇಷನ್’ ತಂಡ ರಚಿಸಿದೆ.

ಕೊರೊನಾ ವಾರಿಯರ್ಸ್‍ಗಳಾಗಿರುವ ಪೌರಕಾರ್ಮಿ ಕರ ಹಿತ ಕಾಯುವುದು ಅತೀ ಅವಶ್ಯವಾಗಿದ್ದು, ಅವ ರನ್ನು ಕೊರೊನಾ ಮಹಾಮಾರಿಯಿಂದ ರಕ್ಷಿಸುವ ಸಲು ವಾಗಿ ಅವರ ಆರೋಗ್ಯ ಮಾಹಿತಿ ಸಂಗ್ರಹಕ್ಕೆ ವೈಜ್ಞಾನಿಕ ವಿಧಾನ ಅನುಸರಿಸಲಾಗುತ್ತಿದೆ. ಸ್ವಚ್ಛತೆ ಮೂಲಕ ಪೌರ ಕಾರ್ಮಿಕರು ಮೈಸೂರಿಗರ ಆರೋಗ್ಯ ಕಾಪಾಡುವಲ್ಲಿ ತಮ್ಮದೇ ಆದ ಪ್ರಮುಖ ಸೇವೆ ಸಲ್ಲಿಸುತ್ತಿದ್ದಾರೆ.

ಇತ್ತೀಚೆಗೆ ಮೈಸೂರಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಕಂಟೇನ್ಮೆಂಟ್ ಜೋನ್‍ಗಳ ಸಂಖ್ಯೆಯೂ ಹೆಚ್ಚುತ್ತಿದೆ. ಪ್ರತಿ ಬಡಾವಣೆಯಲ್ಲೂ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಇಂತಹ ಸಂದರ್ಭ ದಲ್ಲೂ ಪೌರ ಕಾರ್ಮಿಕರು ಮಾತ್ರ ತಮ್ಮ ಜೀವವನ್ನು ಪಣಕ್ಕಿಟ್ಟು ಸೇವೆ ಮುಂದುವರೆಸಿದ್ದಾರೆ.

ಕೊರೊನಾ ಸೋಂಕಿಗೆ ಬೆಚ್ಚಿ ಬೀಳುವ ಜನರ ನಡುವೇ ಪೌರಕಾರ್ಮಿಕರ ಅವಿರತ ಸೇವೆ ಸ್ಮರ ಣೀಯ. ಮೈಸೂರು ನಗರದಲ್ಲಿ ತ್ವರಿತವಾಗಿ ಕೊರೊನಾ ಹರಡುವುದನ್ನು ತಡೆಗಟ್ಟುವಲ್ಲಿ ಪೌರಕಾರ್ಮಿಕರ ಪಾತ್ರವೂ ಇದೆ. ಈ ಹಿನ್ನೆಲೆಯಲ್ಲಿ ಮೈಸೂರು ನಗರ ಪಾಲಿಕೆ `ಟೆಲಿವೆರಿಫಿಕೇಷನ್ ಹಾಗೂ ಕಮ್ಯುನಿಕೇಷನ್ ಟೀಮ್’ ರಚಿಸಿ, ಪ್ರತಿ ಪೌರಕಾರ್ಮಿಕ ಸಿಬ್ಬಂದಿ, ಜೊತೆಗೆ ಪಾಲಿಕೆ ಇತರ ಸಿಬ್ಬಂದಿಯ ಆರೋಗ್ಯ ಮಾಹಿತಿ ಸಂಗ್ರಹಿಸಲು ಮುಂದಾಗಿರುವುದು ಸಾರ್ವಜನಿಕ ವಲಯದಿಂದ ಮೆಚ್ಚುಗೆಗೆ ಪಾತ್ರವಾಗಿದೆ.

ವೈದ್ಯಕೀಯ ವಿದ್ಯಾರ್ಥಿಗಳೇ ಸ್ವಯಂಸೇವಕರು: ನಗರ ಪಾಲಿಕೆ ರಚಿಸಲಾಗಿರುವ `ಟೆಲಿವೆರಿಫಿಕೇಷನ್ ಹಾಗೂ ಕಮ್ಯುನಿಕೇಷನ್ ಟೀಮ್’ ಪಾಲಿಕೆ ಆಯುಕ್ತ ಗುರು ದತ್ತ ಹೆಗಡೆ ಮಾರ್ಗದರ್ಶನ, ಆರೋಗ್ಯಾಧಿಕಾರಿ ಡಾ.ಡಿ.ಜಿ.ನಾಗರಾಜು ನೇತೃತ್ವದಲ್ಲಿ ಕಾರ್ಯ ನಿರ್ವ ಹಿಸುತ್ತಿದೆ. ಶಿವಮೊಗ್ಗ ಮೆಡಿಕಲ್ ಕಾಲೇಜಿನ ಮೊದಲ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿಯಾಗಿರುವ ಮೈಸೂ ರಿನ ವಿದ್ಯಾರಣ್ಯಪುರಂ ನಿವಾಸಿ ಇಶಾ, ಹಾಸನದ ರಾಜೀವ್ ಇನ್ಸ್‍ಸ್ಟಿಟ್ಯೂಟ್ ಆಫ್ ಆಯುರ್ವೇದಿಕ್ ಮೆಡಿಕಲ್ ಸೈನ್ಸ್ ಕಾಲೇಜಿನ ಮೊದಲ ವರ್ಷದ ವಿದ್ಯಾರ್ಥಿನಿ, ಮೈಸೂರಿನ ಕೃಷ್ಣಮೂರ್ತಿಪುರಂ ನಿವಾಸಿ ಸ್ಪಂದನಾ, ಮಹಾರಾಣಿ ವಾಣಿಜ್ಯ ಕಾಲೇಜಿನ ಎರಡನೇ ವರ್ಷದ ಬಿಬಿಎ ಹಾಗೂ ಎನ್‍ಎಸ್‍ಎಸ್ ವಿದ್ಯಾರ್ಥಿನಿ ಟಿ.ವಿ. ರೂಪ, ಊಟಿ ರಸ್ತೆಯ ಜೆಎಸ್‍ಎಸ್ ಕಾಲೇಜಿನ ಎನ್‍ಎಸ್‍ಎಸ್ ವಿದ್ಯಾರ್ಥಿ ನಿರಂಜನ್, ಅಂತಿಮ ಬಿಕಾಂ ವಿದ್ಯಾರ್ಥಿ ರಕ್ಷಿತ್, ಪಿಯುಸಿ ಪರೀಕ್ಷೆ ಬರೆದಿರುವ ಕಿರಣ್ ಹಾಗೂ ಎನ್‍ಎಸ್‍ಎಸ್ ವಿದ್ಯಾರ್ಥಿ ಸಚಿನ್ ರಾಜು ಈ ತಂಡದಲ್ಲಿ ಸ್ವಯಂ ಸೇವಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ತಂಡದ ಕಾರ್ಯವೈಖರಿ: ಈ ತಂಡದ 8 ಸ್ವಯಂ ಸೇವಕರಿಗೆ ಪುರಭವನದ ಅಧ್ಯಕ್ಷರ ಕೊಠಡಿಯಲ್ಲಿ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಲಾಗಿದೆ. ಪ್ರತಿದಿನ ಬೆಳಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ಈ ತಂಡ ಕಾರ್ಯನಿರ್ವಹಿಸಲಿದ್ದು, ಎಲ್ಲಾ ಸ್ವಯಂಸೇವಕರಿಗೂ ಪಾಲಿಕೆ ವತಿಯಿಂದ ಸಿಮ್‍ಕಾರ್ಡ್ ನೀಡಲಾಗಿದೆ. ಪಾಲಿಕೆ ಯಲ್ಲಿ ಕೆಲಸ ಮಾಡುವ 575 ಖಾಯಂ ಪೌರಕಾರ್ಮಿ ಕರು, 1700 ಗುತ್ತಿಗೆ ಪೌರಕಾರ್ಮಿಕರು, ಒಳಚರಂಡಿ ವಿಭಾಗದಲ್ಲಿ ಕೆಲಸ ಮಾಡುವ 231 ಪೌರಕಾರ್ಮಿಕರ ಪಟ್ಟಿ ಹಾಗೂ ಮೊಬೈಲ್ ಸಂಖ್ಯೆ ನೀಡಲಾಗಿದೆ. ಇದರೊಂ ದಿಗೆ ಪಾಲಿಕೆ ಮುಖ್ಯ ಕಚೇರಿ ಹಾಗೂ 9 ವಲಯ ಕಚೇರಿ ಯಲ್ಲಿ ಕೆಲಸ ಮಾಡುವ ಸುಮಾರು 600ಕ್ಕೂ ಹೆಚ್ಚು ಸಿಬ್ಬಂದಿಯ ಪಟ್ಟಿ ಹಾಗೂ ಮೊಬೈಲ್ ಸಂಖ್ಯೆ ನೀಡಲಾಗಿದೆ. ಈ ತಂಡದ ಸ್ವಯಂ ಸೇವಕರು ಪ್ರತಿದಿನ ಪೌರಕಾರ್ಮಿ ಕರು, ಪಾಲಿಕೆ ಸಿಬ್ಬಂದಿಗೆ ಕರೆ ಮಾಡಿ, ಆರೋಗ್ಯ ವಿಚಾ ರಿಸಿ, ದಾಖಲೀಕರಿಸುತ್ತಾರೆ. ಅಲ್ಲದೆ ಪ್ರತಿಯೊಬ್ಬರಿಗೂ ಕರೆ ಮಾಡಿ ಹೆಸರು, ವಿಳಾಸ, ವಯಸ್ಸು, ಸೋಂಕಿನ ಲಕ್ಷಣ ಇರುವ ಬಗ್ಗೆ ವಿಚಾರಿಸುತ್ತಾರೆ. ಕೊರೊನಾ ಲಕ್ಷಣ ಮಾತ್ರವಲ್ಲದೆ, ಹೃದಯ ಸಂಬಂಧಿ ಖಾಯಿಲೆ, ಉಸಿ ರಾಟ ಸಮಸ್ಯೆ, ಕೆಮ್ಮು, ಅಸ್ತಮಾ, ಬಿಪಿ, ಶುಗರ್ ಸೇರಿದಂತೆ ಬೇರ್ಯಾವುದೇ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೆ, ಅವುಗಳ ಮಾಹಿತಿಯನ್ನೂ ಕಲೆ ಹಾಕಿ, ಪ್ರತ್ಯೇಕ ಪಟ್ಟಿ ಮಾಡುತ್ತಾರೆ. ಯಾರಿಗಾದರೂ ಜ್ವರ, ಕೆಮ್ಮು, ನೆಗಡಿ ಸೇರಿದಂತೆ ಕೊರೊನಾ ಲಕ್ಷಣ ಕಂಡು ಬಂದರೆ ಉಚಿತ ವಾಗಿ ಸ್ವ್ಯಾಬ್ ಟೆಸ್ಟ್ ಮಾಡಿಸುವ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡುವುದರೊಂದಿಗೆ ಆತ್ಮಸ್ಥೈರ್ಯ ತುಂಬುತ್ತಿದ್ದಾರೆ.

ಎಂ.ಟಿ.ಯೋಗೇಶ್ ಕುಮಾರ್

Translate »