`ವಿದ್ಯಾಗಮ’ ಯೋಜನೆಯಡಿ ಶೈಕ್ಷಣಿಕ ಚಟುವಟಿಕೆ ಆರಂಭಿಸಿ: ಡಿಡಿಪಿಐ ಆದೇಶ
ಮೈಸೂರು

`ವಿದ್ಯಾಗಮ’ ಯೋಜನೆಯಡಿ ಶೈಕ್ಷಣಿಕ ಚಟುವಟಿಕೆ ಆರಂಭಿಸಿ: ಡಿಡಿಪಿಐ ಆದೇಶ

August 6, 2020

ಮೈಸೂರು, ಆ.5(ಎಸ್‍ಪಿಎನ್)- ಕೊರೊನಾದಿಂದಾಗಿ ಶಾಲಾ-ಕಾಲೇಜು ಮುಚ್ಚುವಂತೆ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದ್ದರೂ ಮೈಸೂರು ಜಿಲ್ಲೆಯ ಶಿಕ್ಷಕರು ಮತ್ತು ಅಧಿಕಾರಿಗಳು ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಿ, `ವಿದ್ಯಾಗಮ’ ಯೋಜನೆಯಡಿ ಶೈಕ್ಷಣಿಕ ಚಟುವಟಿಕೆಗಳನ್ನು ಆರಂಭಿಸಬೇಕು ಎಂದು ಡಿಡಿಪಿಐ ಪಾಂಡುರಂಗ ಆದೇಶಿಸಿದ್ದಾರೆ.

ಈ ಬಗ್ಗೆ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಅವರು, ಕೊರೊನಾ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನ ಶೈಕ್ಷಣಿಕ ಚಟುವಟಿಕೆ ಗಳನ್ನು ಆರಂಭಿಸುವುದು ತಡವಾಗಿದೆ. ಹಾಗಾಗಿ ಶಿಕ್ಷಕರು, ಸೂಕ್ತ ಸ್ಥಳ ಆಯ್ಕೆ ಮಾಡಿಕೊಂಡು ಪಾಠ-ಪ್ರವಚನ ಆರಂಭಿಸಿದ ಬಗ್ಗೆ ಆ.4ರಂದು ಶಿಕ್ಷಣ ಇಲಾಖೆ ಹೊರಡಿಸಿದ ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ ಎಂದರು. ಕೊರೊನಾದಿಂದಾಗಿ ಶಾಲಾ-ಕಾಲೇಜು ಹಾಗೂ ತರಬೇತಿ ಕೇಂದ್ರಗಳನ್ನು ಆ.31ರವರೆಗೆ ಮುಚ್ಚ ಬೇಕೆಂದು ಆದೇಶಿಸಿದ್ದರೂ ಪರ್ಯಾಯವಾಗಿ `ವಿದ್ಯಾಗಮ’ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ. ಇದನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು ಹಾಗೂ ಇದರ ಮೇಲುಸ್ತು ವಾರಿಯನ್ನು ಬಿಇಒಗಳು ವಹಿಸಬೇಕು ಎಂದು ತಿಳಿಸಿದ್ದಾರೆ.

Translate »