ಅನಧಿಕೃತ ಶೆಡ್ ತೆರವು; 40 ಲಕ್ಷ ರೂ. ಬೆಲೆಯ ನಿವೇಶನ ಮುಡಾ ವಶ
ಮೈಸೂರು

ಅನಧಿಕೃತ ಶೆಡ್ ತೆರವು; 40 ಲಕ್ಷ ರೂ. ಬೆಲೆಯ ನಿವೇಶನ ಮುಡಾ ವಶ

August 6, 2020

ಮೈಸೂರು, ಆ.5(ಎಸ್‍ಪಿಎನ್)- ಅನಧಿಕೃತವಾಗಿ ಶೆಡ್ ನಿರ್ಮಿಸಿಕೊಂಡು ವಾಸವಿದ್ದ ವ್ಯಕ್ತಿಯಿಂದ ಅಂದಾಜು 40 ಲಕ್ಷ ರೂ. ಮೌಲ್ಯದ ನಿವೇ ಶನ(6.40x 9.40 ಮೀಟರ್) ವನ್ನು ಮುಡಾ ಅಧಿಕಾರಿಗಳು ಬುಧವಾರ ವಶಪಡಿಸಿಕೊಂಡಿದ್ದಾರೆ.

ಗೋಕುಲಂ 2ನೇ ಹಂತದ ಮುಡಾ ನಿವೇಶನ(ಸಂ. 294) ದಲ್ಲಿ ಬಸವಣ್ಣ ಎಂಬಾತ ಹಲವು ವರ್ಷಗಳಿಂದ ಅನಧಿಕೃತವಾಗಿ ಶೆಡ್ ನಿರ್ಮಿಸಿಕೊಂಡು ವಾಸವಿದ್ದರು. ನಿವೇಶನ ಸಂಬಂಧ ಬಸವಣ್ಣ ಕೋರ್ಟ್‍ನಲ್ಲಿ ದೂರು ದಾಖಲಿಸಿದ್ದು, ಸೂಕ್ತ ದಾಖಲಾತಿ ಒದಗಿಸುವಲ್ಲಿ ವಿಫಲವಾದರು. ಈ ಸಂದರ್ಭದಲ್ಲಿ ವಲಯಾಧಿಕಾರಿ ಹೆಚ್.ಪಿ. ಶಿವಣ್ಣ ಹಾಗೂ ಅಭಿಯಂತರರಾದ ನಾಗರಾಜು ಹಾಗೂ ಸಿಬ್ಬಂದಿ ಸ್ಥಳದಲ್ಲಿ ಹಾಜರಿದ್ದರು. 1974 ರ ಕರ್ನಾಟಕ ಸಾರ್ವಜನಿಕ ಆವರಣ (ಅನಧಿಕೃತ ಅನುಭವದಾರರ ಎತ್ತಂಗಡಿ) ಕಾಯ್ದೆಯಡಿ ನಿವೇಶನ ತೆರವುಗೊಳಿಸಿ ಪ್ರಾಧಿಕಾರದ ವಶಕ್ಕೆ ಪಡೆದು ಫಲಕ ಅಳವಡಿಸಲಾಯಿತು. ಈ ನಿವೇಶನವನ್ನು ಹರಾಜಿಗೆ ಒಳಪಡಿಸಲು ಮುಡಾ ಆಯುಕ್ತ ಡಿ.ಬಿ.ನಟೇಶ್ ನಿರ್ದೇಶಿಸಿದ್ದಾರೆ.

Translate »