ಮೈಸೂರಲ್ಲಿ ಮಳೆ, ವಾಹನ ಸಂಚಾರಕ್ಕೆ ಪರದಾಟ
ಮೈಸೂರು

ಮೈಸೂರಲ್ಲಿ ಮಳೆ, ವಾಹನ ಸಂಚಾರಕ್ಕೆ ಪರದಾಟ

August 6, 2020

ಮೈಸೂರು, ಆ.5(ಆರ್‍ಕೆ)- ಕೊಡಗು ಸುತ್ತಮುತ್ತ ಕಾವೇರಿ ಕಣಿವೆಯಲ್ಲಿ ಭಾರೀ ಮಳೆಯಾಗಿದ್ದು, ನದಿಗಳು ತುಂಬಿ ಹರಿಯುತ್ತಿವೆ. ಮೈಸೂರಿನ ಲ್ಲಿಯೂ ಬುಧವಾರ ಭಾರೀ ಮಳೆ ಸುರಿಯಿತು. ಹವಾಮಾನ ಇಲಾಖೆ ಮುನ್ಸೂಚನೆಯಂತೆ ಮಂಗಳವಾರ ಆರಂಭವಾದ ಮಳೆ ಬುಧವಾರವೂ ಮುಂದು ವರಿಯಿತು. ನಗರದಲ್ಲಿ ಬುz sÀವಾರ ದಿನದ ಬಹುತೇಕ ಭಾಗ ದಟ್ಟ ಮೋಡ ಕವಿದಿತ್ತು. ಬೆಳಗ್ಗೆ ಜಿಟಿಜಿಟಿ ಎಂದು ಶುರುವಾದ ಮಳೆ ಮಧ್ಯೆ ಮಧ್ಯೆ ವಿರಾಮ ನೀಡುತ್ತಲೇ ರಾತ್ರಿವರೆಗೂ ಸುರಿಯಿತು. ಪರಿಣಾಮ ಜನ-ವಾಹನ ಸಂಚಾರಕ್ಕೆ ಸ್ವಲ್ಪ ಅಡ್ಡಿಯಾಯಿತು. ಕಚೇರಿ, ಉದ್ದಿಮೆ, ಕಾರ್ಖಾನೆಗೆ ಹೋಗುವವರು, ಕೃಷಿ ಕಾರ್ಮಿಕರ ಓಡಾಟಕ್ಕೆ ಅಡಚಣೆಯಾಯಿತು.

ಜನರು ಮನೆಯಿಂದ ಹೊರ ಬರಲಾರದ್ದರಿಂದ ಬಂಡಿಪಾಳ್ಯ ಎಪಿಎಂಸಿ ಯಾರ್ಡ್, ದೇವರಾಜ ಮಾರುಕಟ್ಟೆಗಳಲ್ಲಿ ವ್ಯಾಪಾರವಿಲ್ಲದೆ ವರ್ತಕರು ಪರದಾಡುವಂತಾಯಿತು. ಕೂಲಿ ಕಾರ್ಮಿಕರು, ರಸ್ತೆಬದಿ ಅಂಗಡಿ, ಚಾಟ್ಸ್, ಫಾಸ್ಟ್‍ಫುಡ್ ವ್ಯಾಪಾರಕ್ಕೂ ಮಳೆಯಿಂದ ತೊಂದರೆಯಾಯಿತು. ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಿಂದಾಗಿ ಕಬಿನಿ, ಕೆಆರ್‍ಎಸ್, ಹಾರಂಗಿ ಜಲಾಶಯಗಳಿಗೆ ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿದೆ. ಮುಂಜಾ ಗ್ರತೆಯಾಗಿ ಹೆಚ್ಚುವರಿ ನೀರನ್ನು ನದಿಗಳ ಮೂಲಕ ಹೊರಬಿಡುತ್ತಿದ್ದು, ನದಿಪಾತ್ರದ ನಿವಾಸಿಗಳು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.

Translate »