ಶಾಸಕ ಜಿ.ಟಿ.ದೇವೇಗೌಡರಿಗೂ ಕೊರೊನಾ ಪಾಸಿಟಿವ್
ಮೈಸೂರು

ಶಾಸಕ ಜಿ.ಟಿ.ದೇವೇಗೌಡರಿಗೂ ಕೊರೊನಾ ಪಾಸಿಟಿವ್

August 6, 2020

ಸಂಪರ್ಕದಲ್ಲಿದ್ದವರು ಪರೀಕ್ಷೆಗೆ ಒಳಪಟ್ಟು ಕ್ವಾರಂಟೈನ್ ಆಗಲು ಜಿಟಿಡಿ ಕೋರಿಕೆ

ಮೈಸೂರು, ಆ.5(ಪಿಎಂ)- ಮಾಜಿ ಸಚಿವರೂ ಆದ ಚಾಮುಂ ಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಅವರಿಗೆ ಕೊರೊನಾ ಪರೀಕ್ಷಾ ವರದಿ ಪಾಸಿಟಿವ್ ಬಂದಿದೆ.

ಈ ಸಂಬಂಧ ಟ್ವಿಟ್ ಮಾಡಿರುವ ಅವರು, ನಾನು ಕೋವಿಡ್-19 ಪರೀಕ್ಷೆಗೆ ಒಳಗಾಗಿದ್ದೆ. ವರದಿ ಪಾಸಿಟಿವ್ ಬಂದಿದೆ. ನನಗೆ ಯಾವುದೇ ರೋಗ ಲಕ್ಷಣಗಳು ಇಲ್ಲ. ಆದರೂ ವೈದ್ಯರ ಸಲಹೆ ಮೇರೆಗೆ ಮನೆಯಲ್ಲಿ ಪ್ರತ್ಯೇಕವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಕಳೆದ ಏಳು ದಿನಗಳಿಂದ ನನ್ನ ಸಂಪರ್ಕಕ್ಕೆ ಬಂದಿ ರುವವರು ಕೊರೊನಾ ಪರೀಕ್ಷೆಗೆ ಒಳಪಟ್ಟು, ಕೂಡಲೇ ಕ್ವಾರಂಟೈನ್ ಆಗುವ ಜೊತೆಗೆ ಎಲ್ಲಾ ಮುನ್ನಚ್ಚರಿಕೆ ವಹಿಸುವಂತೆ ಶಾಸಕ ಜಿ.ಟಿ.ದೇವೇಗೌಡ ಅವರು ಕೋರಿದ್ದಾರೆ.

Translate »