ಆನ್‍ಲೈನ್, ಸಾಮಾನ್ಯ ಸೇವಾ ಕೇಂದ್ರಗಳಲ್ಲೇ ಇಪಿಎಫ್ ಗ್ರಾಹಕರಿಗೆ ಸೇವೆ
ಮೈಸೂರು

ಆನ್‍ಲೈನ್, ಸಾಮಾನ್ಯ ಸೇವಾ ಕೇಂದ್ರಗಳಲ್ಲೇ ಇಪಿಎಫ್ ಗ್ರಾಹಕರಿಗೆ ಸೇವೆ

August 6, 2020

ಮೈಸೂರು, ಆ.5(ಆರ್‍ಕೆ)-ಕೊರೊನಾ ವೈರಸ್ ಸೋಂಕು ಹರಡುವ ಆತಂಕದಿಂದಾಗಿ ಮೈಸೂರಿನ ಗಾಯತ್ರಿಪುರಂ ನಲ್ಲಿರುವ ಕಾರ್ಮಿಕರ ಭವಿಷ್ಯ ನಿಧಿ (ಇಪಿಎಫ್)ಕ್ಷೇತ್ರೀಯ ಕಚೇರಿಗೆ ಗ್ರಾಹಕರ ಪ್ರವೇಶವನ್ನು ನಿಷೇಧಿಸಲಾಗಿದೆ.

ಕಚೇರಿ ಮೇನ್ ಗೇಟ್ ಬಂದ್ ಮಾಡಿ ಬೀಗ ಹಾಕಲಾಗಿದ್ದು, ಅಧಿಕಾರಿಗಳು, ಸಿಬ್ಬಂದಿ ಹೊರತುಪಡಿಸಿ ಗ್ರಾಹಕರು ಹಾಗೂ ಸಾರ್ವಜನಿಕರಿಗೆ ಪ್ರವೇಶಾವಕಾಶವಿರುವುದಿಲ್ಲ. ಆದರೆ ಗೇಟ್ ಬಳಿ ಭದ್ರತಾ ಸಿಬ್ಬಂದಿಯೋರ್ವರನ್ನು ನಿಯೋಜಿಸಿದ್ದು, ಸ್ಥಳದಲ್ಲಿ ಡ್ರಾಪ್ ಬಾಕ್ಸ್ ಇರಿಸಲಾಗಿದೆ. ಜಾಯಿಂಟ್ ಡಿಕ್ಲರೇಷನ್, ಫಿಸಿಕಲ್ ಲೈಫ್, ಸರ್ಟಿಫಿಕೇಟ್ ಇಪಿಎಫ್ ಕ್ಲೇಮುಗಳು, ಹೆಸರು, ವಿಳಾಸ ತಿದ್ದುಪಡಿ, ಪಿಎಫ್ ಹಣ ಸಂಪೂರ್ಣ ಅಥವಾ ಭಾಗಶಃ ಹಿಂಪಡೆ ಯುವುದು, ಆಧಾರ ಮತ್ತು ಪಾನ್ ಕಾರ್ಡ್ ಜೋಡಣೆಯಂತಹ ಪ್ರಕ್ರಿಯೆ ಅರ್ಜಿಗಳನ್ನು ಡ್ರಾಪ್ ಬಾಕ್ಸ್‍ನಲ್ಲಿ ಅಗತ್ಯ ಪೂರಕ ದಾಖ ಲಾತಿಗಳೊಂದಿಗೆ ಹಾಕಲು ವ್ಯವಸ್ಥೆ ಕಲ್ಪಿಸಲಾಗಿದೆ.

ಅಲ್ಲದೆ ಇಪಿಎಫ್‍ಗೆ ಸಂಬಂಧಿಸಿದಂತೆ ಎಲ್ಲಾ ಪ್ರಕ್ರಿಯೆಗಳನ್ನು ಆನ್‍ಲೈನ್ ಮೂಲಕವೇ ನಡೆಸಲು ಇಪಿಎಫ್ ಆಯುಕ್ತರು ಸೌಲಭ್ಯ ಕಲ್ಪಿಸಿದ್ದು, ಮೈಸೂರು ನಗರ ಮತ್ತು ಜಿಲ್ಲೆಯಾದ್ಯಂತ ಅಲ್ಲಲ್ಲಿ ಸಾಮಾನ್ಯ ಸೇವಾ ಕೇಂದ್ರ (ಅommoಟಿ Seಡಿviಛಿe ಅeಟಿಣಡಿe) ಗಳನ್ನು ತೆರೆದಿದ್ದು, ಗ್ರಾಹಕರು ಅಲ್ಲಿಯೇ ಅರ್ಜಿ ಸಲ್ಲಿಸಿ ಸೇವೆ ಪಡೆಯಲು ಅನುಕೂಲ ಕಲ್ಪಿಸಿದ್ದಾರೆ.

ವಿತ್‍ಡ್ರಾಲ್, ತಿದ್ದುಪಡಿ, ಆಧಾರ್ ಲಿಂಕ್, ಲೈಫ್ ಸರ್ಟಿಫಿ ಕೇಟ್ ಪಡೆಯುವ ಕುರಿತಂತೆ ದಿನಕ್ಕೆ 150ರಿಂದ 200 ಮಂದಿ ಕಚೇರಿ ಬಳಿಗೆ ಬರುತ್ತಿದ್ದು, 600ರಿಂದ 700 ವಿಚಾರಣಾ ಕರೆ ಗಳು ಬರುತ್ತಿವೆ. ಎಲ್ಲಾ ಪ್ರಕ್ರಿಯೆಗಳನ್ನು ಆನ್‍ಲೈನ್‍ನಲ್ಲೇ ಮಾಡು ತ್ತಿರುವುದರಿಂದ ಗ್ರಾಹಕರು ಕಚೇರಿಗೆ ಬಾರದೇ ತಮ್ಮ ಬಡಾ ವಣೆಗೆ ಹತ್ತಿರದಲ್ಲಿರುವ ಕಾಮನ್ ಸರ್ವೀಸ್ ಸೆಂಟರ್‍ನಲ್ಲೇ ಸೇವೆಯನ್ನು ಪಡೆಯುವಂತೆ ಸಂಸ್ಥೆಯು ಸಲಹೆ ನೀಡಿದೆ.

Translate »