ಮುಡಾ ಸಿಎ ನಿವೇಶನಗಳಿಗೆ ಸೆ.25ರಿಂದ  ಅ.30ರವರೆಗೆ ಅರ್ಜಿ ಸಲ್ಲಿಸಲು ಅವಕಾಶ
ಮೈಸೂರು

ಮುಡಾ ಸಿಎ ನಿವೇಶನಗಳಿಗೆ ಸೆ.25ರಿಂದ ಅ.30ರವರೆಗೆ ಅರ್ಜಿ ಸಲ್ಲಿಸಲು ಅವಕಾಶ

September 19, 2021

ಮೈಸೂರು,ಸೆ.18(ಆರ್‍ಕೆ)-ಮೈಸೂರು ನಗರಾಭಿವೃದ್ಧಿ ಪ್ರಾಧಿ ಕಾರದಿಂದ ಹಂಚಿಕೆ ಮಾಡಲುದ್ದೇಶಿಸಿರುವ 301 ಸಿಎ ನಿವೇಶನ ಗಳಿಗೆ ಅರ್ಹ ಸಂಘ-ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಮುಡಾ ಕಚೇರಿ ಸಭಾಂಗಣದಲ್ಲಿ ಶನಿವಾರ ಸುದ್ದಿಗೋಷ್ಠಿ ಯಲ್ಲಿ ಈ ವಿಷಯ ತಿಳಿಸಿದ ಪ್ರಾಧಿಕಾರದ ಅಧ್ಯಕ್ಷ ಹೆಚ್.ವಿ. ರಾಜೀವ್, ಕಚೇರಿಯ ಸ್ಪಂದನ ಕೌಂಟರ್‍ನಲ್ಲಿ 1,000 ರೂ. ಶುಲ್ಕ ಪಾವತಿಸಿ ಸೆಪ್ಟೆಂಬರ್ 23ರಿಂದ ಅಕ್ಟೋಬರ್ 22ರವರೆಗೆ ಪಡೆದ ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಸೆಪ್ಟೆಂಬರ್ 25ರಿಂದ ಅಕ್ಟೋಬರ್ 30ರೊಳಗಾಗಿ ಸ್ಪಂದನ ಕೌಂಟರ್‍ನಲ್ಲಿ ಸಲ್ಲಿಸಿ ಸ್ವೀಕೃತಿ ಪಡೆಯಬಹುದೆಂದು ತಿಳಿಸಿದರು.
ಧ್ಯೇಯೋದ್ದೇಶಗಳಿಗೆ ಮೀಸಲಿರಿಸಿರುವ ಸಿಎ ನಿವೇಶನಗಳಿಗೆ ಮಾತ್ರ ಸಂಘ-ಸಂಸ್ಥೆಗಳು ಅರ್ಜಿ ಸಲ್ಲಿಸಬೇಕು. ನೋಂದಣಿ ಶುಲ್ಕ ಮತ್ತು ಪ್ರಾರಂಭಿಕ ಠೇವಣಿಯನ್ನು ಪ್ರತ್ಯೇಕವಾಗಿ ಮುಡಾ ಅಯು ಕ್ತರ ಹೆಸರಲ್ಲಿ ಡಿಡಿ. ಅಥವಾ ಆರ್‍ಟಿಜಿಎಸ್/ ಓeeಣ ಮೂಲಕ IಈSಅ: ಃಂಖಃಔಗಿಎಒUಆಂ, ಅಕೌಂಟ್ ನಂ. 892601 00004791ಗೆ ಬ್ಯಾಂಕ್ ಆಫ್ ಬರೋಡಾ, ಮುಡಾ ಶಾಖೆಗೆ ಸಂದಾಯ ಮಾಡಿ ಶಾಖೆಗೆ ಸಂದಾಯ ಮಾಡಿ ಅದರ Uಖಿಖ ಸಂಖ್ಯೆಯನ್ನು ಅರ್ಜಿಯಲ್ಲಿ ನಮೂದಿಸಬೇಕು ಎಂದು ತಿಳಿಸಿದರು.

ಮೂರು ವರ್ಷದ ವಾರ್ಷಿಕ ವರದಿ, ಲೆಕ್ಕಪರಿಶೋಧಕರ ವರದಿ, ಬ್ಯಾಂಕ್ ಖಾತೆ ಪ್ರತಿ, ಬೈಲಾ, ಸಿಎ ನಿವೇಶನ ಪಡೆಯಲು ಸಂಘ ಕೈಗೊಂಡಿರುವ ನಿರ್ಣಯದ ಪ್ರತಿಯನ್ನು ಅರ್ಜಿ ಜೊತೆ ಲಗತ್ತಿಸಬೇಕು. ಕರ್ನಾಟಕ ಸಹಕಾರ ಸಂಘಗಳ ನೊಂದಣಿ ಕಾಯ್ದೆ 1959ರಡಿ, ಇಂಡಿಯನ್ ಟ್ರಸ್ಟ್ ಕಾಯ್ದೆ, ಸೌಹಾರ್ದ ಸಹಕಾರ ಅಧಿನಿಯಮ 2001ರಡಿ ನೋಂದಣಿಯಾಗಿರುವ ಸಂಸ್ಥೆಗಳಿಗೆ ಮಾತ್ರ 30 ವರ್ಷದ ಅವಧಿಗೆ ಗುತ್ತಿಗೆ ಆಧಾರದಲ್ಲಿ ಸಿಎ ನಿವೇ ಶನಗಳನ್ನು ಹಂಚಿಕೆ ಮಾಡಲಾಗುವುದು. ಸಂಸ್ಥೆಯ ಉದ್ದೇಶ, ಸಾರ್ವಜನಿಕರು ಹಿತಕ್ಕೆ ಸಲ್ಲಿಸುತ್ತಿರುವ ಸೇವೆ, ಆರ್ಥಿಕ ಪರಿಸ್ಥಿತಿ ಗಳನ್ನು ಸಿಎ ನಿವೇಶನ ಮಂಜೂರಾತಿಗೆ ಪರಿಗಣಿಸಲಾಗುವುದು. ಪ್ರತಿ ಚದರ ಮೀಟರ್‍ಗೆ 2,100 ರಂತೆ ಸಿಎ ನಿವೇಶನದ ದರ ನಿಗದಿಪಡಿಸಲಾಗಿದ್ದು, ಸರ್ಕಾರಿ ಇಲಾಖೆ, ಅಂಗವಿಕಲರ ಅಭಿವೃದ್ಧಿಗಾಗಿ ಇರುವ ಟ್ರಸ್ಟ್, ಎಸ್ಸಿ-ಎಸ್ಟಿ ಸಮುದಾಯದ ಹಿತ ಕಾಯುವ ಸಂಸ್ಥೆ, ಕನ್ನಡ ಮಾಧ್ಯಮ ಶಾಲೆ ನಡೆಸುವ ಸಂಸ್ಥೆಗಳಿಗೆ ಶೇ.50 ರಷ್ಟು ರಿಯಾಯಿತಿ ನೀಡಲಾಗುವುದು ಎಂದರು.

ಗುಂಪು ಮನೆಗೆ ಸಮೀಕ್ಷೆ: ಮೈಸೂರು ನಗರದ 3 ಕಡೆ ನಿರ್ಮಿ ಸಲುದ್ದೇಶಿಸಿರುವ ಗುಂಪು ವಸತಿ ಮನೆಗಳಿಗೆ ಮುಡಾದಿಂದ ಬೇಡಿಕೆ ಸಮೀಕ್ಷೆ ಆರಂಭಿಸಿದ್ದು, ವಸತಿ ರಹಿತರು ವಾಸಸ್ಥಳ, ಆಧಾರ ಸಂಖ್ಯೆ, ವಿಳಾಸ, ಮೊಬೈಲ್ ಸಂಖ್ಯೆ ಇನ್ನಿತರ ಮಾಹಿತಿ ಗಳನ್ನು ಪ್ರಾಧಿಕಾರಕ್ಕೆ ನೀಡಬೇಕೆಂದು ರಾಜೀವ್ ತಿಳಿಸಿದರು.

ಮುಡಾ ಕಚೇರಿಯಲ್ಲಿ ಸಮೀಕ್ಷೆ ಅರ್ಜಿ ನಮೂನೆ ವಿತರಿಸ ಲಾಗುತ್ತಿದ್ದು, ಆನ್‍ಲೈನ್‍ನಲ್ಲಿ ಪಾಲ್ಗೊಳ್ಳಲು ಗೂಗಲ್ ಸ್ಟೋರ್ ನಲ್ಲಿ ಮೈಸೂರು Uಆಂ ಆ್ಯಪ್ ಅನ್ನು ಡೌನ್‍ಲೋಡ್ ಮಾಡಿ ಕೊಂಡು ಮಾಹಿತಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು. ಮುಡಾ ಆಯುಕ್ತ ಡಾ.ಟಿ.ಬಿ.ನಟೇಶ್, ಸದಸ್ಯರಾದ ಕೆ.ಮಾದೇಶ, ಲಕ್ಷ್ಮೀದೇವಿ, ನವೀನ್‍ಕುಮಾರ್, ಜಿ.ಲಿಂಗಯ್ಯ ಹಾಗೂ ಅಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Translate »