ಮೈಸೂರು, ಸೆ.18(ಎಂಟಿವೈ)- ಕಲ್ಪನೆ ಆಧಾರಿತ ಹಾಗೂ ಅವೈಜ್ಞಾನಿಕ ರಾಷ್ಟ್ರೀಯ ಶಿಕ್ಷಣ ನೀತಿ ರಾಜ್ಯಕ್ಕೆ ಮಾರಕವಾಗಲಿದೆ. ಇದು ಯೋಜನಾಬದ್ಧವಾಗಿರದೇ ಕೇಸರೀ ಕರಣ ಮಾಡುವ ಹುನ್ನಾರ ಇದರ ಹಿಂದೆ ಅಡಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯP್ಷÀ ಆರ್.ಧ್ರುವನಾರಾಯಣ ಆರೋಪಿಸಿದ್ದಾರೆ.
ಮೈಸೂರಿನ ಜಲದರ್ಶಿನಿ ಅತಿಥಿಗೃಹ ದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿ 2020 ಅನ್ನು ಆತು ರಾತುರವಾಗಿ ಜಾರಿಗೊಳಿಸಲು ಮುಂದಾಗಿ ರುವುದರ ಹಿಂದೆ ಸಂಚೊಂದು ಅಡಗಿದೆ. ಈ ಹೊಸ ನೀತಿ ಹಿಮ್ಮುಖ ಚಲನೆ ಆಗು ವಂತಹ ಪ್ರಕ್ರಿಯೆ. 1968ರಲ್ಲಿ ಇಂದಿರಾ ಗಾಂಧಿ, 1986 ರಾಜೀವ್ ಗಾಂಧಿಯವರು ರಾಷ್ಟ್ರೀಯ ಶಿP್ಷÀಣ ನೀತಿ ಜಾರಿಗೊಳಿಸಿದರು. ಆಗ ಶಿಕ್ಷಣ ನೀತಿಯ ಮೇಲೆ ಬಹಳಷ್ಟು ಚರ್ಚೆ ನಡೆದಿದ್ದವು. ಅಲ್ಲದೆ ಪ್ರಮುಖರ ಅಭಿಪ್ರಾಯ ಸಂಗ್ರಹಿಸಿ, ರಾಷ್ಟ್ರೀಯ ಶಿP್ಷÀಣ ನೀತಿ ಜಾರಿಗೊಳಿಸಲಾಗಿತ್ತು. ಆದರೆ ಈಗ ಯಾವುದೇ ಚರ್ಚೆ ನಡೆಸದೇ ರಾಷ್ಟ್ರೀಯ ಶಿP್ಷÀಣ ನೀತಿ ರೂಪಿಸಲಾಗಿದೆ. ಇದರಿಂದ ರಾಜ್ಯಕ್ಕೆ ಬಹಳಷ್ಟು ಹಿನ್ನಡೆಯಾಗಲಿದೆ ಎಂದು ವಿಷಾದಿಸಿದರು.
ಹೊಸ ಶಿP್ಷÀಣ ನೀತಿಯ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಸತ್ ಮತ್ತು ವಿಧಾನಸಭೆಯಲ್ಲಿ ಚರ್ಚೆ ನಡೆಸದೇ, ತಜ್ಞರ ಅಭಿಪ್ರಾಯವನ್ನೂ ಪಡೆಯದೇ ಏಕಾಏಕಿ ಜಾರಿಗೊಳಿಸಲಾಗುತ್ತಿದೆ. ಶಾಲೆಗಳ ಅಭಿ ವೃದ್ಧಿ ಮಾಡದೇ, ಶಿP್ಷÀಕರ ನೇಮಕ ಮಾಡದ ಸರ್ಕಾರ, ಶಿP್ಷÀಕರ ಹಾಲಿ ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನವನ್ನೂ ಮಾಡಿಲ್ಲ. ಇಷ್ಟೆಲ್ಲಾ ನ್ಯೂನತೆಯಿದ್ದರೂ ಆತುರವಾಗಿ ರಾಷ್ಟ್ರೀಯ ಶಿP್ಷÀಣ ನೀತಿ ಜಾರಿ ಮಾಡು ತ್ತಿರುವುದು ಸರಿಯಲ್ಲ. ಕೇಂದ್ರ ಬಜೆಟ್‍ನಲ್ಲಿ ಶೇ.6ರಷ್ಟು ಹಣ ರಾಷ್ಟ್ರೀಯ ಶಿP್ಷÀಣ ನೀತಿಗೆ ಮೀಸಲಿಡಬೇಕು ಎಂದು ಒತ್ತಾಯಿಸಿದರು.
ಹಿಂದೂ ಧರ್ಮವನ್ನು ಬಿಜೆಪಿ ಗುತ್ತಿಗೆ ಪಡೆದಂತೆ: ಬಿಜೆಪಿ ಹಿಂದೂ ಧರ್ಮ ವನ್ನು ಗುತ್ತಿಗೆ ತೆಗೆದುಕೊಂಡಿರುವಂತಿದೆ. ಧರ್ಮವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುವುದೇ ಬಿಜೆಪಿ ಕೆಲಸ ಎಂದು ಲೇವಡಿ ಮಾಡಿದರು.
ಬಾಲಿಶ ಹೇಳಿಕೆ: ಅನಧಿಕೃತ ದೇವಾ ಲಯ ತೆರವು ಕಾರ್ಯಾಚರಣೆಗೆ ಸಂಬಂ ಧಿಸಿದಂತೆ ಸಂಸದ ಪ್ರತಾಪಸಿಂಹ ಅವರು ಸಿದ್ದರಾಮಯ್ಯ ವಿರುದ್ಧ ನೀಡಿರುವ ಹೇಳಿಕೆ ಬಾಲಿಶವಾಗಿದೆ. ದೇಗುಲ ತೆರವುಗೊಳಿ ಸಿದ್ದು ತಪ್ಪು ಎಂದು ವಿಪಕ್ಷ ನಾಯಕ ಸಿದ್ದ ರಾಮಯ್ಯ ಹೇಳಿz್ದÁರೆ. ಹಿಂದೂ ಧರ್ಮ ವನ್ನು ನಾವೇ ಗುತ್ತಿಗೆ ತೆಗೆದುಕೊಂಡಿz್ದÉೀವೆ, ಈ ಧÀರ್ಮ ಬಿಜೆಪಿಯವರz್ದÉೀ ಎನ್ನುವಂತೆ ಪ್ರತಾಪಸಿಂಹ ಮಾತನಾಡಿz್ದÁರೆ. ಸಿದ್ದ ರಾಮಯ್ಯ ಅವರ ಬಗ್ಗೆ ಲಘುವಾಗಿ ಮಾತ ನಾಡಿರುವುದು ಖಂಡನೀಯ ಎಂದರು.
ಧರ್ಮವನ್ನು ರಾಜಕಾರಣಕ್ಕೆ ತರಬಾರದು. ಧರ್ಮವನ್ನು ರಾಜಕೀಯಗೊಳಿಸಿ ಮತ ಸೆಳೆಯುವ ತಂತ್ರವನ್ನು ಬಿಜೆಪಿಯವರು ಮೊದಲಿನಿಂದಲೂ ಮಾಡಿಕೊಂಡು ಬಂದಿ z್ದÁರೆ. ಧರ್ಮಾಧಾರಿತ ರಾಜಕಾರಣ ಮಾಡುವುದನ್ನು ಬಿಟ್ಟು, ಜಾತ್ಯತೀತವಾಗಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಅಭಿವೃದ್ಧಿ ಕೆಲಸ ಮಾಡುವುದನ್ನು ಬಿಜೆಪಿಯವರು ಕಲಿಯಬೇಕು. ಅಧಿಕಾರಿಗಳನ್ನು ನಿಯಂ ತ್ರಿಸಲು ಸಾಧÀ್ಯವಾಗದೆ, ಕಾನೂನು ಪ್ರಕಾರ ಆಡಳಿತ ನಡೆಸುವಲ್ಲಿ ಸರ್ಕಾರ ವಿಫಲ ವಾಗಿದೆ. ಹೀಗಿರುವಾಗ ಅಧಿಕಾರಿಗಳೇನು ಮಾಡುತ್ತಾರೆ. ಒಳ್ಳೆ ಆಡಳಿತ ಮಾಡಿ ಎಂದು ಜನ ನಿಮಗೆ ಮತ ಹಾಕಿ ಕಳುಹಿಸುತ್ತಾರೆ. ಅಧಿಕಾರಿಗಳ ಮೇಲೆ ಆರೋಪ ಹೊರಿಸು ವುದು ಸರಿಯಲ್ಲ. ದೇಗುಲ ತೆರವಿಗೆ ಸಂಬಂ ಧಿಸಿದಂತೆ ಮುಖ್ಯಕಾರ್ಯದರ್ಶಿ ಹೊರಡಿ ಸಿರುವ ಆದೇಶ ಸರ್ಕಾರದ ನಿಲುವಾಗಿ ರುತ್ತದೆ. ಸಿಎಂ, ಸಚಿವರ ಅನುಮತಿ ಪಡೆದೇ ಆದೇಶ ಹೊರಡಿಸಿz್ದÁರೆ. ಅದರಂತೆ ಅಧಿ ಕಾರಿಗಳು ಕ್ರಮ ವಹಿಸಿz್ದÁರೆ. ಸರ್ಕಾರದ ಲೋಪಗಳನ್ನು ಬದಿಗಿಟ್ಟು ಇನ್ನೊಬ್ಬರ ಮೇಲೆ ಆರೋಪ ಹೊರಿಸುವುದು ಸರಿಯಲ್ಲ ಎಂದರು. ಜಿಲ್ಲೆಯಲ್ಲಿ ತಂಬಾಕು ಬೆಳೆದ ರೈತರು ಸಂಕಷ್ಟದಲ್ಲಿದ್ದು, ಈ ಬಾರಿ ತಂಬಾಕು ಹರಾಜು ಮಾರುಕಟ್ಟೆ ಶೀಘ್ರದಲ್ಲೇ ಆರಂಭÀ ವಾಗಲಿದೆ. ಅದಕ್ಕೂ ಮುನ್ನಾ ರೈತರ ಸಭೆ ಕರೆದು ಚರ್ಚಿಸಿ ತಂಬಾಕಿಗೆ ಉತ್ತಮ ಬೆಲೆ ನಿಗದಿ ಮಾಡುವ ಕೆಲಸವನ್ನು ಸರ್ಕಾರ ಮಾಡಬೇಕು. ಜೊತೆಗೆ ಹರಾಜು ಮಾರು ಕಟ್ಟೆಯಲ್ಲಿ ರೈತರಿಗೆ ಮೂಲ ಸೌಕರ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಗೋಷ್ಠಿ ಯಲ್ಲಿ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಡಾ. ಬಿ.ಜೆ.ವಿಜಯಕುಮಾರ್, ನಗರಾಧ್ಯಕ್ಷ ಮೂರ್ತಿ, ವಕ್ತಾರ ಹೆಚ್.ಎ.ವೆಂಕಟೇಶ್ ಇದ್ದರು.