ವಿಷ್ಣುವರ್ಧನ್ ಪ್ರತಿಮೆ ತೆರವು: ಅಭಿಮಾನಿಗಳ ಆಕ್ರೋಶ
ಮೈಸೂರು

ವಿಷ್ಣುವರ್ಧನ್ ಪ್ರತಿಮೆ ತೆರವು: ಅಭಿಮಾನಿಗಳ ಆಕ್ರೋಶ

September 19, 2021

ಮೈಸೂರು,ಸೆ.18(ಎಂಟಿವೈ)- ಮೈಸೂರು ಅರಮನೆ ಬಳಿಯ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಉದ್ಯಾನದಲ್ಲಿ ವಿಷ್ಣು ಅಭಿಮಾನಿ ಬಳಗದ ವತಿಯಿಂದ ಕಳೆದ ರಾತ್ರಿ ಸ್ಥಾಪಿಸಿದ್ದ 6 ಅಡಿ ಎತ್ತರದ ವಿಷ್ಣುವರ್ಧನ್ ಪ್ರತಿಮೆಯನ್ನು ಪಾಲಿಕೆ ಹಾಗೂ ಪೊಲೀಸ್ ಜಂಟಿ ಕಾರ್ಯಾ ಚರಣೆಯಲ್ಲಿ ತೆರವುಗೊಳಿಸಿದ ಹಿನ್ನೆಲೆ ಯಲ್ಲಿ ಆಕ್ರೋಶಗೊಂಡ ಅಭಿಮಾನಿಗಳು ಉದ್ಯಾನವನದ ಮುಂದೆ ಇಂದು ಪ್ರತಿ ಭಟನೆ ನಡೆಸಿದ ಪರಿಣಾಮ ಸ್ಥಳದಲ್ಲಿ ಕೆಲ ಕಾಲ ಉದ್ವಿಗ್ನ ವಾತಾವರಣ ಉಂಟಾಗಿತ್ತು.

ಡಾ.ವಿಷ್ಣುವರ್ಧನ್ ಅಭಿಮಾನಿ ಬಳ ಗದ ವತಿಯಿಂದ ಫೈಬರ್‍ನ ಡಾ.ವಿಷ್ಣು ವರ್ಧನ್ ಪ್ರತಿಮೆಯನ್ನು ಅವರ ಹುಟ್ಟು ಹಬ್ಬದ ದಿನದಂದೇ ಪ್ರತಿಷ್ಠಾಪಿಸಲು ಕಾರ್ಯ ಕ್ರಮ ರೂಪಿಸಿದ್ದರು. ಕಳೆದ ರಾತ್ರಿಯೇ ವಿಷ್ಣುವರ್ಧನ್ ಪಾರ್ಕ್‍ನಲ್ಲಿ 4 ಅಡಿ ಎತ್ತರದ ಮಂಟಪ ಕಟ್ಟಿ, ಪ್ರತಿಮೆಯನ್ನು ಪ್ರತಿಷ್ಠಾಪಿಸಿದ್ದರು. ಇಂದು ಬೆಳಿಗ್ಗೆ ಜನ್ಮ ದಿನದ ಕಾರ್ಯಕ್ರಮಕ್ಕೂ ಮುನ್ನ ನೂತನ ಪ್ರತಿಮೆಯನ್ನು ಉದ್ಘಾಟಿಸಲು ಉದ್ದೇಶಿ ಸಲಾಗಿತ್ತು. ಆದರೆ ಅನುಮತಿ ಪಡೆಯದೇ ಪ್ರತಿಮೆ ಪ್ರತಿಷ್ಠಾಪಿಸಿದ್ದ ಹಿನ್ನೆಲೆಯಲ್ಲಿ ನಗರ ಪಾಲಿಕೆ ಸಿಬ್ಬಂದಿ ಪೊಲೀಸರ ನೆರವಿನೊಂ ದಿಗೆ ವಿಷ್ಣುವರ್ಧನ್ ಪ್ರತಿಮೆಯನ್ನು ತೆರವು ಗೊಳಿಸಿದರು. ಪ್ರತಿಮೆ ತೆರವುಗೊಳಿಸಲು ಬಂದ ಅಧಿಕಾರಿಗಳಿಗೆ ವಿಷ್ಣುವರ್ಧನ್ ಅಭಿಮಾನಿಗಳು ಮನವಿ ಮಾಡಿದರೂ, ಪ್ರತಿಮೆ ತೆರವುಗೊಳಿಸಲಾಯಿತು.

ಪ್ರತಿಭಟನೆಗಿಳಿದ ವಿಷ್ಣು ಅಭಿಮಾನಿಗಳು: ವಿಷ್ಣುವರ್ಧನ್ ಪ್ರತಿಮೆ ತೆರವುಗೊಳಿಸಿ ದ್ದನ್ನು ಖಂಡಿಸಿ ವಿಷ್ಣು ಬಳಗದ ಕಾರ್ಯ ಕರ್ತರು ಪ್ರತಿಭಟನೆ ನಡೆಸಿದರು. ಕಳೆದ 11 ವರ್ಷಗಳಿಂದ ವಿಷ್ಣುವರ್ಧನ್ ಪ್ರತಿಮೆ ಸ್ಥಾಪಿಸುವಂತೆ ಮೈಸೂರು ಮಹಾನಗರ ಪಾಲಿಕೆ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸುತ್ತಾ ಬಂದಿದ್ದರೂ ಯಾವುದೇ ಪ್ರಯೋಜನ ವಾಗಿಲ್ಲ. ಈ ಹಿನ್ನೆಲೆಯಲ್ಲಿ ವಿಷ್ಣು ಅಭಿ ಮಾನಿಗಳೇ ಚಂದಾ ಸಂಗ್ರಹಿಸಿ 6 ಅಡಿ ಎತ್ತರದ ಪ್ರತಿಮೆಯನ್ನು ರೂಪಿಸಲಾಗಿತ್ತು. ಆದರೆ ಪಾಲಿಕೆ ಅಧಿಕಾರಿಗಳು ಸ್ಥಾಪಿಸಿದ್ದ ಪ್ರತಿಮೆಯನ್ನು ತೆರವು ಮಾಡಿದ್ದಾರೆ ಎಂದು ಆರೋಪಿಸಿದರು.
ಮೈಸೂರು ಸೇರಿದಂತೆ ಹಲವೆಡೆ ಅನ ಧಿಕೃತ ಕಟ್ಟಡಗಳಿವೆ. ಸರ್ಕಾರಿ ಆಸ್ತಿ ಕಬಳಿಸಿ ಕಟ್ಟಡ ನಿರ್ಮಿಸಿಕೊಂಡಿದ್ದಾರೆ. ಅನಧಿಕೃತ ಕಟ್ಟಡಗಳ ತೆರವು ಮಾಡುವುದನ್ನು ಬಿಟ್ಟು ವಿಷ್ಣುವರ್ಧನ್ ಪ್ರತಿಮೆಯನ್ನು ತೆರವು ಮಾಡುವ ಮೂಲಕ ಅವರ ಅಭಿಮಾನಿ ಗಳ ಭಾವನೆಗೆ ಧಕ್ಕೆಯುಂಟು ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.

ಉದ್ವಿಗ್ನ ಪರಿಸ್ಥಿತಿ: ಈ ವೇಳೆ ಕೆಲ ಅಭಿ ಮಾನಿಗಳು ಉದ್ಯಾನ ಪ್ರವೇಶಿಸಲು ಯತ್ನಿ ಸಿದರು. ಆಗ ಅಭಿಮಾನಿಗಳು ಮತ್ತು ಪೆÇಲೀಸರ ನಡುವೆ ವಾಗ್ವಾದ ನಡೆಯಿತು. ಪಾರ್ಕ್ ಬಳಿ ಉದ್ವಿಗ್ನ ಪರಿಸ್ಥಿತಿ ಉಂಟಾ ಗಿದ್ದರಿಂದ ಹೆಚ್ಚಿನ ಪೆÇಲೀಸ್ ಬಂದೋ ಬಸ್ತ್ ಏರ್ಪಡಿಸಲಾಗಿತ್ತು.
ಸೇವಾ ಕಾರ್ಯ ಸ್ಥಗಿತ: ವಿಷ್ಣುವರ್ಧನ್ ಜನ್ಮದಿನದ ಅಂಗವಾಗಿ ರಕ್ತದಾನ ಶಿಬಿರ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಅಭಯ ತಂಡ ಪ್ರತಿಮೆ ತೆರವುಗೊಳಿಸಿದ್ದರಿಂದ ಉದ್ದೇ ಶಿತ ಕಾರ್ಯಕ್ರಮ ಅಸ್ತವ್ಯಸ್ತಗೊಂಡಿತು.

ಸೂತಕದ ಮನೆಯಲ್ಲಿ ಸಂಭ್ರಮ ಬೇಡ: ವಿಷ್ಣುವಿನ ಪ್ರತಿಮೆ ತೆರವುಗೊಳಿಸಿದ ರೀತಿ ಸರಿಯಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಸಂಭ್ರಮ ಬೇಡವೆಂದು ವಿಷ್ಣು ಜನ್ಮ ದಿನಾಚರಣೆ ಯನ್ನು ರದ್ದುಗೊಳಿಸಿದ್ದೇವೆ. ರಕ್ತದಾನ ಶಿಬಿರ, ರಾಜ್ಯ ಸೇವಾ ಪ್ರಶಸ್ತಿ ಪ್ರದಾನ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಮುಂದೂ ಡಿದ್ದೇವೆ ಎಂದು ವಿಷ್ಣು ಸೇನಾ ಸಮಿತಿ ಅಧ್ಯಕ್ಷ ಪಾರ್ಥಸಾರಥಿ ತಿಳಿಸಿದರು.

ಪ್ರತಿಭಟನೆಯಲ್ಲಿ ಸಮಿತಿ ಪದಾಧಿಕಾರಿ ಗಳಾದ ವಿಕ್ರಂ ಅಯ್ಯಂಗಾರ್, ಎಸ್.ಎನ್. ರಾಜೇಶ್, ಹರೀಶ್ ನಾಯ್ಡು, ಕಡಕೊಳ ಜಗದೀಶ್, ಬಸವರಾಜು, ಮಹಾದೇವ್ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.

Translate »