ಮಕ್ಕಳಿಗೆ ಹಣ್ಣು, ತರಕಾರಿ ಆಹಾರವೇ ಔಷಧ: ಡಿಸಿ
ಮೈಸೂರು

ಮಕ್ಕಳಿಗೆ ಹಣ್ಣು, ತರಕಾರಿ ಆಹಾರವೇ ಔಷಧ: ಡಿಸಿ

December 18, 2020

ಮೈಸೂರು, ಡಿ.17- ಮಕ್ಕಳಿಗೆ ಆಹಾ ರವೇ ಔಷಧ. ಮಕ್ಕಳ ಆರೋಗ್ಯ ವೃದ್ಧಿ ಸಲು ಅವರಿಗೆ ಆಹಾರದ ಮಹತ್ವವನ್ನು ತಿಳಿಸಿ, ಜೊತೆಗೆ ಹಣ್ಣು ಮತ್ತು ತರಕಾರಿ ಗಳನ್ನು ಸೇವಿಸುವಂತೆ ಪ್ರೋತ್ಸಾಹಿಸಬೇಕು ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದರು.

ಜಿಲ್ಲಾ ಪಂಚಾಯತ್ ಮತ್ತು ಆಯುಷ್ ಇಲಾಖೆ ವತಿಯಿಂದ 2020-21ನೇ ಸಾಲಿನ ಎಸ್‍ಸಿಪಿ ಯೋಜನೆಯಡಿ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯಗಳ ಮೇಲ್ವಿಚಾರಕರಿಗೆ ಆಹಾರ ಪದ್ಧತಿಯಲ್ಲಿ ಪೌಷ್ಟಿಕ ಆಹಾರಗಳ ಅಳವಡಿಕೆ ಕುರಿತು ಗುರುವಾರ ಆಯೋಜಿಸಿದ್ದ ತರಬೇತಿ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿನಿಲಯದ ವಾರ್ಡನ್‍ಗಳು ಮೊದಲು ತಮ್ಮ ಮನೆಗಳಲ್ಲಿ ಪೌಷ್ಟಿಕ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳ ಬೇಕು. ತಮ್ಮ ಹಾಗೂ ವಿದ್ಯಾರ್ಥಿನಿಲ ಯದ ಮಕ್ಕಳ ಆರೋಗ್ಯವನ್ನು ವೃದ್ಧಿಸು ವಲ್ಲಿ ಕಾಳಜಿ ವಹಿಸಬೇಕು ಎಂದು ಹೇಳಿದರು. ಈ ತರಬೇತಿಯಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಯೋಜನಾ ಸಮನ್ವಯಾಧಿಕಾರಿ, ಪ್ರಭಾ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಮುನಿರಾಜು, ಡಾ. ವಿನಯ ಹಾಗೂ ಆಯುಷ್ ಇಲಾಖೆಯ ಡಾ. ಸೀತಾಲಕ್ಷ್ಮಿ ಇನ್ನಿತರರು ಉಪಸ್ಥಿತರಿದ್ದರು.

Translate »