ಮನೆ ಮನೆಗೆ ಪೈಪ್‍ಲೈನ್ ಮೂಲಕ ಗ್ಯಾಸ್ ಸಂಪರ್ಕ  ಯೋಜನೆ ಶೀಘ್ರ ಅನುಷ್ಠಾನಕ್ಕೆ ವಿಶ್ವನಾಥ್ ಆಗ್ರಹ
ಮೈಸೂರು

ಮನೆ ಮನೆಗೆ ಪೈಪ್‍ಲೈನ್ ಮೂಲಕ ಗ್ಯಾಸ್ ಸಂಪರ್ಕ ಯೋಜನೆ ಶೀಘ್ರ ಅನುಷ್ಠಾನಕ್ಕೆ ವಿಶ್ವನಾಥ್ ಆಗ್ರಹ

February 1, 2022

ಮೈಸೂರು,ಜ.31(ಎಂಟಿವೈ)- ಮನೆ ಮನೆಗೆ ಪೈಪ್‍ಲೈನ್ ಮೂಲಕ ಅಡುಗೆ ಅನಿಲ ಸರಬರಾಜು ಮಾಡುವ ಯೋಜನೆ ಸಂಸದ ಪ್ರತಾಪಸಿಂಹರ ಯೋಜನೆಯಲ್ಲ. ಅದು ಕೇಂದ್ರ ಸರ್ಕಾರದ ಜನೋಪ ಯೋಗಿ ಯೋಜನೆ. ಅದನ್ನು ತ್ವರಿತಗತಿ ಯಲ್ಲಿ ಪೂರ್ಣಗೊಳಿಸಲು ಜನ ಪ್ರತಿನಿಧಿ ಗಳು ಸಹಕರಿಸಬೇಕು ಎಂದು ಬಿಜೆಪಿ ಹಿರಿಯ ಮುಖಂಡರೂ ಆದ ವಿಧಾನ ಪರಿಷತ್ ಸದಸ್ಯ ಅಡಗೂರು ಹೆಚ್.ವಿಶ್ವ ನಾಥ್ ಸಲಹೆ ನೀಡಿದ್ದಾರೆ.

ಮೈಸೂರಿನ ಜಲದರ್ಶಿನಿ ಅತಿಥಿ ಗೃಹ ದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮನೆ ಮನೆಗೆ ಪೈಪ್‍ಲೈನ್ ಮೂಲಕ ಅಡುಗೆ ಅನಿಲ ಸರಬರಾಜು ಮಾಡುವ ಯೋಜನೆ ಅನುಷ್ಠಾನಗೊಳಿಸುವ ಸಂಬಂಧ ಸಂಸದ ಪ್ರತಾಪಸಿಂಹ ಹಾಗೂ ಶಾಸಕ ಎಲ್.ನಾಗೇಂದ್ರ ನಡುವೆ ನಡೆಯು ತ್ತಿರುವ ಜಟಾಪಟಿ ಖಂಡನೀಯ. ಅನಿಲ ಸರಬರಾಜು ಯೋಜನೆ ಜನೋಪಯೋಗಿ ಯೋಜನೆಯಾಗಿದೆ. ಇದು ಕೇಂದ್ರ ಸರ್ಕಾ ರದ ಮಹತ್ತರ ಯೋಜನೆಯಾಗಿದೆ. ಇದನ್ನು ಪರಿಣಾಮಕಾರಿಯಾಗಿ ಹಾಗೂ ತ್ವರಿತಗತಿಯಲ್ಲಿ ಅನುಷ್ಠಾನಕ್ಕೆ ತರಲು ಶ್ರಮಿಸಬೇಕು. ಆದರೆ, ಸ್ವಪಕ್ಷೀಯ ಶಾಸ ಕರೇ ಯೋಜನೆ ವಿರೋಧಿಸುತ್ತಿರುವುದು ವಿಷಾದನೀಯ ಎಂದರು.

ಈ ಹಿಂದೆ ದಿನದ 24 ಗಂಟೆಯೂ ಕುಡಿ ಯುವ ನೀರು ಪೂರೈಸುವುದಾಗಿ ಹೇಳಿ ಜಸ್ಕೋ ಕಂಪನಿಯವರು ಮೈಸೂ ರಿನ ರಸ್ತೆಗಳನ್ನೆಲ್ಲಾ ಅಗೆದಿದ್ದರು. ಇದ ರೊಂದಿಗೆ ಖಾಸಗಿ ಮೊಬೈಲ್ ಕಂಪನಿ ಗಳು ಕೇಬಲ್ ಅಳವಡಿಕೆಗಾಗಿ ರಸ್ತೆಯನ್ನು ಅಗೆದಿದ್ದರು. ಅಂದು ಪಾಲಿಕೆ ಸದಸ್ಯ ರಾಗಿದ್ದ ಶಾಸಕ ಎಲ್.ನಾಗೇಂದ್ರ ಯಾಕೆ ವಿರೋಧಿಸಲಿಲ್ಲ? ದಿನದ 24 ಗಂಟೆ ನೀರು ಸರಬರಾಜು ಮಾಡುವು ದಾಗಿ ಹೇಳಿದ್ದ ಜಸ್ಕೋ ಕಂಪನಿ ಮಾತು ಉಳಿಸಿ ಕೊಂಡಿದೆಯೇ? ಆ ಕಂಪನಿಗೆ ಎಷ್ಟು ಹಣ ವಿನಿಯೋಗಿಸಲಾಗಿದೆ. ಖರ್ಚು ಮಾಡಿದ ಹಣಕ್ಕೆ ಏನಾದರೂ ಉಪ ಯೋಗವಾಯಿತೇ? ಎಂದು ಪ್ರಶ್ನಿಸಿದ ಅವರು, ಅಂದು ನೀವು ಪಾಲಿಕೆ ಸದಸ್ಯ ರಾಗಿದ್ದೀರಿ. ಅಂದು ಯಾಕೆ ರಸ್ತೆ ಅಗೆಯು ವುದನ್ನು ವಿರೋಧಿಸಲಿಲ್ಲ. ಜಸ್ಕೋ ಹಾಗೂ ಖಾಸಗಿ ಮೊಬೈಲ್ ಕಂಪನಿ ಅಗೆದಿದ್ದ ರಸ್ತೆಯನ್ನು ಪಾಲಿಕೆ ವತಿಯಿಂ ದಲೇ ದುರಸ್ತಿ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿಸ್ತರಣೆಯಾಗಬೇಕು: ಗ್ಯಾಸ್ ಪೈಪ್ ಲೈನ್ ಯೋಜನೆ ರಾಜ್ಯಾದ್ಯಂತ ವಿಸ್ತರಣೆ ಯಾಗಬೇಕು. ಉತ್ತಮವಾದ ಯೋಜನೆಗೆ ವಿರೋಧ ಮಾಡುವುದು ಸರಿಯಲ್ಲ. ಪೈಪ್ ಲೈನ್ ಮೂಲಕ ಅಡುಗೆ ಅನಿಲ ಸರಬ ರಾಜಾಗುವುದರಿಂದ ಉಪಯೋಗವಾಗ ಲಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಯೋಜನೆಗೆ ವಿರೋಧ ಮಾಡುವುದು ಸರಿಯಲ್ಲ ಎಂದರು.

ಯಾರೂ ದಡ್ಡರಲ್ಲ: ರಾಜಕೀಯ ಕ್ಷೇತ್ರ ದಲ್ಲಿರುವ ಬಹುಪಾಲು ಸಂಸದರು, ಶಾಸ ಕರು, ಮಂತ್ರಿಗಳು ರಿಯಲ್ ಎಸ್ಟೇಟ್ ಮಾಡಿ ಕೊಂಡೇ ಬಂದವರಾಗಿದ್ದಾರೆ. ರಿಯಲ್ ಎಸ್ಟೇಟ್ ಮಾಡುವುದು ಅಪರಾಧವಲ್ಲ. ರಿಯಲ್ ಎಸ್ಟೇಟ್ ಮಾಡುವವರು ರಾಜ ಕೀಯಕ್ಕೆ ಬರಬಾರದೆಂಬ ನಿಯಮವೂ ಇಲ್ಲ ಎಂದು ರಿಯಲ್ ಎಸ್ಟೇಟ್, ಬಡ್ಡಿ ದಂಧೆ ಮಾಡುವವರು ರಾಜಕೀಯಕ್ಕೆ ಬರುತ್ತಾರೆ ಎಂದು ಸಂಸದ ಪ್ರತಾಪ ಸಿಂಹ ನೀಡಿ ರುವ ಹೇಳಿಕೆಗೆ ಟಾಂಗ್ ನೀಡಿದರು.

Translate »