ಗೋವಾ ಸಿಎಂ ಪರಿಕ್ಕರ್ ಆರೋಗ್ಯದಲ್ಲಿ ಮತ್ತೆ ವ್ಯತ್ಯಯ, ಆಸ್ಪತ್ರೆಗೆ ದಾಖಲು
ಮೈಸೂರು

ಗೋವಾ ಸಿಎಂ ಪರಿಕ್ಕರ್ ಆರೋಗ್ಯದಲ್ಲಿ ಮತ್ತೆ ವ್ಯತ್ಯಯ, ಆಸ್ಪತ್ರೆಗೆ ದಾಖಲು

March 4, 2019

ಪಣಜಿ: ಗೋವಾ ಸಿಎಂ ಮನೋಹರ್ ಪರಿಕ್ಕರ್ ಆರೋಗ್ಯದಲ್ಲಿ ಮತ್ತೆ ಅಲ್ಪ ವ್ಯತ್ಯಯ ವಾಗಿದ್ದು, ಅವ ರನ್ನು ಆಸ್ಪತ್ರೆಗೆ ದಾಖಲು ಮಾಡ ಲಾಗಿದೆ ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ ಪರಿಕ್ಕರ್ ಅವರನ್ನು ಗೋವಾ ವೈದ್ಯ ಕೀಯ ಕಾಲೇಜು ಆಸ್ಪತ್ರೆಗೆ ದಾಖಲು ಮಾಡ ಲಾಗಿದ್ದು, ಪರಿಕ್ಕರ್ ಅವರು ಆಂತರಿಕ ರಕ್ತಸ್ರಾವದಿಂದ ಬಳಲುತ್ತಿದ್ದಾರೆ ಎಂದು ತಿಳಿದುಬಂದಿದೆ. ಆಸ್ಪತ್ರೆಗೆ ದಾಖಲಾಗಿ ರುವ ಪರಿಕ್ಕರ್ ಅವರನ್ನು ಇಂದು ವೈದ್ಯ ಕೀಯ ತಪಾಸಣೆಗೆ ಒಳಪಡಿಸಲಾಗಿದ್ದು, ಸಂಜೆ ವೇಳೆಗೆ ಆಸ್ಪತ್ರೆ ವೈದ್ಯರು ಪರಿಕ್ಕರ್ ಅವರ ಆರೋಗ್ಯದ ಕುರಿತು ಹೇಳಿಕೆ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಕಳೆದ 2018ರ ಫೆಬ್ರವರಿಯಲ್ಲಿ ಪರಿಕ್ಕರ್ ಅವರು ಪ್ಯಾಂಕ್ರಿಯಾಟಿಕ್ ಸಮಸ್ಯೆಯಿಂದ ಬಳಲುತ್ತಿರುವುದು ಬಹಿರಂಗವಾಗಿತ್ತು. ಆರಂಭದಲ್ಲಿ ಗೋವಾ, ದೆಹಲಿ ಮತ್ತು ಮುಂಬೈನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪರಿಕ್ಕರ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ನ್ಯೂಯಾರ್ಕ್‍ಗೆ ರವಾನೆ ಮಾಡಲಾಗಿತ್ತು.

Translate »