ವೀರ ಯೋಧ ಅಭಿನಂದನ್‍ಗೆ `ಭಗವಾನ್ ಮಹಾವೀರ್ ಅಹಿಂಸಾ ಪುರಸ್ಕಾರ’
ಮೈಸೂರು

ವೀರ ಯೋಧ ಅಭಿನಂದನ್‍ಗೆ `ಭಗವಾನ್ ಮಹಾವೀರ್ ಅಹಿಂಸಾ ಪುರಸ್ಕಾರ’

March 4, 2019

ಮುಂಬೈ (ನಾಸಿಕ್): ಪಾಕ್ ಮುಷ್ಟಿಯಿಂದ ಭಾರತಕ್ಕೆ ವಾಪಾಸ್ಸಾರುವ ಭಾರತದ ಹೆಮ್ಮೆಯ ಪುತ್ರ, ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರಿಗೆ ಭಗವಾನ್ ಮಹಾವೀರ್ ಅಹಿಂಸಾ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದು ಭಾನುವಾರ ಅಖಿಲ ಭಾರತೀಯ ದಿಗಂಬರ ಜೈನ ಮಹಾಸಮಿತಿ ತಿಳಿಸಿದೆ.

ಈ ಪುರಸ್ಕಾರದ ಜೊತೆಗೆ 2.51 ಲಕ್ಷ ರೂಪಾಯಿ ನಗದು, ಸ್ಮರಣಿಕೆ ಮತ್ತು ಪ್ರಮಾಣ ಪತ್ರವನ್ನೂ ಕೂಡ ಅಖಿಲ ಭಾರತೀಯ ದಿಗಂಬರ ಜೈನ ಮಹಾ ಸಮಿತಿ ಅಭಿನಂದನ್ ಅವರಿಗೆ ನೀಡಿ ಗೌರವಿಸಲಿದೆ.

ಈ ಪುರಸ್ಕಾರವನ್ನು ಮಹಾವೀರ ಜಯಂತಿ ದಿನ (ಏಪ್ರಿಲ್ 17) ಪ್ರದಾನ ಮಾಡ ಲಾಗುವುದು ಎಂದು ಮಹಾ ಸಮಿತಿಯ ನಿರ್ವಾಹಕ ಪರಾಸ್ ಲೊಹಾಡೆ ತಿಳಿಸಿದ್ದು, ಈ ಮೂಲಕ ಅಭಿನಂದನ್ ಅವರಿಗೆ ಗೌರವ ಸಲ್ಲಿಸಲು ಜೈನ ಮಹಾಸಮಿತಿ ನಿರ್ಧರಿಸಿದೆ. ಹಾಗೆಯೇ ಈ ಅತ್ಯುತ್ತಮ ಪುರಸ್ಕಾರ ಸ್ವೀಕರಿಸಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ವೀರಯೋಧ ಅಭಿನಂದನ್ ಪಾತ್ರರಾಗಲಿದ್ದಾರೆ. ಪಾಕಿಸ್ತಾನದ ಎಫ್-16 ವಿಮಾನವನ್ನು ಬೆನ್ನಟ್ಟಿ ಹೊಡೆದುರುಳಿಸಿದ ಮಿಗ್-21 ವಿಮಾನದ ಪೈಲಟ್ ಅಭಿನಂದನ್ ಅವರಿಗೆ ಈ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದು ನವದೆಹಲಿಯಲ್ಲಿ ಮಹಾಸಮಿತಿಯ ಅಧ್ಯಕ್ಷ ಮುನೀಂದ್ರ ಜೈನ್ ಹೇಳಿದ್ದಾರೆ.

Translate »