ಇಂದಿನ ಸರ್ಕಾರದಲ್ಲಿ ವೀರಶೈವ  ನೌಕರರು ಮೂಲೆಗುಂಪು
ಮೈಸೂರು

ಇಂದಿನ ಸರ್ಕಾರದಲ್ಲಿ ವೀರಶೈವ ನೌಕರರು ಮೂಲೆಗುಂಪು

March 4, 2019

ಮೈಸೂರು: ಪ್ರಸ್ತುತ ವರ್ಗಾವಣೆ ಸಂದರ್ಭದಲ್ಲಿ ವೀರಶೈವ ನೌಕ ರರನ್ನು ಮೂಲೆಗುಂಪು ಮಾಡಲಾಗುತ್ತಿರುವ ವಿಚಾರ ತಮ್ಮ ಗಮನಕ್ಕೆ ಬಂದಿದ್ದು, ಸಾಮಥ್ರ್ಯವಿದ್ದರೂ ಅವಕಾಶ ನೀಡದೇ ಅನ್ಯಾಯ ಮಾಡಲಾಗುತ್ತಿದೆ. ವೀರಶೈವ ರಾಗಿ ಹುಟ್ಟಿರುವುದೇ ಅಪರಾಧ ಎಂದು ನಿರ್ಲಕ್ಷಿಸುವ ಷಡ್ಯಂತ್ರ ನಡೆಯುತ್ತಿದೆ ಎಂದು ವಿರೋಧಪಕ್ಷದ ನಾಯಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ಮೈಸೂರು ಕಲಾಮಂದಿರದಲ್ಲಿ ಭಾನು ವಾರ ಕರ್ನಾಟಕ ರಾಜ್ಯ ವೀರಶೈವ ಲಿಂಗಾ ಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ 10ನೇ ರಾಜ್ಯ ಸಮ್ಮೇಳನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ನೇಮಕ, ವರ್ಗಾ ವಣೆ, ಸರ್ಕಾರಿ ಸೌಲಭ್ಯ ನೀಡುವಲ್ಲಿ ವೀರ ಶೈವ ಸಮುದಾಯವನ್ನು ಕಡೆಗಣಿಸಲಾ ಗಿದೆ. ವರ್ಗಾವಣೆ, ನೇಮಕದಲ್ಲೂ ಅನ್ಯಾಯ ವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ನಮಗಾಗುತ್ತಿರುವ ಅನ್ಯಾಯವನ್ನು ಸಹಿ ಸಲು ಸಾಧ್ಯವಿಲ್ಲ. ನನ್ನ ಅವಧಿಯಲ್ಲಿ ಸರ್ಕಾರಿ ನೌಕರರು ಬೀದಿಗಿಳಿದು ಹೋರಾ ಡುವ ದುಸ್ಥಿತಿಗೆ ಅವಕಾಶ ನೀಡಿರಲಿಲ್ಲ. ಆದರೆ ನಮ್ಮ ಕಿವುಡು ಸರ್ಕಾರ ಇದನ್ನು ಅರ್ಥ ಮಾಡಿಕೊಂಡಿಲ್ಲ. ಅನ್ಯಾಯದ ವಿರುದ್ಧ ಎಲ್ಲರೂ ಬೀದಿಗಿಳಿದು ಹೋರಾಟ ನಡೆಸಬೇಕಿದೆ. ವೀರಶೈವ ಲಿಂಗಾಯತರು ಹಕ್ಕೊತ್ತಾಯಗಳನ್ನು ನೀಡಿದ್ದೀರಿ, ವಿಪಕ್ಷ ನಾಯಕನಾಗಿ ನಾನು ನನ್ನ ಕರ್ತವ್ಯ ಮಾಡು ತ್ತೇನೆ. ನಿಮ್ಮ ಬೇಡಿಕೆಗಳನ್ನು ಮುಂದಿನ ವಿಧಾನ ಮಂಡಲ ಅಧಿವೇಶನದ ಮುಂದಿಟ್ಟು ಚರ್ಚಿಸಿ, ಈಡೇರಿಕೆಗೆ ಕ್ರಮ ವಹಿಸುವು ದಾಗಿ ಅವರು ಭರವಸೆ ನೀಡಿದರು.

ವೀರಶೈವ ನೌಕರರು ಕಾಯಕ ದಾಸೋಹಿ ಗಳು. ಬಸವಣ್ಣ ಕಲ್ಯಾಣ ಮಂತ್ರಿಯಾಗಿ ದ್ದರೂ ತನ್ನನ್ನು ದಾಸೋಹಿ ಎಂದು ಕೊಂಡಿದ್ದರು. ಅಂತೆಯೇ ನೌಕರರು ಸರ್ಕಾರ ನೀಡುವ ಉನ್ನತ ಹುದ್ದೆಯನ್ನು ದುರ್ಬಳಕೆ ಮಾಡಿಕೊಳ್ಳದೇ ಸಮಾಜದ ಒಳಿತಿಗಾಗಿ ಬಳಸಿಕೊಳ್ಳಬೇಕು. ದೇಶ ಮತ್ತು ಸಮಾಜದ ಅಭಿವೃದ್ಧಿಯಲ್ಲಿ ನೌಕರರ ಪಾತ್ರ ದೊಡ್ಡದಾಗಿದೆ. ಶಾಸಕರಷ್ಟೇ ಸಾಮಾಜಿಕ ಜವಾಬ್ದಾರಿ ನೌಕರರಿಗಿದೆ ಎಂದರು.

ಒಳಪಂಗಡ ಚೌಕಟ್ಟಿನಿಂದ ಹೊರಬನ್ನಿ: ವೀರಶೈವ ಲಿಂಗಾಯತರು ಒಳಪಂಗಡ ಎಂಬ ಚೌಕಟ್ಟಿನಿಂದ ಹೊರ ಬರಬೇಕು. ಹಾಗಾದರೆ ಮಾತ್ರ
ಅಭಿವೃದ್ಧಿ ಕಾಣಲು ಸಾಧ್ಯ. ಒಳಪಂಗಡಗಳ ಕಚ್ಚಾಟ, ಭಿನ್ನಾಭಿಪ್ರಾಯ ಕೊನೆಗಾಣಿ ಸಲು ಸಂಘ ಸಾಕಷ್ಟು ಪ್ರಯತ್ನ ನಡೆಸುತ್ತಿದೆ ಎಂದರು. ನಾವು ಸ್ವಲ್ಪ ಎಡವಿ ಹಿನ್ನಡೆ ಅನುಭವಿಸಿದ್ದೇವೆ. ಹೀಗಾಗಿ ನಿಮಗೂ, ನಮಗೂ ಇಂಥ ಪರಿಸ್ಥಿತಿಗೆ ಬಂದಿದ್ದೇವೆ. ಈ ವಿಚಾರವನ್ನು ಸೂಕ್ಷ್ಮವಾಗಿ ಅವಲೋಕಿಸಿ ನಡೆಯಬೇಕು ಎಂದರು.

ಎಲ್ಲರನ್ನೂ ಪ್ರೀತಿಸುವ ವೀರಶೈವ, ಲಿಂಗಾಯತರು ಇತ್ತೀಚೆಗೆ ಸಮುದಾಯದ ಜ್ವಲಂತ ಸಮಸ್ಯೆಗಳನ್ನು ಎದುರಿಸುತ್ತಿದೆ. ಇದನ್ನು ಪ್ರಶ್ನಿಸುವ, ಖಂಡಿಸುವ ಶಕ್ತಿ ಇರುವವರು ಕುರ್ಚಿಯಲ್ಲಿ ಇಲ್ಲ ಎಂಬುದೇ ದುರ್ದೈವದ ಸಂಗತಿ ಎಂದರು.

ಸಮ್ಮೇಳನದ ಅಂಗವಾಗಿ ಹೊರ ತರಲಾದ `ಕಾಯಕ ದೀವಿಗೆ’ ಸ್ಮರಣ ಸಂಚಿಕೆ ಯನ್ನು ಯಡಿಯೂರಪ್ಪ ಬಿಡುಗಡೆ ಮಾಡಿದರು. ಮಾಜಿ ಶಾಸಕ ಅಶೋಕ್ ಖೇಣಿ ಸಂಘದ ವೆಬ್‍ಸೈಟ್ ಬಿಡುಗಡೆ ಮಾಡಿದರು. ಶಾಸಕ ಎಸ್.ನಿರಂಜನಕುಮಾರ್ ಸಿದ್ಧಗಂಗಾ ಶ್ರೀಗಳ ದಿನದರ್ಶಿಕೆ ಬಿಡುಗಡೆ ಮಾಡಿದರು. ಇದೇ ಸಂದರ್ಭದಲ್ಲಿ ಪ್ರತಿಭಾ ವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಇಂಧನ ಇಲಾಖೆ ಉಪ ಕಾರ್ಯದರ್ಶಿ ವಿಶ್ವನಾಥ ಪಿ.ಹಿರೇಮಠ, ಪ್ರೊ.ಮಾರುತಿ ಸಿದ್ಲಾಪುರ ಶಿವಯೋಗಿ, ಆರ್.ಎಚ್.ಚನ್ನಬಸವಸ್ವಾಮಿ ಅವರಿಗೆ `ಕಾಯಕ ಸೇವಾ ರತ್ನ ಪ್ರಶಸ್ತಿ’ ನೀಡಿ ಗೌರವಿಸ ಲಾಯಿತು. ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಂಘದ ರಾಜ್ಯಾಧ್ಯಕ್ಷ ಬಿ.ನಿರಂಜನ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಐಎಎಸ್ ಅಧಿಕಾರಿ ಡಾ.ಸಿ. ಸೋಮಶೇಖರ್, ಶಾಸಕರಾದ ಎಲ್.ನಾಗೇಂದ್ರ, ಜಿಪಂ ಉಪಾಧ್ಯಕ್ಷೆ ಗೌರಮ್ಮ ಸೋಮ ಶೇಖರ್, ಸದಸ್ಯರಾದ ಮಂಗಳಾ ಸೋಮಶೇಖರ್, ಲೀಲಾವತಿ ಸಿದ್ಧವೀರಶೆಟ್ಟಿ, ಸದಾನಂದ, ಗುರುಸ್ವಾಮಿ, ಪಾಲಿಕೆ ಸದಸ್ಯೆ ಸುನಂದಾ ಪಾಲನೇತ್ರ, ಬಿಜೆಪಿ ಮುಖಂಡ ಎಂ.ರಾಜೇಂದ್ರ, ಮಾಜಿ ಶಾಸಕ ಎಸ್.ಸಿ.ಬಸವರಾಜು, ಸಂಘದ ಗೌರವ ಅಧ್ಯಕ್ಷ ಶಿವಶಂಕರ್, ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಕಾನ್ಯ ಶಿವಮೂರ್ತಿ, ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ಸ್ವಾಮಿ, ಗೌರವಾಧ್ಯಕ್ಷ ಸಿ.ಡಿ.ಬಸವರಾಜು ಇನ್ನಿತರರು ಉಪಸ್ಥಿತರಿದ್ದರು.

`ನಾನು ಅಶೋಕ್ ಖೇಣಿ ಬದಲು ಅಶೋಕ್ ಗೌಡ ಆಗಿದ್ದರೆ…!’
ಮೈಸೂರು: ನಾನು ಲಿಂಗಾಯತನಾದ ಕಾರಣ ನೈಸ್ ಪ್ರಾಜೆಕ್ಟ್ ಪೂರ್ಣಗೊಳಿಸಲಾಗಲಿಲ್ಲ. ನಾನು ತಪ್ಪು ಜಾತಿಯಲ್ಲಿ ಹುಟ್ಟಿ ದ್ದೇನೆ. ಅಶೋಕ್ ಖೇಣಿ ಬದಲು ಅಶೋಕ್ ಗೌಡ ಆಗಿದ್ದರೆ ಕನ್ಯಾಕುಮಾರಿವರೆಗೆ ನೈಸ್ ರೋಡ್ ಪ್ರಾಜೆಕ್ಟ್ ಸಿಗುತ್ತಿತ್ತು ಎಂದು ಉದ್ಯಮಿ ಹಾಗೂ ಮಾಜಿ ಶಾಸಕ ಅಶೋಕ್ ಖೇಣಿ ವಿಷಾದದಿಂದ ನುಡಿದರು. ಮೈಸೂರಿನಲ್ಲಿ ವೀರಶೈವ ಲಿಂಗಾ ಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ 10ನೇ ರಾಜ್ಯ ಸಮ್ಮೇಳನದಲ್ಲಿ ಸಂಘದ ವೆಬ್‍ಸೈಟ್‍ಗೆ ಚಾಲನೆ ನೀಡಿ ಮಾತನಾಡಿದರು. ನಾನು ಕಾಂಗ್ರೆಸ್‍ನಲ್ಲಿದ್ದರೂ ಜಾತ್ಯತೀತ ವ್ಯಕ್ತಿ. ಯಡಿಯೂರಪ್ಪ ಬೇಗ ಮುಖ್ಯಮಂತ್ರಿ ಆಗಲಿ ಎಂಬ ಆಶಯ ವ್ಯಕ್ತಪಡಿಸಿದರು.

ಬಹಳ ದಿನಗಳ ನಂತರ ಯಡಿಯೂರಪ್ಪನವರ ಮುಖದಲ್ಲಿ ನಗು ನೋಡಿದೆ. ಅವರದ್ದು ಮಗುವಿನ ನಗು. ಅಂಥವರು ಮುಖ್ಯಮಂತ್ರಿಯಾಗಬೇಕು. ನನಗೆ ಪಕ್ಷ ಮುಖ್ಯವಲ್ಲ. ಉತ್ತಮ ವ್ಯಕ್ತಿಗಳನ್ನು ನಾವು ಬೆಂಬಲಿಸಬೇಕು. ನಾನು ಕಾಂಗ್ರೆಸ್‍ನಲ್ಲಿ ದ್ದರೂ ಯಡಿಯೂರಪ್ಪ ಮುಖ್ಯಮಂತ್ರಿ ಆಗಲಿ ಎಂದು ಹಾರೈಸುತ್ತೇನೆ ಎಂದರು.
ಸಮಾಜಕ್ಕೆ ತ್ರಿವಿಧ ದಾಸೋಹಿ ತುಮಕೂರು ಶ್ರೀ ಸಿದ್ಧಗಂಗಾ ಶಿವಕುಮಾರ ಸ್ವಾಮಿಗಳ ಕೊಡುಗೆ ಅಪಾರ ಎಂದು ಸ್ಮರಿಸಿದರು.

ಯೋಚಿಸಿ ಮತ ನೀಡಿ: ಸರ್ಕಾರಿ ನೌಕರರು ಮತ ಹಾಕುವ ಮುನ್ನ ಯೋಚಿಸಿ ಮತ ಚಲಾಯಿಸಬೆಕು. ಇಲ್ಲವಾದರೆ 5 ವರ್ಷ ಪಶ್ಚಾತ್ತಾಪ ಪಡಬೇಕಾಗುತ್ತದೆ. ಲಿಂಗಾ ಯತ ಎಂದರೆ ಬೈತಾರೆ, ವೀರಶೈವ ಲಿಂಗಾಯತ ಎಂದು ಹೇಳಬೇಕು. ಲಿಂಗಾಯತ ರಿಗೆ ಮೇಕಪ್ ಅಗತ್ಯವಿಲ್ಲ. ಏಕೆಂದರೆ ಅವರಿಗೆ ವಿಭೂತಿಯೇ ಮೇಕಪ್ ಇದ್ದಂತೆ ಎಂದರು. ತಮ್ಮ ಭಾಷಣದ ಮಧ್ಯೆ ಬೀದರ್ ಜಿಲ್ಲೆಯಲ್ಲಿನ ಭ್ರಷ್ಟಾಚಾರದ ಬಗ್ಗೆ ಪ್ರಸ್ತಾಪಿಸಿದ ಅವರು, ಬೀದರ್‍ನಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ತಿಂಗಳಿಗೆ ಇಷ್ಟು ಕೊಡಬೇಕು ಎಂಬ ಕೋಟಾ ಸಿಸ್ಟಂ ಈಗ ಬಂದಿದೆ ಎಂದು ಬೇಸರದಿಂದ ಹೇಳಿದರು.

ಇದೇ ಸಂದರ್ಭದಲ್ಲಿ ಅವರು ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘಕ್ಕೆ ಬೀದರ್‍ನಲ್ಲಿ ಜಾಗ ನೀಡುವುದಾಗಿ ಭರವಸೆ ನೀಡಿದರು.

Translate »