ಇಂದು ಮಹಾಶಿವರಾತ್ರಿ ; ಮೈಸೂರಿನ ದೇವಾಲಯಗಳಲ್ಲಿ ಭರದ ಸಿದ್ಧತೆ
ಮೈಸೂರು

ಇಂದು ಮಹಾಶಿವರಾತ್ರಿ ; ಮೈಸೂರಿನ ದೇವಾಲಯಗಳಲ್ಲಿ ಭರದ ಸಿದ್ಧತೆ

March 4, 2019

ಮೈಸೂರು: ನಾಡಿನೆಲ್ಲೆಡೆ ಮಹಾ ಶಿವರಾತ್ರಿ ಆಚರಣೆಗೆ ಸಜ್ಜಾಗಿದೆ. ಅದರಂತೆ ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ ವಿವಿಧ ದೇವಾಲಯ ಗಳಲ್ಲಿ ಶಿವರಾತ್ರಿ ಆಚರಣೆಗೆ ಇಂದು ಸಿದ್ಧತೆ ನಡೆದಿದೆ.

ಶಿವನ ಆರಾಧಕರು ಈಗಾಗಲೇ ತಮ್ಮ ತಮ್ಮ ನಿವಾಸ ಗಳಲ್ಲಿ ಭರದಿಂದ ಸಿದ್ಧತೆ ನಡೆಸಿದ್ದಾರೆ. ಶಿವರಾತ್ರಿ ನಿಮಿತ್ತ ನಡೆಸುವ ಉಪವಾಸಕ್ಕೆ ಅಗತ್ಯವಾಗಿ ಬೇಕಾದ ಹಣ್ಣು ಹಂಪಲು ಗಳ ಖರೀದಿಯಲ್ಲಿ ಜನರು ತೊಡಗಿದ್ದಾರೆ. ಕರಬೂಜ ಹಾಗೂ ಕಲ್ಲಂಗಡಿ ಹಣ್ಣುಗಳಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿದೆ.

ಅರಮನೆಯ ತ್ರಿನೇಶ್ವರ ದೇವಾಲಯದಲ್ಲಿ ಶಿವ ಲಿಂಗಕ್ಕೆ ಚಿನ್ನದ ಕೊಳಗ ಧಾರಣೆ ಮಾಡಲು ಈಗಾ ಗಲೇ ಜಿಲ್ಲಾ ಖಜಾನೆಯಿಂದ ಚಿನ್ನದ ಕೊಳಗವನ್ನು ದೇವಾಲಯಕ್ಕೆ ತರಲಾಗಿದೆ. ಮೈಸೂರಿನ ಅರಸರು ನೀಡಿರುವ ಈ ಚಿನ್ನದ ಕೊಳಗವನ್ನು ಶಿವರಾತ್ರಿ ಯಂದು ಧಾರಣೆ ಮಾಡಲಿದ್ದು, ಮುಂಜಾನೆ 4.30ರ ವೇಳೆ ದೇವಾಲಯದಲ್ಲಿ ಲಿಂಗಕ್ಕೆ ಅಭಿಷೇಕ ಮಾಡಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು. ಮರುದಿನ ಬೆಳಗಿನ ವರೆಗೂ ನಿರಂತರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ..

1953ರಲ್ಲಿ ಮೈಸೂರು ಸಂಸ್ಥಾನದ ಮಹಾರಾಜ ರಾಗಿದ್ದ ಜಯಚಾಮರಾಜೇಂದ್ರ ಒಡೆಯರ್ ಅವರು ತ್ರಿನೇಶ್ವರ, ನಂಜನಗೂಡಿನ ನಂಜುಂಡೇಶ್ವರ ಹಾಗೂ ಮಹದೇಶ್ವರ ಬೆಟ್ಟದ ಮಹದೇಶ್ವರಸ್ವಾಮಿ ದೇವಾಲ ಯಗಳಿಗೆ ಈ ರೀತಿ ಚಿನ್ನದ ಮುಖವಾಡವನ್ನು ಮಕ್ಕಳ ಪ್ರೀತ್ಯರ್ಥವಾಗಿ ನೀಡಿದ್ದರು. ತ್ರಿನೇಶ್ವರಸ್ವಾಮಿ ದೇವಾಲಯದ ಶಿವನ ವಿಗ್ರಹಕ್ಕೆ ಧಾರಣೆ ಮಾಡಲಿರುವ ಚಿನ್ನದ ಕೊಳಗ 14 ಕೆ.ಜಿ. ತೂಕವಿದೆ.

ರಾಮಾನುಜ ರಸ್ತೆಯಲ್ಲಿನ ಕಾಮಕಾಮೇಶ್ವರಿ ದೇಗುಲ, ನೂರೆಂಟು ಶಿವಲಿಂಗಗಳಿರುವ ಗುರುಕುಲ ಮಠ, ದಿವಾನ್ಸ್ ರಸ್ತೆಯಲ್ಲಿರುವ ಅಮೃತೇಶ್ವರ ದೇವ ಸ್ಥಾನ, ವಾಣಿವಿಲಾಸ ಮೊಹಲ್ಲಾದ ಚಂದ್ರಮೌಳೇಶ್ವರ ದೇವಸ್ಥಾನ, ಕುವೆಂಪುನಗರದ ಶಿವನ ದೇವಾಲಯ, ವಿಶ್ವಮಾನವ ಜೋಡಿ ರಸ್ತೆಯಲ್ಲಿರುವ ಶಿವದೇ ವಾಲಯ, ಟಿ.ಕೆ.ಬಡಾವಣೆಯ ಮಾರುತಿ ದೇವಸ್ಥಾನ, ಶ್ರೀರಾಂಪುರ 2ನೇ ಹಂತದಲ್ಲಿರುವ ಬಲಮುರಿ ಗಣಪತಿ ದೇವಸ್ಥಾನ, ಅಗ್ರಹಾರದ ನೂರೊಂದು ಗಣಪತಿ ದೇವಸ್ಥಾನ, ಚಾಮುಂಡಿಬೆಟ್ಟದ ಮಹಾಬಲೇಶ್ವರ ದೇಗುಲಗಳು ಶಿವರಾತ್ರಿಗೆ ಸಿದ್ಧಗೊಂಡಿವೆ. ಜಾಗರಣೆ ಇರುವ ಭಕ್ತರಿಗಾಗಿ ದೇವಾಲಯಗಳಲ್ಲಿ ವಿಶೇಷ ಕಾರ್ಯ ಕ್ರಮಗಳನ್ನು ಆಯೋಜಿಸಲಾಗಿದೆ.

ಅವಧೂತ ದತ್ತಪೀಠದಲ್ಲಿ, ಚಾಮುಂಡಿಬೆಟ್ಟದ ಮಹಾ ಬಲೇಶ್ವರ ದೇಗುಲದಲ್ಲೂ ಭಕ್ತರು ದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬರಲಿದ್ದಾರೆ. ನಂಜನಗೂಡಿನ ನಂಜುಂಡೇ ಶ್ವರ ದೇವಾಲಯವೂ ಶಿವರಾತ್ರಿಗೆ ಸಿದ್ಧಗೊಂಡಿದೆ. ರಾಜ್ಯದಾದ್ಯಂತ ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಲಿದ್ದಾರೆ. ಜಾಗರಣೆಗಾಗಿಯೇ ದೇವಾಲಯ ಗಳಲ್ಲಿ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ.

ಶಿವರಾತ್ರಿ ವೇಳೆ ಕಿಡಿಗೇಡಿಗಳು ಕಾನೂನು ಸುವ್ಯ ವಸ್ಥೆಗೆ ಭಂಗ ತರುವವರ ವಿರುದ್ಧ ಕ್ರಮ ಜರುಗಿ ಸಲಾಗುವುದು ಎಂದು ಮೈಸೂರು ನಗರ ಪೊಲೀ ಸರು ಎಚ್ಚರಿಸಿದ್ದಾರೆ. ಈ ಪ್ರಯುಕ್ತ ಎಲ್ಲಾ ಠಾಣೆಗಳ ವ್ಯಾಪ್ತಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್, ಗಸ್ತು ವ್ಯವಸ್ಥೆ ಬಿಗಿಗೊಳಿಸಲಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಅನುಮಾಸ್ಪದ ವ್ಯಕ್ತಿಗಳು ಕಂಡು ಬಂದರೆ, ನಾಗರಿಕ ಕೂಡಲೇ ಪೊಲೀಸ್ ಕಂಟ್ರೋಲ್ ರೂಂ 0821-2418339/139 ದೂರವಾಣಿಗೆ ಕರೆ ಮಾಡಿ ಮಾಹಿತಿ ನೀಡಬಹುದು ಎಂದು ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ತಿಳಿಸಿದ್ದಾರೆ.

Translate »