ಮೆಗಾ ಸಿಲ್ಕ್ ಕ್ಲಸ್ಟರ್‍ಗೆ ಭೂಮಿಪೂಜೆ
ಮೈಸೂರು

ಮೆಗಾ ಸಿಲ್ಕ್ ಕ್ಲಸ್ಟರ್‍ಗೆ ಭೂಮಿಪೂಜೆ

March 4, 2019

ಮೈಸೂರು: ಮೈಸೂರು ಬೆಳವಾಡಿ ಗ್ರಾಮದ ಬಳಿ ಚಾಮುಂಡೇಶ್ವರಿ ಮೆಗಾ ಸಿಲ್ಕ್ ಕ್ಲಸ್ಟರ್ ನಿರ್ಮಾಣಕ್ಕೆ ಭಾನುವಾರ ಭೂಮಿಪೂಜೆ ನೆರವೇರಿತು.

ಕೇಂದ್ರ ಪುರಸ್ಕøತ ಹಾಗೂ ರಾಜ್ಯ ಸರ್ಕಾರದ ನೆರವಿನೊಂದಿಗೆ ಅಂದಾಜು 50 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕ್ಲಸ್ಟರ್ ನಿರ್ಮಾಣ ಕಾಮಗಾರಿಗೆ ರೇಷ್ಮೆ ಸಚಿವ ಸಾ.ರಾ. ಮಹೇಶ್ ಹಾಗೂ ಸಂಸದ ಪ್ರತಾಪ್ ಸಿಂಹ ಭೂಮಿ ಪೂಜೆ ನೆರವೇರಿಸಿದರು.

ಬಳಿಕ ಮಾತನಾಡಿದ ಸಚಿವ ಸಾ.ರಾ. ಮಹೇಶ್, ದೇಶದಲ್ಲಿರುವ ನಿರುದ್ಯೋಗ ಸಮಸ್ಯೆಯನ್ನು ಸರ್ಕಾರಗಳಿಂದ ಮಾತ್ರ ಪರಿಹರಿಸಲು ಸಾಧ್ಯವಿಲ್ಲ. ಯುವ ಉದ್ಯ ಮಿಗಳು ಹೆಚ್ಚು ಉದ್ಯೋಗ ಸೃಷ್ಟಿಸುವ ಮೂಲಕ ನೆರವಾಗಬೇಕು. ಇದು ಉದ್ಯ ಮಿಗಳ ಸಾಮಾಜಿಕ ಜವಾಬ್ದಾರಿಯೂ ಹೌದು. ಇಲ್ಲಿ ಸಿಲ್ಕ್ ಕ್ಲಸ್ಟರ್ ಆರಂಭ ವಾಗುವುದರಿಂದ ನೂರಾರು ಜನರಿಗೆ ಉದ್ಯೋಗ ಸಿಗಲಿದೆ ಎಂದು ತಿಳಿಸಿದರು.

ಸಂಸದ ಪ್ರತಾಪ್‍ಸಿಂಹ ಮಾತನಾಡಿ, ರಾಜ್ಯ ಸರ್ಕಾರದ ನಿರಂತರ ಪ್ರಯತ್ನ ದಿಂದ ಈ ಯೋಜನೆಗೆ ಭೂಮಿ ಸಿಕ್ಕಿದೆ. ಜಾಗದ ಕೊರತೆಯಿಂದ 2 ಬಾರಿ ಅನು ದಾನ ವಾಪಸ್ಸಾಗುವ ಹಂತದಲ್ಲಿತ್ತು. ಕಡೆಗೆ ತಡವಾಗಿಯಾದರೂ ಮೆಗಾ ಕ್ಲಸ್ಟರ್ ನಿರ್ಮಾಣಕ್ಕೆ ಚಾಲನೆ ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಅರುಣ್‍ಕುಮಾರ್ ಗೌಡ, ಮಾಜಿ ಜಿಲ್ಲಾಧ್ಯಕ್ಷ ಹೇಮಂತ್ ಕುಮಾರ್‍ಗೌಡ, ಗ್ರಾಮ ಪಂಚಾಯ್ತಿ ಸದಸ್ಯೆ ಕಲಾವತಿ, ಮುಖಂಡರಾದ ಬೆಳ ವಾಡಿ ಶಿವಮೂರ್ತಿ, ಶಂಭುಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.

ಜವಳಿ ಉದ್ಯಮ ಅಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಮೊದಲ ಬಜೆಟ್‍ನಲ್ಲೇ ಮೈಸೂರು ಸೇರಿದಂತೆ 6 ಸ್ಥಳಗಳಲ್ಲಿ ಮೆಗಾ ಸಿಲ್ಕ್ ಕ್ಲಸ್ಟರ್ ನಿರ್ಮಾಣವನ್ನು ಘೋಷಿಸಿ, ಅನುದಾನ ವನ್ನು ಮೀಸಲಿಟ್ಟಿದ್ದರು. ಸಂಸದ ಪ್ರತಾಪ್ ಸಿಂಹ ಅವರ ಪ್ರಯತ್ನದಿಂದಾಗಿ ಮೈಸೂ ರಿಗೆ ಕ್ಲಸ್ಟರ್ ಘೋಷಣೆಯಾದರೂ ನಿರ್ಮಾಣಕ್ಕೆ ಸ್ಥಳ ಗುರುತಿಸುವಲ್ಲಿ ವಿಳಂಬವಾಗಿತ್ತು. ಸಾ.ರಾ.ಮಹೇಶ್ ಅವರು ರೇಷ್ಮೆ ಸಚಿವರಾದ ನಂತರ, ರಾಜ್ಯ ಸರ್ಕಾರವನ್ನು ಮನವಿ ಮಾಡಿ, ಭೂಮಿ ಒದಗಿಸಿಕೊಟ್ಟರು. ಇದೀಗ ಭೂಮಿ ಪೂಜೆಯೊಂದಿಗೆ ಕ್ಲಸ್ಟರ್ ನಿರ್ಮಾಣಕ್ಕೆ ಚಾಲನೆ ದೊರೆತಂತಾಗಿದೆ.

ಈಗಾಗಲೇ ಖಾಸಗಿ ಸಹಭಾಗಿತ್ವದಡಿ 24 ಮಂದಿ ಜವಳಿ ಉದ್ಯಮಿಗಳನ್ನು ಈ ಯೋಜನೆಗೆ ನೋಂದಣಿ ಮಾಡಿ ಕೊಳ್ಳ ಲಾಗಿದೆ. ರಾಜ್ಯ ಸರ್ಕಾರದ 10 ಕೋಟಿ ರೂ. ನೆರವಿನೊಂದಿಗೆ ಈ ಜವಳಿ ಪಾರ್ಕ್ ನಿರ್ಮಾಣವಾಗಲಿದೆ. ವಿದ್ಯುತ್, ನೀರು, ರಸ್ತೆ, ಕಟ್ಟಡ ಸೇರಿದಂತೆ ಎಲ್ಲಾ ಮೂಲ ಸೌಕರ್ಯಗಳನ್ನು ಉದ್ಯಮಿಗಳಿಗೆ ಕಲ್ಪಿಸಿ ಕೊಡಲಾಗುತ್ತದೆ. ಉತ್ಪನ್ನ ಸಂಸ್ಕರಣೆಗೂ ವ್ಯವಸ್ಥೆ ಮಾಡ ಲಾಗುತ್ತದೆ. ಉದ್ಯಮಿಗಳ ಹೂಡಿಕೆಗೆ ಪ್ರತಿಯಾಗಿ, ಮೂಲಭೂತ ಸೌಕರ್ಯ ದೊಂದಿಗೆ ಯಂತ್ರೋಪಕರಣ ಗಳ ಖರೀದಿಗೆ ಒಂದು ಕೋಟಿ ರೂ. ಸಬ್ಸಿಡಿ ಯನ್ನು ಸರ್ಕಾರದ ವತಿಯಿಂದ ನೀಡ ಲಾಗುತ್ತದೆ. ಈ ಕ್ಲಸ್ಟರ್ ಆರಂಭದಿಂದ ಜವಳಿ ಉದ್ಯಮಕ್ಕೆ ಪ್ರೋತ್ಸಾಹ ಸಿಗುವು ದರ ಜೊತೆಗೆ 300ಕ್ಕೂ ಹೆಚ್ಚು ಮಂದಿಗೆ ಉದ್ಯೋಗಾವಕಾಶ ದೊರೆಯಲಿದೆ. ಕರ್ನಾಟಕ ರಾಜ್ಯ ಟೆಕ್ಸ್‍ಟೈಲ್ಸ್ ಇನ್ಫ್ರಾಸ್ಟ್ರಕ್ಚರ್ ಡೆವಲಪ್ಮೆಂಟ್ ಕಾಪೆರ್Çರೇಷನ್ ಲಿಮಿಟೆಡ್ ಮತ್ತು ಕರ್ನಾಟಕ ರಾಜ್ಯ ಕೈಮಗ್ಗ ಮತ್ತು ಜವಳಿ ಇಲಾಖೆ ಸಹ ಯೋಗದಲ್ಲಿ ಈ ಯೋಜನೆ ಕಾರ್ಯ ಗತವಾಗಲಿದೆ.

Translate »