ಕೆಂಗಲ್ ಹನುಮಂತಯ್ಯ ತತ್ವಾದರ್ಶಗಳು ಇಂದಿಗೂ ಅನುಕರಣೀಯ
ಮೈಸೂರು

ಕೆಂಗಲ್ ಹನುಮಂತಯ್ಯ ತತ್ವಾದರ್ಶಗಳು ಇಂದಿಗೂ ಅನುಕರಣೀಯ

March 4, 2019

ಮೈಸೂರು: ಮಾಜಿ ಸಿಎಂ ಕೆಂಗಲ್ ಹನುಮಂತಯ್ಯ ಅವರ ಸಾಧನೆ, ತತ್ವಾದರ್ಶಗಳು ಇಂದಿನ ರಾಜ ಕಾರಣಿಗಳಿಗೆ ಅನುಕರಣೀಯ ಎಂದು ಮಾಜಿ ಸಚಿವ ಸಿ.ಎಚ್.ವಿಜಯ್‍ಶಂಕರ್ ತಿಳಿಸಿದರು.

ಜೆಎಲ್‍ಬಿ ರಸ್ತೆಯ ರೋಟರಿ ಐಡಿ ಯಲ್ ಜಾವಾ ಸಭಾಂಗಣದಲ್ಲಿ ಕರ್ನಾ ಟಕ ಸೇನಾ ಪಡೆ ವತಿಯಿಂದ ಆಯೋಜಿ ಸಿದ್ದ ಮಾಜಿ ಸಿಎಂ ಕೆಂಗಲ್ ಹನು ಮಂತಯ್ಯ ಸ್ಮರಣಾರ್ಥ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಮಾತನಾಡಿದರು.

ಕೆಂಗಲ್ ಹನುಮಂತಯ್ಯ ಅವರ ಜೀವಿತಾ ವಧಿ ಕಾಲದಲ್ಲಿದ್ದ ರಾಜಕೀಯ ಬದ್ಧತೆ ಯನ್ನು
ಇಂದು ಮರು ಸ್ಥಾಪಿಸಬೇಕಾ ಗಿದೆ. ಅವರು ವೈಯಕ್ತಿಕ ಆಸ್ತಿ ಮಾಡದಿ ದ್ದರೂ, ಅವರು ಅನುಸರಿಸಿದ ತತ್ವಾದರ್ಶ ಗಳಿಂದ ಸಮಾಜದ ಆಸ್ತಿಯಾಗಿದ್ದರು. ಇಂತಹ ಅಪರೂಪದ ರಾಜಕಾರಣಿಯ ಸ್ಮರಣೆ ಮಾಡುತ್ತಿರುವುದು ನನ್ನ ಸುದೈವ. ಬೆಂಗಳೂರಿನ ವಿಧಾನ ಸೌಧ ನೆನೆದರೆ, ಕೆಂಗಲ್ ಹನುಮಂತಯ್ಯ ಅವರ ಸಾಧನೆ ಪೂರ್ಣವಾಗಿ ಅರ್ಥವಾಗುತ್ತದೆ. ಅಲ್ಲದೆ, ಕರ್ನಾಟಕ ಏಕೀಕರಣದಲ್ಲಿ ಕೆಂಗಲ್ ಅವರ ಪಾತ್ರ ಮಹತ್ವದ್ದು ಎಂದರು.
ವಿವಿಧ ಕ್ಷೇತ್ರ ಸಾಧಕರಾದ ಡಾ.ಸಿ. ವೈ.ಶಿವೇಗೌಡ, ಪಿ.ಶಾಂತರಾಜೇಅರಸ್, ಪಾ.ನಟರಾಜ್, ಸಿ.ರಾಜುಗೌಡ, ನೇಪಾಲ್‍ಕುಮಾರ್, ವಿದ್ವಾನ್ ಸಿದ್ದ ಮಲ್ಲಸ್ವಾಮೀಜಿ, ಹೆಚ್.ಎಸ್.ನಾಗರಾಜ್, ಕೆ.ಟಿ.ಪ್ರಸನ್ನಕುಮಾರ್, ಉಪಮೇಯರ್ ಶಫೀ ಅಹ್ಮದ್ ಅವರಿಗೆ ಕೆಂಗಲ್ ಹನು ಮಂತಯ್ಯ ಸೇವಾ ರತ್ನ ಪ್ರಶಸ್ತಿ ಪ್ರಧಾನ ಮಾಡಿದರು. ನಂತರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಲಾಯಿತು. ವೇದಿಕೆಯಲ್ಲಿ ವಿಪ್ರ ಮುಖಂಡ ಡಾ.ಕೆ.ರಘುರಾಂ, ಶ್ರೀನಿವಾಸ ಗೌಡ, ನಗರ ಪಾಲಿಕೆ ಸದಸ್ಯ ಎಸ್‍ಬಿಎಂ ಮಂಜು, ಬಿ.ಆರ್.ನಟರಾಜ್ ಜೋಯ್ಸ್, ರಾಜ್ಯಾಧ್ಯಕ್ಷ ತೇಜಸ್‍ಗೌಡ ಉಪಸ್ಥಿತರಿದ್ದರು.

Translate »