ಅಶೋಕಪುರಂನಲ್ಲಿ `ಆರೋಗ್ಯ ಮೈಸೂರು’ ಉಚಿತ ಶಿಬಿರ
ಮೈಸೂರು

ಅಶೋಕಪುರಂನಲ್ಲಿ `ಆರೋಗ್ಯ ಮೈಸೂರು’ ಉಚಿತ ಶಿಬಿರ

March 4, 2019

ಮೈಸೂರು: `ಕ್ಯಾನ್ಸರ್ ವಿರುದ್ಧ ಸಮರÀ’ ಸಾರಿರುವ ಕೃಷ್ಣರಾಜ ಕ್ಷೇತ್ರ ಶಾಸಕ ಎಸ್.ಎ.ರಾಮ ದಾಸ್, ಭಾನುವಾರ ಮೈಸೂರಿನ ಅಶೋಕಪುರಂ ಡಾ.ಬಿ.ಆರ್.ಅಂಬೇ ಡ್ಕರ್ ಉದ್ಯಾನವನದ ಎದುರಿನ ಎಂಟಿಎಂ ಸರ್ಕಾರಿ ಶಾಲೆಯಲ್ಲಿ ಆಯೋಜಿಸಿದ್ದ `ಆರೋಗ್ಯ ಮೈಸೂರು’ ಉಚಿತ ಶಿಬಿರದಲ್ಲಿ 56 ಮತ್ತು 60ನೇ ವಾರ್ಡ್ ವ್ಯಾಪ್ತಿಯ 1087 ಮಂದಿಗೆ ವಿವಿಧ ಆರೋಗ್ಯ ತಪಾಸಣೆಗೆ ಒಳಪಡಿಸಲಾಯಿತು.

ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ನಡೆದ ಆರೋಗ್ಯ ಶಿಬಿರದಲ್ಲಿ ಕೆ.ಆರ್.ಆಸ್ಪತ್ರೆ, ಜಯದೇವ ಹೃದ್ರೋಗ ಆಸ್ರತ್ರೆ, ಬಿಜಿಎಸ್ ಅಪೋಲೋ ಆಸ್ಪತ್ರೆ, ನಾರಾಯಣ ಹೃದಯಾಲಯ, ಡಿಆರ್‍ಎಂ ಲ್ಯಾಬ್ಸ್, ಕಾಮಾಕ್ಷಿ ಆಸ್ಪತ್ರೆ, ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ, ಜೆಎಸ್‍ಎಸ್ ದಂತ ವೈದ್ಯಕೀಯ ಆಸ್ಪತ್ರೆ, ಫಾರೂ ಕಿಯಾ ದಂತ ವೈದ್ಯಕೀಯ ಆಸ್ಪತ್ರೆ, ಸರ್ಕಾರಿ ಆಯುರ್ವೇದ, ಯೋಗ ಮತ್ತು ಪ್ರಕೃತಿ ವಿದ್ಯಾಲಯಸೇರಿದಂತೆ ನಾನಾ ಆಸ್ಪತ್ರೆಗಳ ವಿವಿಧ ವಿಭಾಗಗಳ ತಜ್ಞ ವೈದ್ಯರು, ವಿದ್ಯಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡು ತಪಾಸಣೆ ನಡೆಸಿದರು.

ಮಹಾವೀರ್ ಕಣ್ಣಾಸ್ಪತ್ರೆ, ಅನ್ನಪೂರ್ಣ ಕಣ್ಣಾಸ್ಪತ್ರೆ, ಪಿಕೆಟಿಬಿ ಸ್ಯಾನಿಟೋರಿಯಂ, ಜಿಲ್ಲಾ ಕ್ಷಯರೋಗ ಘಟಕ, ಜಿಲ್ಲಾ ಆರೋಗ್ಯಾಧಿಕಾರಿಗಳ ವೈದ್ಯರ ದೊಡ್ಡ ತಂಡವೇ ಶಿಬಿರದಲ್ಲಿ ಪಾಲ್ಗೊಂಡಿತ್ತು.

ಶಿಬಿರದಲ್ಲಿ ಹೃದಯ ರೋಗಕ್ಕೆ ಸಂಬಂಧಿಸಿದ 186, ಚರ್ಮ ರೋಗ- 53, ಮಧುಮೇಹ- 317, ಇಎನ್‍ಟಿ- 69, ಶÀಸ್ತ್ರ ಚಿಕಿತ್ಸೆ-28, ಇಸಿಜಿ-115, ಎಕೋ ಪರೀಕ್ಷೆ- 68, ರಕ್ತ ಪರೀಕ್ಷೆ- 302, ಆಯುರ್ವೇದ- 49, ಮೂಳೆ ರೋಗ- 67, ಕ್ಯಾನ್ಸರ್ ಸಂಬಂಧಿತ- 107, ನರ ರೋಗ-20, ದಂತ ತಪಾ ಸಣೆ- 96, ಸ್ತ್ರೀರೋಗ ಮತ್ತು ಪ್ರಸೂತಿ- 38, ಮಕ್ಕಳ ತಪಾಸಣೆ- 45, ಕ್ಷಯ ರೋಗ- 49, ಜನರ ತಪಾಸಣೆ ನಡೆಸ ಲಾಯಿತು. 250 ಜನರಿಗೆ ನೇತ್ರ ತಪಾ ಸಣೆ ನಡೆಸಿ 85 ಮಂದಿಗೆ ಕನ್ನಡಕ ವಿತರಿಸಲಾಯಿತು.

ಇದೆ ಸಂದರ್ಭದಲ್ಲಿ ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಗಳಾದ ವಿಧವಾ, ವಿಕಲ ಚೇತನ, ಇಂದಿರಾಗಾಂಧಿ ವೃದ್ಧಾಪ್ಯ ಪಿಂಚಣಿಯ ಮಂಜೂರಾತಿ ಪತ್ರಗಳನ್ನು ವಿತರಿಸಲಾಯಿತು. ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ 5 ಅಡಿ ಎತ್ತರದ ಭಾವಚಿತ್ರ ಚಿತ್ರಿಸಿ ದಾಖಲೆ ನಿರ್ಮಿಸಿದ ಅಭಿಲಾಷ್ ಕೋರಿ ಅವರಿಗೆ ಸನ್ಮಾನಿಸಲಾಯಿತು.

ಶಿಬಿರದಲ್ಲಿ ಶಾಸಕ ಎಸ್.ಎ. ರಾಮ ದಾಸ್ ಅವರೊಂದಿಗೆ ಮಾಜಿ ಮೇಯರ್ ಪುರುಷೋತ್ತಮ್, ಪಾಲಿಕೆ ಸದಸ್ಯರಾದ ಬೇಗಂ ಪಲ್ಲವಿ, ಶಾರದಮ್ಮ ಈಶ್ವರ್, ಛಾಯಾ ದೇವಿ, ಆದಿಕರ್ನಾಟಕ ಮಹಾಸಭಾದ ಅಧ್ಯಕ್ಷ ವಿಜಯಕುಮಾರ್, ಸೇಫ್ ವೀಲ್ಸ್‍ನ ಪ್ರಶಾಂತ್, ದೊಡ್ಡಗರಡಿ ಅಧ್ಯಕ್ಷ ಷಣ್ಮುಗ, ಬಿಜೆಪಿ ಮುಖಂಡ ರಾದ ಈಶ್ವರ್, ಜೆ.ರವಿ, ಬಿಲ್ಲಯ್ಯ, ಕೃಷ್ಣ, ಮಧುಸೂದನ್, ಪುನೀತ್, ಮಹದೇವ್, ನಾಗರತ್ನ, ಸತ್ಯಪ್ರಕಾಶ್, ರಾಜಣ್ಣ, ರಾಜು, ಹರ್ಷ, ಪಾಂಡು ಆಯುಷ್ ವೈದ್ಯ ರಾದ ಡಾ.ಲಕ್ಷ್ಮೀನಾರಾಯಣ್, ಡಾ. ಸೀತಾಲಕ್ಷ್ಮಿ ಇನ್ನಿತರರು ಉಪಸ್ಥಿತರಿದ್ದರು.

Translate »