ಬೇಸಿಗೆ ಬೇಗೆಯಿಂದ ಚಾಮುಂಡಿಬೆಟ್ಟ ರಕ್ಷಣೆಗೆ ಕಣ್ಗಾವಲು
ಮೈಸೂರು

ಬೇಸಿಗೆ ಬೇಗೆಯಿಂದ ಚಾಮುಂಡಿಬೆಟ್ಟ ರಕ್ಷಣೆಗೆ ಕಣ್ಗಾವಲು

March 4, 2019

ಮೈಸೂರು: ಬೇಸಿಗೆ ಬೇಗೆ ಎಲ್ಲೆಡೆ ತೀವ್ರಗೊಳ್ಳುತ್ತಿದ್ದು, ಅಗ್ನಿ ಅವಘಡ ಗಳು ಹೆಚ್ಚಾಗುತ್ತಿವೆ. ಬಂಡೀಪುರ ಅರಣ್ಯ ಪ್ರದೇಶದಲ್ಲಿ ಭಾರಿ ಕಾಡ್ಗಿಚ್ಚು ಸಂಭವಿಸಿ ಹಾನಿಯಾದ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟದ ಅರಣ್ಯ ಪ್ರದೇಶವನ್ನು ರಕ್ಷಿಸಲು ತೀವ್ರ ನಿಗಾವಹಿಸಲಾಗಿದೆ.

ಧಾರ್ಮಿಕ ಹಾಗೂ ಪ್ರೇಕ್ಷಣಿಯ ಸ್ಥಳ ಗಳಲ್ಲಿ ಒಂದಾಗಿರುವ ಚಾಮುಂಡಿಬೆಟ್ಟಕ್ಕೆ ದೇಶ ಹಾಗೂ ವಿದೇಶದಿಂದ ದಿನದಿಂದ ದಿನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಹಾಗೂ ಭಕ್ತರು ಆಗಮಿಸುತ್ತಿದ್ದಾರೆ. ಮೈಸೂರು ನಗರಕ್ಕೆ ಹೊಂದಿಕೊಂಡಂತಿ ರುವ ಬೆಟ್ಟ ಕಾಡ್ಗಿಚ್ಚಿನಿಂದ ರಕ್ಷಣೆ ಮಾಡು ವುದೇ ಅರಣ್ಯ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ. ಕೆಲವೆಡೆ ವಸತಿ ಪ್ರದೇಶಕ್ಕೆ ಹೊಂದಿಕೊಂಡಂತಿದ್ದರೆ, ಮತ್ತೆ ಕೆಲವೆಡೆ ಕೃಷಿ ಹಾಗೂ ಪಾಳು ಭೂಮಿ, ನಿರ್ಮಾಣ ಹಂತದಲ್ಲಿರುವ ಬಡಾವಣೆಗೆ ಹೊಂದಿ ಕೊಂಡಂತೆ ಬೆಟ್ಟದ ಪ್ರದೇಶವಿರುವುದ ರಿಂದ ಅರಣ್ಯ ಇಲಾಖೆ ಹದ್ದಿನ ಕಣ್ಣಿಟ್ಟು ಕಾಯುವಂತಾಗಿದೆ. ಈ ನಡುವೆ ಬೆಟ್ಟಕ್ಕೆ ಬರುವ ಪ್ರವಾಸಿಗರು ಹಾಗೂ ರಿಂಗ್ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾ ರರು ಧೂಮಪಾನ ಮಾಡಿ ಬೀಡಿ, ಸಿಗ ರೇಟನ್ನು ಕಿಡಿ ಆರಿಸದೆ ಬಿಸಾಡಿ ಅಜ್ಞಾನ ಪ್ರದರ್ಶಿಸುವುದು ಅರಣ್ಯ ಇಲಾಖೆ ಸಿಬ್ಬಂ ದಿಗೆ ತಲೆ ನೋವಾಗಿ ಪರಿಣಮಿಸಿದೆ.

ಕಣ್ಗಾವಲು: ಚಾಮುಂಡಿಬೆಟ್ಟ ಸುಮಾರು 1800 ಎಕರೆಗೂ ಹೆಚ್ಚಿನ ವಿಸ್ತೀರ್ಣ ಹೊಂದಿದೆ. ಪ್ರತಿ ವರ್ಷ ನವೆಂಬರ್‍ನಿಂದ ಏಪ್ರಿಲ್ ವರೆಗೆ ಕಿಡಿಗೇಡಿಗಳಿಂದ ಬೆಟ್ಟವನ್ನು ರಕ್ಷಿಸು ವುದಕ್ಕೆ ಹರಸಾಹಸ ಪಡಬೇಕಾಗುತ್ತದೆ. ಬೆಟ್ಟದ ಸುತ್ತಲೂ ಇರುವ ಖಾಲಿ ಜಾಗದಲ್ಲಿ ಜೂಜು, ಮದ್ಯಪಾನ ಸೇರಿದಂತೆ ಮೋಜು ಮಾಡಲು ಬರುವ ವಿಕೃತ ಮನಸ್ಸಿನ ಕೆಲ ಕಿಡಿಗೇಡಿಗಳು ನಡೆಸಬಹುದಾದ ಕೃತ್ಯವನ್ನು ತಡೆಗಟ್ಟಲು 70 ಮಂದಿ ಸಿಬ್ಬಂದಿ ಹಗಲಿ ರುಳು ಶ್ರಮಿಸುತ್ತಿದ್ದಾರೆ. ಬೆಟ್ಟದ ವಿವಿಧೆಡೆ ಯಿರುವ ಮೂರು ವಾಚ್ ಟವರ್‍ಗಳ ಮೇಲಿಂದ ಸೂಕ್ಷ್ಮವಾಗಿ ವೀಕ್ಷಿಸಲು ಸಿಬ್ಬಂದಿಯನ್ನು ನೇಮಿಸಲಾಗಿದೆ.

ಬೆಟ್ಟದ ಪಾದದ(ರೇಸ್‍ಕೋರ್ಸ್ ಕಡೆ)ಬಳಿಯಿರುವ ಕುಂತಿಗಲ್ ಬೆಟ್ಟ, ಜ್ವಾಲಾಮುಖಿ ಗುಡ್ಡ(ಬೆಟ್ಟದಿಂದ ಉತ್ತನ ಹಳ್ಳಿ ರಸ್ತೆ), ಕೂಡ್ನಾರೆ ಗುಡ್ಡ(ನಂಜನ ಗೂಡು ರಸ್ತೆ ಕಡೆಗೆ)ಗಳಲ್ಲಿ ಟವರ್ ನಿರ್ಮಾಣ ಮಾಡಲಾಗಿದ್ದು, ಈ ಟವರ್ ನಲ್ಲಿ ಹಗಲಿನ ವೇಳೆ ಓರ್ವ ಸಿಬ್ಬಂದಿ ಸುತ್ತಲೂ ದೃಷ್ಟಿ ಹಾಯಿಸಿ ಬೆಂಕಿಯಿಂದ ಬೆಟ್ಟವನ್ನು ರಕ್ಷಿಸುವುದಕ್ಕೆ ಶ್ರಮಿಸುತ್ತಿದ್ದಾರೆ.

ಫೈರ್ ಲೈನ್ ನಿರ್ಮಾಣ: ಬೆಟ್ಟದ ಸುತ್ತಲೂ ಸುಮಾರು 35 ಕಿ.ಮೀ ವಿಸ್ತೀರ್ಣ ಫೈರ್‍ಲೈನ್ ನಿರ್ಮಿಸಲಾಗಿದೆ. ಅಲ್ಲದೆ ಬೆಟ್ಟದ ವಿವಿಧೆಡೆ ತುಂಡು ತುಂಡಾಗಿ ಸುಮಾರು 80 ಕಿ.ಮೀ ವಿಸ್ತೀರ್ಣ ದಲ್ಲಿ ಫೈರ್‍ಲೈನ್ ನಿರ್ಮಿಸಲಾಗಿದೆ. ಮೂರು ಮೀಟರ್ ಅಗಲವಿರುವ ಫೈರ್‍ಲೈನ್‍ನಿಂದ ಆಕಸ್ಮಿಕವಾಗಿ ಬೆಂಕಿ ಬಿದ್ದರೆ, ಅದು ಬೇರೆಡೆಗೆ ವ್ಯಾಪಿಸುವುದನ್ನು ತಡೆಯಲಿದೆ. ಇದರಿಂದಾಗಿ ಫೈರ್‍ಲೈನ್ ನಿರ್ಮಿಸಿ, ಆ ಭಾಗದಲ್ಲಿರುವ ಗಿಡಗಂಟಿಗಳನ್ನು ತೆಗೆಯ ಲಾಗುತ್ತದೆ. ಇದರಿಂದ ಬೆಂಕಿ ಹತೋಟಿಗೆ ತರ ಬಹುದಾಗಿದೆ. ಈ ಹಿನ್ನೆಲೆಯಲ್ಲಿ ಫೈರ್ ಲೈನ್ ನಿರ್ಮಿಸುವುದು ಅಗತ್ಯವಾಗಿದೆ.

ಫೈರ್ ಜೆಟ್ ಹಾಗೂ ಮೋಟಾರ್ ಸ್ಪ್ರೇಯರ್: ಬೆಂಕಿ ಆಕಸ್ಮಿಕ ಘಟನೆಯನ್ನು ಎದುರಿಸಲು 70 ಸಿಬ್ಬಂದಿಗಳೊಂದಿಗೆ 500 ಲೀಟರ್ ಸಾಮಥ್ರ್ಯದ ನೀರಿನ ಟ್ಯಾಂಕ್ ಒಳಗೊಂಡಿರುವ ವಾಟರ್ ಜೆಟ್ ಬಳಸಲಾ ಗುತ್ತಿದೆ. ಎರಡು ಹೆಚ್‍ಪಿ ಸಾಮಥ್ರ್ಯದ ಮೋಟಾರ್ ಇದ್ದು, ಸುಮಾರು 35ರಿಂದ 40 ಅಡಿ ಎತ್ತರದವರೆಗೂ ನೀರನ್ನು ಚಿಮುಕಿಸಬಹು ದಾಗಿದೆ. ಇದರೊಂದಿಗೆ 7 ಮೋಟಾರ್ ಚಾಲಿತ 25 ಲೀಟರ್ ಸಾಮಥ್ರ್ಯದ ಸ್ಪ್ರೇಯರ್ ಕ್ಯಾನ್‍ಗಳನ್ನು ಬಳಸಲಾಗುತ್ತಿದೆ.

ಡಿಸಿಎಫ್ ಡಾ.ಕೆ.ಸಿ.ಪ್ರಶಾಂತ್ ಕುಮಾರ್ ನೇತೃತ್ವದಲ್ಲಿ ಆರ್‍ಎಫ್‍ಓ ಗೋವಿಂದ ರಾಜು, ಡಿಆರ್‍ಎಫ್ ವಿನುತಾ ಸೇರಿದಂತೆ ಇನ್ನಿತರರು ಬೆಟ್ಟದ ಸಂರಕ್ಷಣೆಗೆ ಶ್ರಮಿಸು ತ್ತಿದ್ದು, ದಿನಕ್ಕೆ ಐದಾರು ಬಾರಿ ಗಸ್ತು ತಿರು ಗುವ ಮೂಲಕ ಕಾಡ್ಗಿಚ್ಚಿನಿಂದ ರಕ್ಷಿಸುವ ಮಹತ್ತರ ಸವಾಲಿನ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ.

– ಎಂ.ಟಿ.ಯೋಗೇಶ್ ಕುಮಾರ್

Translate »