ನಗರ ಸುತ್ತಲು ಹೊರಟರೆ ಸೋಂಕು ಹರಡಲು ಕಾರಣವಾದಂತೆ: ಡಾ.ಅನಿಲ್
ಮೈಸೂರು

ನಗರ ಸುತ್ತಲು ಹೊರಟರೆ ಸೋಂಕು ಹರಡಲು ಕಾರಣವಾದಂತೆ: ಡಾ.ಅನಿಲ್

June 9, 2021

ಮೈಸೂರು, ಜೂ.8(ಎಂಕೆ)- ಕೊರೊನಾ ಸೋಂಕು ತಡೆಗೆ ಸರ್ಕಾರ ಲಾಕ್‍ಡೌನ್ ಘೋಷಿಸುವುದಕ್ಕೂ ಮುನ್ನವೇ ಜನರೇ ಸ್ವಯಂ ಲಾಕ್‍ಡೌನ್ ಮಾಡಿ ಕೊಳ್ಳಬೇಕು. ಲಾಕ್‍ಡೌನ್ ಮುಗೀತು, ಇನ್ನು ಸುತ್ತಾಡ ಬಹುದು ಎಂದುಕೊಂಡರೆ ಸೋಂಕು ಹೆಚ್ಚಲು ನಾವೇ ಅವಕಾಶ ಮಾಡಿಕೊಟ್ಟಂತೆ ಆಗುತ್ತದೆ ಎಂದು ಟ್ರಾಮಾ ಕೇರ್ ಸೆಂಟರ್‍ನ ಟ್ರಯಾಜ್ ಕೇಂದ್ರದಲ್ಲಿ(ಸೋಂಕಿತರ ದಾಖಲಾತಿ ಮತ್ತು ಸಲಹೆ) ನಿರ್ವಹಣೆ ಮಾಡುತ್ತಿರುವ ಜೆಎಸ್‍ಎಸ್ ಆಸ್ಪತ್ರೆಯ ಕಮ್ಯೂನಿಟಿ ಮೆಡಿಸನ್ ವಿಭಾಗದ ಡಾ.ಅನಿಲ್ ಬಿಳಿಮಲೆ ಸಲಹೆ ನೀಡಿದರು.

ಕೊರೊನಾ ಸಂಕಷ್ಟ ಸ್ಥಿತಿ ನಿರ್ವಹಣೆ, ಸೋಂಕು ನಿಯಂತ್ರಣ ಕುರಿತು ‘ಮೈಸೂರು ಮಿತ್ರ’ನೊಂದಿಗೆ ಮಂಗಳವಾರ ಮಾತನಾಡಿದ ಅವರು, ಜೆಎಸ್‍ಎಸ್ ಆಸ್ಪತ್ರೆಯ 20 ವೈದ್ಯರು ವಿವಿಧ ಸರ್ಕಾರಿ ಆಸ್ಪತ್ರೆ ಗಳಲ್ಲಿ ಕೆಲಸ ಮಾಡುತ್ತಿದ್ದೇವೆ. ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದಂತೆ ಜಿಲ್ಲಾಡಳಿತದ ಮನವಿ ಮೇರೆಗೆ ಕರ್ತವ್ಯ ನಿರ್ವಹಿ ಸುತ್ತಿದ್ದೇವೆ. ಕೊರೊನಾ ಮೊದಲ ಅಲೆ ಸಂದರ್ಭದಲ್ಲಿಯೂ ಸರ್ಕಾರಿ ಆಸ್ಪತ್ರೆ ಗಳಲ್ಲಿ ಸೇವೆ ಸಲ್ಲಿಸಿದ್ದೇನೆ. ಅಲ್ಲದೆ ವಿಶ್ವ ಆರೋಗ್ಯ ಸಂಸ್ಥೆಯಿಂದ ದೇಶದ ವಿವಿಧೆಡೆ ಹಾಗೂ ಹೊರದೇಶದಲ್ಲಿಯೂ ಕೆಲಸ ಮಾಡಿದ್ದೇನೆ. ಹೆಚ್ಚಾಗುತ್ತಿರುವ ಕೊರೊನಾ 2ನೇ ಅಲೆ ತಡೆಯುವುದರ ಜೊತೆಗೆ 3ನೇ ಅಲೆಗೆ ಮುನ್ನೆಚ್ಚರಿಕಾ ಕ್ರಮವಾಗಿ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕಾಗಿದೆ ಎಂದರು.
ಕೊರೊನಾ ಪಾಸಿಟಿವಿಟಿ ರೇಟ್ ಆಧರಿಸಿಯೇ ಲಾಕ್‍ಡೌನ್ ಮಾಡಬೇಕು. ಗ್ರಾಮೀಣ ಪ್ರದೇಶದಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ ಶೇ.5ಕ್ಕಿಂತ ಹೆಚ್ಚಾ ದರೆ ಲಾಕ್‍ಡೌನ್ ಮುಂದುವರಿಸಬೇಕು. ಜಿಲ್ಲೆಗಳಲ್ಲಿ ಶೇ.10 ಮತ್ತು ರಾಜ್ಯದಲ್ಲಿ ಶೇ.20ರಷ್ಟು ಪಾಸಿ ಟಿವಿಟಿ ರೇಟ್ ಇದ್ದರೆ ಲಾಕ್‍ಡೌನ್ ಜಾರಿ ಗೊಳಸಬೇಕು. ಇದರಿಂದ ಸೋಂಕು ಹರಡು ವುದನ್ನು ನಿಯಂತ್ರಿಸುವುದರ ಜೊತೆಗೆ ಸಾವಿಗೀಡಾಗುವವರ ಸಂಖ್ಯೆಯೂ ಕಡಿಮೆ ಯಾಗುತ್ತದೆ ಎಂದು ತಿಳಿಸಿದರು.

Iಟಿಜiಚಿಟಿ ಅouಟಿಛಿiಟ oಜಿ ಒeಜiಛಿಚಿಟ ಖeseಚಿಡಿಛಿh (Iಅಒಖ) ಪ್ರಕಾರ ದೇಶದಲ್ಲಿ ಶೇ.40ಮಂದಿಗೆ ಈಗಾಗಲೇ ಕೊರೊನಾ ಸೋಂಕು ತಗುಲಿದೆ. ಅಧ್ಯಯನಗಳ ಪ್ರಕಾರ ಸೋಂಕು ತಗುಲಿದವರಲ್ಲಿ ಮತ್ತೆ ಸೋಂಕು ಕಾಣಿಸುವುದು ಬಹಳ ಕಡಿಮೆ. ಆದ್ದರಿಂದ ಹಂತ ಹಂತವಾಗಿ ಲಸಿಕೆ ವಿತರಣೆಯಾಗಬೇಕು. ದೇಶದ ಒಟ್ಟು ಜನಸಂಖ್ಯೆಗೆ ಲಸಿಕೆ ನೀಡಬೇಕಾದರೆ ಕನಿಷ್ಠ 2 ವರ್ಷ ಬೇಕು. ಕೊರೊನಾ 3ನೇ ಅಲೆ ಚಿಕ್ಕಮಕ್ಕಳ ಮೇಲೆ ಪರಿಣಾಮ ಬೀರುವುದರಿಂದ ಪೂರ್ವ ಸಿದ್ಧತೆ ಅಗತ್ಯ ಎಂದರು.

ಸಹಕಾರ: ಟ್ರಾಮಾ ಕೇರ್ ಕೇಂದ್ರ ಆರಂಭ ವಾದಾಗ ಸರಿಯಾದ ವೈದ್ಯಕೀಯ ಸಲಕರಣೆಗಳು, ಬೆಡ್‍ಗಳಿಲ್ಲದೆ ಸಾಕಷ್ಟು ತೊಂದರೆ ಪಡಬೇಕಾಯಿತು. ಆಸ್ಪತ್ರೆಗೆ ಬರುವ ಕೊರೊನಾ ಸೋಂಕಿತರು ಚಿಕಿತ್ಸೆ ಪಡೆದು ಕೊಳ್ಳಬೇಕಾ ಅಥವಾ ಮನೆಯಲ್ಲಿ ಐಸೋ ಲೇಷನ್ ಆಗಬೇಕು ಎಂಬ ಸಲಹೆ ನೀಡುವುದೇ ಕಷ್ಟವಾಗಿತ್ತು. ಇಂಥ ಸ್ಥಿತಿಯಲ್ಲಿ ಮೈಸೂರಿನ ಹಲವು ದಾನಿಗಳು ಸಹಕಾರ ನೀಡಿದರು.

ಇಂದು 100ಕ್ಕೂ ಹೆಚ್ಚು ಬೆಡ್‍ಗಳಿದ್ದು, ಸಾಕಷ್ಟು ಮಂದಿಗೆ ಚಿಕಿತ್ಸೆ ದೊರೆತಿದೆ. ಜನರಲ್ಲಿ ಕೊರೊನಾ ಸೋಂಕು ಹರಡದಂತೆ ತಾವೇ ಮುಂಜಾಗ್ರತೆ ವಹಿಸಿಕೊಳ್ಳುವ ಸ್ವಯಂ ಶಿಸ್ತು ಅಳವಡಿಸಿಕೊಳ್ಳಬೇಕು ಎಂದು ಡಾ.ಅನಿಲ್ ಬಿಳಿಮಲೆ ಸಲಹೆ ನೀಡಿದರು.

Translate »