ಮಾ.14ರಿಂದ ಗೋಲ್ಡನ್ ಚಾರಿಯಟ್ 2.0 ಮೊದಲ ಪ್ರವಾಸ ಆರಂಭ
ಮೈಸೂರು

ಮಾ.14ರಿಂದ ಗೋಲ್ಡನ್ ಚಾರಿಯಟ್ 2.0 ಮೊದಲ ಪ್ರವಾಸ ಆರಂಭ

February 16, 2021

ಮೈಸೂರು,ಫೆ.15(ಆರ್‍ಕೆ)-ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ಗೋಲ್ಡನ್ ಚಾರಿಯಟ್ ಲಕ್ಸುರಿ ಆನ್ ವ್ಹೀಲ್ಸ್ ಪ್ರವಾಸವನ್ನು ಮಾರ್ಚ್ 14ರಿಂದ 21ರವರೆಗೆ ಏರ್ಪಡಿಸಲಾಗಿದೆ. ಪ್ರೈಡ್ ಆಫ್ ಕರ್ನಾಟಕ ಮತ್ತು ಜುವೆಲ್ಸ್ ಆಫ್ ಸೌತ್ ಎಂಬ ಎರಡು ಪ್ಯಾಕೇಜ್‍ಗಳಲ್ಲಿ ದಿ ಇಂಡಿಯನ್ ರೈಲ್ವೇ ಕೇಟರಿಂಗ್ ಅಂಡ್ ಟೂರಿಸಂ ಕಾರ್ಪೊರೇಷನ್ (Iಖಅಖಿಅ) ಸಂಸ್ಥೆಯು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಏSಖಿಆಅ) ಸಹಯೋಗದಲ್ಲಿ ಗೋಲ್ಡನ್ ಚಾರಿಯಟ್ ಪ್ರವಾಸ ಹಮ್ಮಿ ಕೊಳ್ಳಲಾಗಿದೆ. ‘ಗಾಲಿಗಳ ಮೇಲೆ ಅರಮನೆ’ ಎಂದೇ ಖ್ಯಾತಿ ಯಾಗಿದ್ದ ಈ ಐಷರಾಮಿ ರೈಲುಗಾಡಿಯನ್ನು ಕೆಎಸ್ ಟಿಡಿಸಿಯು 10 ವರ್ಷಗಳ ಅವಧಿಗೆ 2019ರ ನವೆಂಬರ್ ಮಾಹೆಯಲ್ಲಿ ಒಪ್ಪಂದ ಮಾಡಿಕೊಂಡು ಐಆರ್‍ಸಿಟಿಸಿಗೆ ಹಸ್ತಾಂತರಿಸಿತ್ತು. ಅದಕ್ಕೂ ಮೊದಲು ಪ್ರವಾಸಿಗರ ಕೊರತೆಯಿಂದಾಗಿ 41 ಕೋಟಿ ರೂ. ನಷ್ಟ ಅನುಭವಿಸಿದ್ದರಿಂದ ಸರ್ಕಾರ ಈ ರೈಲನ್ನು ಐಆರ್‍ಸಿಟಿಸಿಗೆ ವಹಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

18 ಬೋಗಿಗಳಿರುವ ರೈಲಿನ ಒಳಭಾಗವನ್ನು ಸುಸಜ್ಜಿತ ವಾಗಿ ರೂಪುಗೊಳಿಸಿದ್ದು, ಪೀಠೋಪಕರಣ, ಹವಾ ನಿಯಂತ್ರಿತ ಸೌಲಭ್ಯಗೊಂದಿಗೆ ಸಜ್ಜುಗೊಳಿಸಿದ್ದು, ಅತ್ಯಾ ಕರ್ಷಣೆಯಿಂದ ಕಂಗೊಳಿಸುವಂತೆ ಮಾಡಲಾಗಿದೆ. ಹೊರ ಭಾಗದಲ್ಲಿ ಯಕ್ಷಗಾನ ಕಿರೀಟದ ದೃಶ್ಯಗಳೊಂದಿಗೆ ಆಕ ರ್ಷಕ ಚಿತ್ತಾರಗಳು ಪ್ರವಾಸಿಗರ ಗಮನ ಸೆಳೆಯುತ್ತಿವೆ.

ಮಾರ್ಚ್ 14ರಂದು ಬೆಂಗಳೂರಿನ ಯಶವಂತಪುರ ರೈಲ್ವೆ ನಿಲ್ದಾಣದಿಂದ ಪ್ರಯಾಣ ಆರಂಭಿಸುವ ಗೋಲ್ಡನ್ ಚಾರಿಯಟ್ ರೈಲಿನಲ್ಲಿ ಪ್ರವಾಸ ಕೈಗೊಳ್ಳಲು ಐಆರ್‍ಸಿಟಿಸಿ ಮಾಹಿತಿ ಬ್ರೋಷರ್ ಬಿಡುಗಡೆ ಮಾಡಿದೆ. ಇಬ್ಬರಿಗೆ 3.20 ಲಕ್ಷ ರೂ., ಒಬ್ಬರಿಗೆ 2.40 ಲಕ್ಷ ರೂ. ಪ್ರವಾಸ ದರ ನಿಗದಿ ಮಾಡಲಾಗಿದ್ದು, ಪ್ರಾರಂಭದ ಕೊಡುಗೆಯಾಗಿ ಆಕರ್ಷಕ ರಿಯಾಯಿತಿಯನ್ನು ಘೋಷಿಸಲಾಗಿದೆ.

ದಿ ಪ್ರೈಡ್ ಆಫ್ ಕರ್ನಾಟಕ (6 ರಾತ್ರಿ ಮತ್ತು 7 ಹಗಲು) ಪ್ಯಾಕೇಜ್‍ನಲ್ಲಿ ಬೆಂಗಳೂರಿನಿಂದ ಹೊರಟು ಬಂಡೀಪುರ, ಮೈಸೂರು, ಹಳೇಬೀಡು, ಚಿಕ್ಕಮಗಳೂರು, ಹಂಪಿ, ಬಾದಾಮಿ, ಗೋವಾಗೆ ತೆರಳಿ, ಬೆಂಗಳೂರಿಗೆ ಮರಳಲಿದೆ. ಜುವೆಲ್ಸ್ ಆಫ್ ಸೌತ್ ಪ್ಯಾಕೇಜ್‍ನಲ್ಲಿ ಬೆಂಗಳೂರಿನಿಂದ ಮೈಸೂರು, ಹಂಪಿ, ಮಹಾಬಲಿಪುರಂ, ತಂಜಾವೂರು, ಚೆಟ್ಟಿನಾಡ್, ಕೊಚ್ಚಿ, ಕುಮಾರಕೋಮ್ ಪ್ರವಾಸ ಮುಗಿಸಿ ಬೆಂಗಳೂರಿಗೆ ಹಿಂದಿರುಗುವುದು. ಮಾರ್ಚ್ ಪ್ರವಾಸ ಪ್ಯಾಕೇಜ್ ನಂತರ ಅಕ್ಟೋಬರ್ ಮಾಹೆಯಲ್ಲಿ ಮತ್ತೆ ಗೋಲ್ಡನ್ ಚಾರಿಯಟ್ ಪ್ರವಾಸ ಆರಂಭವಾಗ ಲಿದೆ ಎಂದು ಐಆರ್‍ಸಿಟಿಸಿ ಮಾಹಿತಿ ನೀಡಿದೆ.

Translate »