ಮೈಸೂರು ಜಿಲ್ಲೆಯಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಭಾರೀ ಗೋಲ್‍ಮಾಲ್
ಮೈಸೂರು

ಮೈಸೂರು ಜಿಲ್ಲೆಯಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಭಾರೀ ಗೋಲ್‍ಮಾಲ್

January 5, 2022

ಮೈಸೂರು,ಜ.4(ಎಸ್‍ಬಿಡಿ)- ಮೈಸೂರು ಜಿಲ್ಲೆಯಲ್ಲಿ ಮಹತ್ವದ ಗಂಗಾ ಕಲ್ಯಾಣ ಯೋಜನೆಯಲ್ಲಿ ಅವ್ಯವಹಾರ ನಡೆದಿದ್ದು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಫಾ ರಸು ಮಾಡಲಾಗಿದೆ ಎಂದು ವಿಧಾನ ಪರಿಷತ್ತಿನ ವಿಶೇಷ ಸದನ ಸಮಿತಿ ಅಧ್ಯಕ್ಷ ಡಾ. ವೈ.ಎ.ನಾರಾಯಣಸ್ವಾಮಿ ತಿಳಿಸಿದರು.
ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಮಂಗಳವಾರ ವಿವಿಧ ನಿಗಮಗಳ ಅಧಿ ಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗ, ಅಲ್ಪ ಸಂಖ್ಯಾತರು, ಬಡವರ ಅಭಿವೃದ್ಧಿ ನಿಟ್ಟಿನಲ್ಲಿ ಗಂಗಾ ಕಲ್ಯಾಣ ಹಾಗೂ ಭೂ ಒಡೆತನ ಯೋಜನೆಗಳು ಮಹತ್ವದ್ದಾಗಿವೆ. ಆದರೆ ಗಂಗಾ ಕಲ್ಯಾಣ ಯೋಜನೆ ವಿವಿಧ ನಿಗಮ ಗಳಡಿಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ವಿಧಾನಪರಿಷತ್‍ನಲ್ಲಿ ಗಂಭೀರ ಚರ್ಚೆ ನಡೆದು, ಐದು ವರ್ಷದಲ್ಲಾದ ಅವ್ಯವಹಾರದ ಬಗ್ಗೆ ತನಿಖೆ ನಡೆಸಲು ವಿಶೇಷ ಸದನ ಸಮಿತಿ ರಚಿಸಲಾಯಿತು. ಇಂದು ಮೈಸೂರು ಜಿಲ್ಲೆಯ ಪಿರಿಯಾ ಪಟ್ಟಣ ಹಾಗೂ ಹುಣಸೂರು ತಾಲೂಕು ಗಳಲ್ಲಿ ಪರಿಶೀಲನೆ ನಡೆಸಿದ ನಂತರ ಅಧಿಕಾರಿಗಳೊಂದಿಗೆ ಸಭೆ ನಡೆಸ ಲಾಗಿದೆ ಎಂದು ವಿವರಿಸಿದರು.

ಶೇ.25ರಷ್ಟು ವ್ಯತ್ಯಾಸ: ಕರ್ನಾಟಕ ಪಾರ ದರ್ಶಕ ಸರಬರಾಜು ಕಾಯ್ದೆ ಪಾಲನೆಯೊಂ ದಿಗೆ ಟೆಂಡರ್ ಪ್ರಕ್ರಿಯೆ ನಡೆಸಲಾಗಿ ದೆಯೇ?. ಇದರಲ್ಲಿ ಏನಾದರೂ ವ್ಯತ್ಯಯ ವಾಗಿದೆಯೇ?. ಫಲಾನುಭವಿಗಳ ಜಮೀನಿ ನಲ್ಲೇ ಯೋಜನೆ ಅನುಷ್ಠಾನವಾಗಿದೆಯೇ? ಕೊಳವೆಬಾವಿ(ಬೋರ್‍ವೆಲ್)ಯಲ್ಲಿ ನೀರು ಬಂದಿದೆಯೇ? ಬೋರ್‍ವೆಲ್‍ಗಳ ಆಳ ಹಾಗೂ ಬಿಲ್‍ನಲ್ಲಿ ವ್ಯತ್ಸಾಸವಿದೆಯೇ?. ಅಳ ವಡಿಸಲಾಗಿರುವ ಮೋಟರ್, ಪಂಪ್, ಕೇಬಲ್ ಗುಣಮಟ್ಟ ಹೇಗಿದೆ? ಹೀಗೆ ಸಮಗ್ರ ವಾಗಿ ಪರಿಶೀಲನೆ ನಡೆಸಲಾಗಿದೆ. ಮೈಸೂರು ಜಿಲ್ಲೆಯಲ್ಲಿ 60-70 ಸಾವಿರ ಬೋರ್‍ವೆಲ್‍ಗಳಿದ್ದು, ಪಿರಿಯಾಪಟ್ಟಣ ಹಾಗೂ ಹುಣಸೂರು ತಾಲೂಕಿನಲ್ಲಿ ರ್ಯಾಂಡಮ್ ಆಗಿ ಹಲವು ಬೋರ್‍ವೆಲ್‍ಗಳ ಪರಿಶೀಲನೆ ನಡೆಸಿದ್ದು, ಶೇ.25ರಷ್ಟು ವ್ಯತ್ಯಾಸ ಕಂಡು ಬಂದಿದೆ ಎಂದು ತಿಳಿಸಿದರು.

ಕ್ರಮಕ್ಕೆ ಶಿಫಾರಸು: ಬೋರ್‍ವೆಲ್ ಕೊರೆ ದಿರುವ ಒಟ್ಟು ಆಳ ಹಾಗೂ ಬಿಲ್ ಮಾಡಿ ರುವುದರಲ್ಲಿ ಶೇ.25ರಷ್ಟು ವ್ಯತ್ಯಾಸವಿದೆ. ಕಡಿಮೆ ಗುಣಮಟ್ಟದ ಪಂಪ್‍ಸೆಟ್, ಪೈಪ್, ಕೇಬಲ್‍ಗಳನ್ನು ಅಳವಡಿಸಲಾಗಿದೆ. ಯೋಜನೆ ಅನುಷ್ಠಾನದಲ್ಲಿ ತುಂಬಾ ವಿಳಂಬವಾಗಿದೆ. 2018-19ನೇ ಸಾಲಿನ ಫಲಾನುಭವಿಗಳ ಜಮೀನಿನಲ್ಲಿ 2020-21ನೇ ಸಾಲಿನಲ್ಲಿ ಬೋರ್‍ವೆಲ್ ತೆಗೆಸ ಲಾಗಿದೆ. ಬೋರ್‍ವೆಲ್ ತೆಗೆದು ಮೂರು ವರ್ಷಗಳ ನಂತರ ಪಂಪ್‍ಸೆಟ್ ಅಳ ವಡಿಸಲಾಗಿದೆ. ಕೆಲವೆಡೆ ಫಲಾನುಭವಿ ಗಳ ಜಮೀನಿನ ಬದಲಾಗಿ ಬೇರೆಯವರ ಜಾಗದಲ್ಲಿ ಬೋರ್‍ವೆಲ್ ತೆಗೆಸಿದ್ದಾರೆ. ಇಂತಹ ಹಲವು ರೀತಿಯ ಅವ್ಯವ ಹಾರವನ್ನು ಸಮಿತಿ ಗಮನಿಸಿದೆ. ಒಟ್ಟಾರೆ ಯಾಗಿ ಶೇ.25ರಷ್ಟು ಅವ್ಯವಹಾರ ನಡೆದಿದೆ. ಉದಾಹರಣೆಗೆ 100 ಕೋಟಿ ರೂ. ಯೋಜನೆಯಲ್ಲಿ 25 ಕೋಟಿ ರೂ. ಅವ್ಯವಹಾರವಾಗಿದೆ. ವಿಳಂಬಕ್ಕಿಂತ ಹೆಚ್ಚು ಅವ್ಯವಹಾರವೇ ಕಂಡು ಬಂದಿದೆ. ಟೆಂಡರ್, ಗುತ್ತಿಗೆದಾರರು ಸರ್ಕಾರಕ್ಕೆ ಮೋಸ ಮಾಡಿದ್ದಾರೆ. ಈ ಸಂಬಂಧ ಕಡಿಮೆ ಆಳ ಕೊರೆದು ಹೆಚ್ಚು ಬಿಲ್ ಮಾಡಿಕೊಟ್ಟಿರುವವರು, ಕಡಿಮೆ ಗುಣ ಮಟ್ಟದ ಪಂಪ್‍ಸೆಟ್, ಕೇಬಲ್ ಸರಬ ರಾಜು ಮಾಡಿರುವವರು, ಇವರ ಜೊತೆ ಶಾಮೀಲಾಗಿರುವ ತಾಲೂಕು ಅಭಿವೃದ್ಧಿ ಅಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿ ಗಳ ವಿರುದ್ಧ ಕ್ರಮ ಕೈಗೊಳ್ಳಲು ಶಿಫಾರಸ್ಸು ಮಾಡಲಾಗಿದೆ ಎಂದರು.

ಸುಧಾರಣೆಗೆ ಸಲಹೆ: ಈ ಹಿಂದೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಸಮಿತಿ ಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗು ತ್ತಿತ್ತು. ಬೋರ್‍ವೆಲ್ ಟೆಂಡರ್, ಮೋಟಾರ್ ಸರಬರಾಜು ಹೀಗೆ ಕಾಲಾನುಸಾರ ತೀರ್ಮಾನ ತೆಗೆದುಕೊಂಡು ಕಾರ್ಯ ಗತಗೊಳಿಸಲಾಗುತ್ತಿತ್ತು. ಆದರೆ ಈ ಅಧಿಕಾರ ಬೆಂಗಳೂರು ಕೇಂದ್ರ ಕಚೇರಿ ಸೇರಿದ್ದು, ಯೋಜನೆ ಅನುಷ್ಠಾನದಲ್ಲಿನ ವಿಳಂಬ ಹಾಗೂ ಅವ್ಯವಹಾರಕ್ಕೆ ಕಾರಣ ವಾಗಿದೆ. ಯೋಜನೆಯಲ್ಲಿ `ನೋ ವಾಟರ್, ನೋ ಮನಿ’ ನಿಯಮವಿದೆ. ಅಂದರೆ ಬೋರ್‍ವೆಲ್ ತೆಗೆದಾಗ ನೀರು ಬಂದರೆ ಮಾತ್ರ ಡ್ರಿಲ್ಲರ್‍ಗೆ ಹಣ ನೀಡಬಹುದು. ಹೀಗಾದರೆ ಯಾವ ಡ್ರಿಲ್ಲರ್‍ಗಳು ಮುಂದೆ ಬರುತ್ತಾರೆ. ಈ ಕಾರಣದಿಂದ ನೀರು ಬರದಿದ್ದರೂ ಬಂದಿದೆ ಎಂದು ವರದಿ ಮಾಡಲಾಗುತ್ತಿದೆ. ಇಂತಹ ಅವೈಜ್ಞಾನಿಕ ನಿಯಮಗಳ ಪರಿಷ್ಕರಣೆ ಸೇರಿದಂತೆ ಯೋಜನೆಯಲ್ಲಾಗಬೇಕಾದ ಸುಧಾರಣೆ ಬಗ್ಗೆ ಸರ್ಕಾರಕ್ಕೆ ಶಿಫಾರಸು ಮಾಡ ಲಾಗುವುದು ಎಂದು ತಿಳಿಸಿದರು.
ಗಂಗಾ ಕಲ್ಯಾಣ ವಿಶೇಷ ಸದನ ಸಮಿತಿ ಸದಸ್ಯರಾದ ಎಂ.ಎ. ಗೋಪಾಲಸ್ವಾಮಿ, ಕೆ.ಪ್ರತಾಪ್‍ಸಿಂಹ ನಾಯಕ್, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಜಿಲ್ಲಾ ಪಂಚಾಯ್ತಿ ಸಿಇಓ ಎ.ಎಂ.ಯೋಗೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

Translate »