ಖಾಸಗಿ ಶಾಲೆಗಳ ದಾಖಲಾತಿಗೆ ಸರ್ಕಾರ ಗ್ರೀನ್ ಸಿಗ್ನಲ್
ಮೈಸೂರು

ಖಾಸಗಿ ಶಾಲೆಗಳ ದಾಖಲಾತಿಗೆ ಸರ್ಕಾರ ಗ್ರೀನ್ ಸಿಗ್ನಲ್

September 7, 2020

ಬೆಂಗಳೂರು, ಸೆ.6- ಕೊರೊನಾ ಸಂಕಷ್ಟದ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಖಾಸಗಿ ಶಾಲೆಗಳು ಹಾಗೂ ವೇತನ ದೊರಯದೆ ಸಮಸ್ಯೆಗೆ ಸಿಲುಕಿರುವ ಶಿಕ್ಷಕರ ಹಿತದೃಷ್ಟಿಯಿಂದ ಪ್ರಸಕ್ತ ಸಾಲಿನ (2020-21) ಶಾಲಾ ಶುಲ್ಕದ ಪ್ರಥಮ ಕಂತು ಪಡೆಯಲು ಖಾಸಗಿ ಶಿಕ್ಷಣ ಸಂಸ್ಥೆ ಗಳಿಗೆ ರಾಜ್ಯ ಸರ್ಕಾರ ಅನುಮತಿ ನೀಡಿದೆ.

ಪೆÇೀಷಕರಿಂದ ಶುಲ್ಕ ಸ್ವೀಕರಿಸದಂತೆ ತಡೆಹಿಡಿ ಯುವುದು, ಆರ್‍ಟಿಇ ಅನುದಾನ ಬಿಡುಗಡೆ ಮಾಡ ದಿರುವುದು ಸೇರಿದಂತೆ ಕೆಲವು ಅವೈಜ್ಞಾನಿಕ ಕ್ರಮ ಗಳನ್ನು ಅನುಸರಿಸುವ ಮೂಲಕ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ರಾಜ್ಯ ಸರ್ಕಾರ ನಿರ್ಲಕ್ಷ್ಯ ಮಾಡು ತ್ತಿದೆ ಎಂದು ಆರೋಪಿಸಿ ಖಾಸಗಿ ಶಿಕ್ಷಣ ಆಡ ಳಿತ ಮಂಡಳಿಗಳ ಒಕ್ಕೂಟ (ಕ್ಯಾಮ್ಸ್) ಶನಿವಾರ ಕರಾಳ ಶಿಕ್ಷಣ ದಿನಾಚರಣೆ ನಡೆಸಿತು.

ಕಪ್ಪುಪಟ್ಟಿ ಧರಿಸಿ ವಿವಿಧ ಶಾಲಾ ಶಿಕ್ಷಕರು ನಗರದ ಶಿಕ್ಷಕರ ಸದನದ ಆವರಣದಲ್ಲಿ ಶಿಕ್ಷಕ ವಿರೋಧ ಸರ್ಕಾರ ಎಂಬ ಭಿತ್ತಿ ಪತ್ರಗಳೊಂದಿಗೆ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿ ಸಿದರು. ಪ್ರತಿಭಟನಾಕಾರರಿಗೆ ಸ್ಪಂದಿಸಿದ ಶಿಕ್ಷಣ ಸಚಿವರು, ಬೇಡಿಕೆ ಈಡೇರಿಸುವ ಭರವಸೆಯನ್ನು ನೀಡಿದರು. ಈ ಬೆಳವಣಿಗೆ ಬಳಿಕ ಆದೇಶ ಹೊರ ಡಿಸಿದ ಶಿಕ್ಷಣ ಸಚಿವ ಸುರೇಶ್‍ಕುಮಾರ್ ಅವರು, ಖಾಸಗಿ ಶಾಲೆಗಳಲ್ಲಿ ದಾಖಲಾತಿ ಪ್ರಕ್ರಿಯೆ ಪ್ರಾರಂ ಭಿಸಲು ಮತ್ತು ಪೆÇೀಷಕರಿಂದ ಶುಲ್ಕ ಪಡೆಯಲು ಅನುಮತಿ ನೀಡಿದ್ದಾರೆ. ಪ್ರಸಕ್ತ ಸಾಲಿನ ಶಾಲಾ ಶುಲ್ಕದ ಪ್ರಥಮ ಕಂತು ಪಡೆಯಲು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅನುಮತಿ ನೀಡಲಾಗಿದೆ. ಪೆÇೀಷಕರಿಗೂ ಇದರಿಂದ ಹೊರೆಯಾಗಬಾರದು ಎಂಬ ಕಾರಣಕ್ಕೆ ಪ್ರಸಕ್ತ ಸಾಲಿನ ಶಾಲಾ ಶುಲ್ಕದಲ್ಲಿ ಮೊದಲ ಕಂತು ಮಾತ್ರ ಪಡೆಯಲು ಅವಕಾಶ ನೀಡಲಾಗಿದೆ. ಈ ಹಣದಲ್ಲಿ ತಮ್ಮ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಬೋಧಕ/ಬೋಧಕೇತರ ಸಿಬ್ಬಂದಿಗೆ ವೇತನವನ್ನು ಕಡ್ಡಾಯ ವಾಗಿ ಪಾವತಿಸಬೇಕು. ವೇತನ ನೀಡುವ ಸಂಬಂಧ ಯಾವುದೇ ದೂರುಗಳು ಬಾರದಂತೆ ನೋಡಿಕೊಳ್ಳಬೇಕೆಂದು ತಿಳಿಸಿದ್ದಾರೆ.

 

Translate »