ಐಪಿಎಲ್ ವೇಳಾಪಟ್ಟಿ ಪ್ರಕಟ: ಸೆ.19ರಿಂದ ಟೂರ್ನಿ ಆರಂಭ
ಮೈಸೂರು

ಐಪಿಎಲ್ ವೇಳಾಪಟ್ಟಿ ಪ್ರಕಟ: ಸೆ.19ರಿಂದ ಟೂರ್ನಿ ಆರಂಭ

September 7, 2020

ಬೈ, ಸೆ.6- ಕೊನೆಗೂ ಎಲ್ಲಾ ಅಡೆತಡೆಗಳ ನಡುವೆ 13ನೇ ಆವೃತ್ತಿಯ ಇಂಡಿ ಯನ್ ಪ್ರೀಮಿಯರ್ ಲೀಗ್-2020 ಇದೇ ಸೆ.19 ರಿಂದ ಆರಂಭವಾಗುತ್ತಿದ್ದು, ಕೊರೊನಾ ಭೀತಿ ಹಿನ್ನೆಲೆಯಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ಅಂಗಣದಲ್ಲಿ ಟೂರ್ನಿಯನ್ನು ಆಯೋಜಿಸ ಲಾಗಿದೆ. ಬಿಸಿಸಿಐ ಭಾನುವಾರ ಈ ಸಾಲಿನ ಐಪಿಎಲ್ ಟೂರ್ನಿಯ ವೇಳಾಪಟ್ಟಿಯನ್ನು ಬಿಡು ಗಡೆಗೊಳಿಸಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಮತ್ತು ಮಾಜಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಸೆಣಸಲಿವೆ. ಟೂರ್ನಿಯ 60 ಪಂದ್ಯಗಳನ್ನು ಯುಎಇನಲ್ಲಿರುವ 3 ಕ್ರೀಡಾಂಗಣಗಳಲ್ಲಿ ಆಯೋಜಿಸಲಾಗುತ್ತಿದೆ. ಬಯೋ ಸೆಕ್ಯೂರ್ ವಾತಾವರಣ ವಿರುವ ದುಬೈ, ಶಾರ್ಜಾ ಮತ್ತು ಅಬುದಾಬಿ ಕ್ರೀಡಾಂಗಣಗಳಲ್ಲಿ ಪಂದ್ಯಗಳು ನಡೆಯಲಿವೆ. ಟೂರ್ನಿಯ ಫೈನಲ್ ಪಂದ್ಯ ನ.10ರಂದು ನಡೆಯಲಿದ್ದು, ನಾಕ್‍ಔಟ್ ಪಂದ್ಯಗಳ ವೇಳಾಪಟ್ಟಿಯನ್ನು ಬಿಸಿಸಿಐ ನಂತರ ಬಿಡುಗಡೆ ಮಾಡಲಿದೆ. ಈ ಬಾರಿ ಒಟ್ಟು 10 ಡಬಲ್ ಹೆಡರ್ ಪಂದ್ಯಗಳು ನಡೆಯಲಿದ್ದು, ಐಪಿಎಲ್ ಇತಿಹಾಸದಲ್ಲಿ ಮೊತ್ತ ಮೊದಲ ಬಾರಿಗೆ ಮಧ್ಯಾಹ್ನದ ಪಂದ್ಯಗಳನ್ನು 3.30ಕ್ಕೆ ಮತ್ತು ರಾತ್ರಿ ಪಂದ್ಯಗಳು 7.30ಕ್ಕೆ (ಭಾರತೀಯ ಕಾಲಮಾನ) ಅಂದರೆ ಅರ್ಧಗಂಟೆ ಮೊದಲು ಶುರು ಮಾಡಲಾಗುತ್ತಿದೆ. ಇದೇ ಮೊದಲ ಬಾರಿ ಸಂಪೂರ್ಣ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಯುಎಇನಲ್ಲಿ ಆಯೋಜಿಸಲಾಗುತ್ತಿದೆ. 2014ರಲ್ಲಿ ಭಾರತದಲ್ಲಿ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ ಲೀಗ್ ಹಂತದ ಅರ್ಧದಷ್ಟು ಪಂದ್ಯಗಳನ್ನು ಯುಎಇನಲ್ಲಿ ಆಯೋಜಿಸಲಾಗಿತ್ತು. 2009ರಲ್ಲಿ ಇದೇ ಕಾರಣ ಸಲುವಾಗಿ ದಕ್ಷಿಣ ಆಫ್ರಿಕಾದಲ್ಲಿ ಆಯೋಜನೆ ಮಾಡಲಾಗಿತ್ತು.

Translate »