ರಾಗಿಣಿ ಬಿಜೆಪಿ ಸದಸ್ಯೆಯಲ್ಲ  ಪಕ್ಷದ ವಕ್ತಾರ ಕ್ಯಾ.ಗಣೇಶ್ ಕಾರ್ನಿಕ್ ಸ್ಪಷ್ಟನೆ
ಮೈಸೂರು

ರಾಗಿಣಿ ಬಿಜೆಪಿ ಸದಸ್ಯೆಯಲ್ಲ ಪಕ್ಷದ ವಕ್ತಾರ ಕ್ಯಾ.ಗಣೇಶ್ ಕಾರ್ನಿಕ್ ಸ್ಪಷ್ಟನೆ

September 7, 2020

ಬೆಂಗಳೂರು, ಸೆ.6- ಸ್ಯಾಂಡಲ್‍ವುಡ್ ಡ್ರಗ್ಸ್ ದಂಧೆ ಆರೋಪ ದಲ್ಲಿ ಬಂಧನಕ್ಕೊಳಗಾಗಿರುವ ನಟಿ ರಾಗಿಣಿ ದ್ವಿವೇದಿ ಬಿಜೆಪಿಯ ಸದಸ್ಯರಲ್ಲ,  2019ರ ವಿಧಾನಸಭಾ ಉಪ ಚುನಾವಣೆ ಸಂದರ್ಭ ದಲ್ಲಿ ಸ್ವಯಂ ಪ್ರೇರಣೆಯಿಂದ ಪ್ರಚಾರ ದಲ್ಲಿ ತೊಡಗಿಸಿಕೊಂಡಿದ್ದರು ಎಂದು ರಾಜ್ಯ ಬಿಜೆಪಿ ಭಾನುವಾರ ಹೇಳಿದೆ.

ರಾಗಿಣಿ ದ್ವಿವೇದಿ ಬಂಧನಕ್ಕೊಳಗಾದ ಬೆನ್ನಲ್ಲೇ ನಟಿಯಿಂದ ಅಂತರ ಕಾಯ್ದುಕೊಳ್ಳಲು ಪ್ರಯತ್ನಿಸು ತ್ತಿರುವ ಬಿಜೆಪಿ, ಯಾವುದೇ ರೀತಿಯ ಸಮಾಜ ವಿರೋಧಿ ಚಟುವಟಿಕೆಗಳ ವಿರುದ್ಧವಾಗಿ ಇರುವುದಾಗಿ ಹೇಳಿಕೊಂಡಿದೆ.

2019ರ ಉಪ ಚುನಾವಣೆ ಸಂದರ್ಭದಲ್ಲಿ ನೂರಾರು ಸೆಲೆಬ್ರಿಟಿಗಳು ಪಕ್ಷದ ಪ್ರಚಾರಾಂದೋಲನದಲ್ಲಿ ಸ್ವಯಂ ಪ್ರೇರಣೆಯಿಂದ ಭಾಗ ವಹಿಸಿದ್ದರು. ಅವರಲ್ಲಿ ರಾಗಿಣಿ ದ್ವಿವೇದಿಕೂಡಾ ಒಬ್ಬರಾಗಿದ್ದರು ಎಂದು ಬಿಜೆಪಿ ವಕ್ತಾರ ಕ್ಯಾಪ್ಟನ್ ಗಣೇಶ್ ಕಾರ್ನಿಕ್ ಹೇಳಿಕೆ ಯಲ್ಲಿ ತಿಳಿಸಿದ್ದಾರೆ. ದ್ವಿವೇದಿ ಪಕ್ಷದ ಸದಸ್ಯರೂ ಅಲ್ಲ ಅಥವಾ ಚುನಾವಣಾ ಸಂದರ್ಭ ದಲ್ಲಿ ಅವರಿಗೆ ಪಕ್ಷ ಯಾವುದೇ ಹೊಣೆ ವಹಿಸಿರಲಿಲ್ಲ ಎಂದು ಸ್ಪಷ್ಪಪಡಿಸಿದ ಕಾರ್ನಿಕ್, ಅವರು ಸ್ವಯಂ ಪ್ರೇರಣೆಯಿಂದ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು. ಆಕೆಯ ವೃತ್ತಿ ಜೀವನ ಮತ್ತು ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಪಕ್ಷ ಯಾವುದೇ ಹೊಣೆ ಹೊರುವುದಿಲ್ಲ ಅಥವಾ ಪ್ರತಿಕ್ರಿಯಿಸುವುದಿಲ್ಲ ಎಂದಿದ್ದಾರೆ. ಇಂತಹ ಚಟುವಟಿಕೆಗಳನ್ನು ನಾವು ಪೆÇ್ರೀತ್ಸಾಹಿಸುವುದಿಲ್ಲ, ಮಾದಕ ವಸ್ತು ಜಾಲದಲ್ಲಿ ತೊಡಗಿಸಿಕೊಂಡಿರುವುದಕ್ಕೆ ರಾಗಿಣಿ ದ್ವಿವೇದಿಯನ್ನು ನಾವು ಒಪ್ಪಿಕೊಳ್ಳುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

 

Translate »