ನೇತ್ರರಾಜು ಚಿತ್ರಕ್ಕೆ ಭಾರೀ ಮೆಚ್ಚುಗೆ
ಮೈಸೂರು, ಮೈಸೂರು ದಸರಾ

ನೇತ್ರರಾಜು ಚಿತ್ರಕ್ಕೆ ಭಾರೀ ಮೆಚ್ಚುಗೆ

October 23, 2018

ಮೈಸೂರು: ದಸರಾ ಮಹೋತ್ಸವ ಸಂದರ್ಭದಲ್ಲಿ ಮಾವುತ ಕುಟುಂಬದ ತಾಯಿ-ಮಗ ಇಬ್ಬರು ಅರಮನೆಯ ದೀಪಾಲಂಕಾರವನ್ನು ಆಶ್ಚರ್ಯದಿಂದ ನೋಡುತ್ತಿರುವ ಅಪರೂಪದ ಚಿತ್ರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ನಗರದ ಹಿರಿಯ ಛಾಯಾಗ್ರಾಹಕ ನೇತ್ರರಾಜು ತೆಗೆದಿರುವ ಈ ಅಪರೂಪದ ಚಿತ್ರಕ್ಕೆ ಫೇಸ್‍ಬುಕ್‍ನಲ್ಲಿ ಸಾವಿರಾರು ಜನರ ಮೆಚ್ಚುಗೆ ವ್ಯಕ್ತಪಡಿಸಿ, ಓಕೆ ಮಾಡಿದ್ದಾರೆ. ಅರಮನೆಯ ಕೋಡಿ ಸೋಮೇಶ್ವರ ದೇವಾಲಯದ ಬಳಿ ಮಾವುತ ಕುಟುಂಬಸ್ಥರು ತಮಗಾಗಿ ನಿರ್ಮಿಸಿದ್ದ ಟೆಂಟ್‍ನಲ್ಲಿ ವಾಸವಾಗಿದ್ದರು. ತಾಯಿ-ಮಗ ದಸರಾ ಮಹೋತ್ಸವದ ಸಂದರ್ಭದಲ್ಲಿ ರಾತ್ರಿ ವೇಳೆಯ ಅರಮನೆ ದೀಪಾಲಂಕಾರ ದೃಶ್ಯವನ್ನು ಆಶ್ಚರ್ಯದಿಂದ ನೋಡುತ್ತಿರುವಾಗ ತೆಗೆದ ಆಕಸ್ಮಿಕ ಚಿತ್ರ ಈಗ ಭಾರೀ ಸದ್ದು ಮಾಡುತ್ತಿದೆ.

ನನ್ನ ಸ್ನೇಹಿತರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು. ಈ ಚಿತ್ರ ಇಷ್ಟು ಬೇಗ ಸಾವಿರಾರು ಜನರ ಮೆಚ್ಚುಗೆ ಗಳಿಸಿರುವುದು ಖುಷಿಯಾಗಿದೆ ಎಂದು ಛಾಯಾಗ್ರಾಹಕ ನೇತ್ರರಾಜು ಮಾಧ್ಯಮಗಳಿಗೆ ತಿಳಿಸಿದ್ದಾರೆ.

Translate »