ನೂಪುರ ಕಲಾವಿದರಿಂದ ಸಮೂಹ ಭರತನಾಟ್ಯ
ಮೈಸೂರು

ನೂಪುರ ಕಲಾವಿದರಿಂದ ಸಮೂಹ ಭರತನಾಟ್ಯ

November 11, 2018

ಮೈಸೂರು: ನಾಟ್ಯಾ ಚಾರ್ಯ ಪ್ರೊ.ಕೆ.ರಾಮ ಮೂರ್ತಿರಾವ್ ಅವರ ನೂಪುರ ಕಲಾವಿದರು ಸಾಂಸ್ಕøತಿಕ ಟ್ರಸ್ಟ್ ವತಿಯಿಂದ ಮಕ್ಕಳ ದಿನಾ ಚರಣೆಯ ಅಂಗವಾಗಿ ಅದರ ಹಿಂದಿನ ದಿನವಾದ ನ.13ರ ಸಂಜೆ 6 ಗಂಟೆಗೆ ನಾದಬ್ರಹ್ಮ ಸಂಗೀತ ಸಭೆಯ ವಾಸುದೇವಾ ಚಾರ್ಯ ಭವನದಲ್ಲಿ ಮಕ್ಕಳ ವಿಶೇಷ ಸಮೂಹ ಭರತನಾಟ್ಯ ಪ್ರದರ್ಶನವೊಂ ದನ್ನು ಏರ್ಪಡಿಸಿದೆ. ಇದರಲ್ಲಿ ಜೆ.ಪಿ.ನಗರದ ನೂಪುರ ನೃತ್ಯ ಶಾಲೆಯ 25 ಮಂದಿ ಪುಟಾಣಿ ಕಲಾವಿದರು ಸುಮಾರು 15 ನೃತ್ಯಗಳನ್ನು ಸಾದರಪಡಿಸಲಿದ್ದಾರಲ್ಲದೆ ಬೆಂಗಳೂರಿನ ನೃತ್ಯ ವಿದೂಷಿ ರಾಜಶ್ರೀ ನಾಯ್ಕ್ ಅವರ ಇಬ್ಬರು ಶಿಷ್ಯೆ ಯರು ಅತಿಥಿ ಕಲಾವಿದರಾಗಿ ನೃತ್ಯ ಪ್ರದರ್ಶನವನ್ನು ನೀಡಲಿದ್ದಾರೆ. ಕಲಾ ಸೇವಾ ರತ್ನ ಕೆ.ವಿ.ಮೂರ್ತಿ ಮುಖ್ಯ ಅತಿಥಿಗಳಾಗಿ ಉಪಸ್ಥಿತ ರಿದ್ದು, ಶುಭ ಹಾರೈಸಲಿದ್ದಾರೆ. ಕಾರ್ಯಕ್ರಮಕ್ಕೆ ಪ್ರೊ.ಕೆ.ರಾಮ ಮೂರ್ತಿ ರಾವ್ ನಟುವಾಂಗದಲ್ಲೂ ಇಂದ್ರಾಣಿ ಅನಂತರಾಂ ಗಾಯನ ದಲ್ಲೂ ಎಂ.ಆರ್. ಹನುಮಂತರಾಜು ಮೃದಂಗದಲ್ಲೂ, ರಾಜೇಶ ಶ್ರೀರಂಗಪಟ್ಟಣ ವಯೋಲಿನ್‍ನಲ್ಲೂ ರಾಘ ವೇಂದ್ರ ಪ್ರಸಾದ್ ರಿದಂ ಪ್ಯಾಡ್‍ನಲ್ಲಿ ಸಹಕರಿಸಲಿದ್ದಾರೆ.

Translate »