ವಿನ್ಯಾಸ್ ಇನ್ನೋವೇಟಿವ್ ಟೆಕ್ನಾಲಜೀಸ್  ಕಾರ್ಮಿಕರಿಂದ ನಾಳೆ ಬೆಂಗಳೂರು ಜಾಥಾ
ಮೈಸೂರು

ವಿನ್ಯಾಸ್ ಇನ್ನೋವೇಟಿವ್ ಟೆಕ್ನಾಲಜೀಸ್  ಕಾರ್ಮಿಕರಿಂದ ನಾಳೆ ಬೆಂಗಳೂರು ಜಾಥಾ

November 11, 2018

ಮೈಸೂರು:  ಮೈಸೂರಿನ ಕೂರ್ಗಳ್ಳಿ ಕೈಗಾರಿಕಾ ಪ್ರದೇಶ ದಲ್ಲಿರುವ ವಿನ್ಯಾಸ್ ಇನ್ನೋವೇಟಿವ್ ಟೆಕ್ನಾಲಜೀಸ್ ಕಂಪನಿಯ ಆಡಳಿತ ವರ್ಗದಿಂದ ಅನ್ಯಾಯವಾಗಿದೆ ಎಂದು ಆರೋಪಿಸಿ ರುವ ಕಾರ್ಮಿಕರು, ಕಾಲ್ನಡಿಗೆಯಲ್ಲಿ ಬೆಂಗಳೂರಿಗೆ ತೆರಳಿ, ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿsಸಿದ ಬಳಿಕ ಅಲ್ಲಿಯೇ ಸತ್ಯಾಗ್ರಹ ನಡೆಸಲು ಮುಂದಾಗಿದ್ದಾರೆ.
ಮೈಸೂರ್ ಡಿಸ್ಟ್ರಿಕ್ಟ್ ಜನರಲ್ ಎಂಪ್ಲಾಯೀಸ್ ಯೂನಿಯನ್ ಸಂಘಟನೆ ನೇತೃತ್ವದ 94 ಕಾರ್ಮಿಕರು ಹಾಗೂ ಬೆಂಬಲಿಗರ ಕಾಲ್ನಡಿಗೆ ಜಾಥಾಗೆ ನ.12ರಂದು ಬೆಳಿಗ್ಗೆ 9 ಗಂಟೆಗೆ ಕೋಟೆ ಆಂಜ ನೇಯ ಸ್ವಾಮಿ ದೇವಾಲಯದ ಬಳಿ ಚಿತ್ರಕಲಾವಿದ ಬಾದಲ್ ನಂಜುಂಡ ಸ್ವಾಮಿ ಚಾಲನೆ ನೀಡಲಿದ್ದಾರೆ. ಬಳಿಕ ಕಾರ್ಮಿಕರು ಮಹಾತ್ಮ ಗಾಂಧಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ, ಕಾಲ್ನಡಿಗೆ ಆರಂಭಿಸಲಿದ್ದಾರೆ. ಜಾಥಾ ನ.15ರಂದು ಬೆಂಗ ಳೂರು ತಲುಪಲಿದ್ದು, ನ.16ರಂದು ಕಾರ್ಮಿಕರು, ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಿದ್ದಾರೆ.

ವಿನ್ಯಾಸ್ ಕಂಪನಿ ಆಡಳಿತ ವರ್ಗದ ದಬ್ಬಾಳಿಕೆಯಿಂದ 94 ಕಾರ್ಮಿ ಕರು ಬೀದಿ ಪಾಲಾಗುವ ದುಸ್ಥಿತಿ ನಿರ್ಮಾಣವಾಗಿದೆ. 5 ತಿಂಗಳಿಂದ ವೇತನವನ್ನೂ ನೀಡದೆ, ಕಾರ್ಮಿಕ ಇಲಾಖೆ ಸೂಚನೆಗಳನ್ನೂ ದಿಕ್ಕ ರಿಸಿ, ಕಿರುಕುಳ ನೀಡುತ್ತಿದ್ದಾರೆ. ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ರಾದ ಜಿ.ಟಿ.ದೇವೇಗೌಡರು, ಡಿಸಿ ಅಭಿರಾಮ್ ಜಿ.ಶಂಕರ್ ಅವರಿಗೆ ಮನವಿ ನೀಡಲಾಗಿದೆ. ಅಲ್ಲದೆ ಜನ ಸಮಾನ್ಯರ ಬಳಿಯೂ ತಮಗಾಗಿ ರುವ ಅನ್ಯಾಯದ ಬಗ್ಗೆ ತಿಳಿಸಿ, ಹೋರಾಟಕ್ಕೆ ಬೆಂಬಲ ಕೋರಿ ಸಹಿ ಸಂಗ್ರಹಿಸಲಾಗಿದೆ. ಲಕ್ಷ ಮಂದಿಯ ಸಹಿ ಸಂಗ್ರಹದೊಂದಿಗೆ ಮುಖ್ಯ ಮಂತ್ರಿಗೆ ಮನವಿ ಸಲ್ಲಿಸಿ, ಮಧ್ಯ ಪ್ರವೇಶಿಸಿ ಸಮಸ್ಯೆ ಇತ್ಯರ್ಥಪಡಿಸುವಂತೆ ಕೋರುತ್ತೇವೆ. ನಂತರ ನ್ಯಾಯ ಸಿಗುವವರೆಗೂ ಬೆಂಗಳೂರಿ ನಲ್ಲಿಯೇ ಸತ್ಯಾಗ್ರಹ ನಡೆಸುತ್ತೇವೆಂದು ಕಾರ್ಮಿಕರು ತಿಳಿಸಿದ್ದಾರೆ.

Translate »