ವಿನ್ಯಾಸ್ ಇನ್ನೋವೇಟಿವ್ ಟೆಕ್ನಾಲಜೀಸ್  ನೌಕರರು ಬೆಂಗಳೂರಿಗೆ ಪಾದಯಾತ್ರೆ
ಮೈಸೂರು

ವಿನ್ಯಾಸ್ ಇನ್ನೋವೇಟಿವ್ ಟೆಕ್ನಾಲಜೀಸ್  ನೌಕರರು ಬೆಂಗಳೂರಿಗೆ ಪಾದಯಾತ್ರೆ

November 13, 2018

ಮೈಸೂರು: ನಿಯಮ ಉಲ್ಲಂಘಿಸಿ ಆಂಧ್ರ ಪ್ರದೇಶಕ್ಕೆ ಮಾಡಿರುವ ವರ್ಗಾವಣೆ ರದ್ದು ಮಾಡುವಂತೆ ಆಗ್ರಹಿಸಿ ವಿನ್ಯಾಸ್ ಇನ್ನೋವೇಟಿವ್ ಟೆಕ್ನಾಲಜೀಸ್ ಸಂಸ್ಥೆಯ ನೌಕರರು ಸೋಮವಾರ ಮೈಸೂರಿ ನಿಂದ ಬೆಂಗಳೂರಿಗೆ ಪಾದಯಾತ್ರೆ ಹೊರಟರು.

ಮೈಸೂರು ಅರಮನೆ ಉತ್ತರ ದ್ವಾರದ ಕೋಟೆ ಆಂಜನೇಯಸ್ವಾಮಿ ದೇವಾಲಯದ ಮುಂಭಾಗದಿಂದ ಆರಂಭವಾದ ಪಾದ ಯಾತ್ರೆಗೆ ಇಂದು ಬೆಳಿಗ್ಗೆ ಕಲಾವಿದ ಬಾದಲ್ ನಂಜುಂಡಸ್ವಾಮಿ ಹಸಿರು ನಿಶಾನೆ ತೋರಿ ದರು. ವಿನ್ಯಾಸ್ ಟೆಕ್ನಾಲಜೀಸ್ ಸಂಸ್ಥೆಯ ನೌಕರರು ನಡೆಸುತ್ತಿರುವ ನ್ಯಾಯಯುತ ಹೋರಾಟಕ್ಕೆ ತಾವು ಬೆಂಬಲ ನೀಡು ವುದಾಗಿ ಅವರು ಘೋಷಿಸಿದರು.
ಇದೇ ವೇಳೆ ಕಲಾವಿದ ಬಾದಲ್ ನಂಜುಂಡ ಸ್ವಾಮಿ ಕೂರ್ಗಳ್ಳಿಯಲ್ಲಿರುವ ವಿನ್ಯಾಸ್ ಇನ್ನೋ ವೇಟಿವ್ ಟೆಕ್ನಾಲಜೀಸ್ ಸಂಸ್ಥೆ ಲಾಭದಾಯಕ ವಾಗಿ ನಡೆಯುತ್ತಿದ್ದರೂ ಕಾರ್ಖಾನೆಯ ಆಡ ಳಿತ ಮಂಡಳಿ ಕಾರ್ಖಾನೆಯನ್ನು ಮುಚ್ಚುವ ಹುನ್ನಾರ ನಡೆಸುತ್ತಿದೆ.

ಇದರ ಮೊದಲ ಹೆಜ್ಜೆ ಯಾಗಿ ಮಹಿಳಾ ಕಾರ್ಮಿಕರೂ ಒಳಗೊಂ ಡಂತೆ 90 ಮಂದಿಯನ್ನು ಆಂಧ್ರಪ್ರದೇಶದ ತಮ್ಮ ಅಂಗ ಸಂಸ್ಥೆಗೆ ವರ್ಗ ಮಾಡಲಾಗಿದೆ. ಅತ್ತ ಆಂಧ್ರದ ಕಾರ್ಖಾನೆಯನ್ನು ಆರಂಭಿ ಸದೆ ಉದ್ದೇಶಪೂರ್ವಕವಾಗಿ ನೌಕರರಿಗೆ ಕಿರುಕುಳ ನೀಡಲಾಗುತ್ತಿದೆ. ಕಾರ್ಮಿಕ ಕಾನೂ ನನ್ನು ಆಡಳಿತ ಮಂಡಳಿ ಗಾಳಿಗೆ ತೂರಿರು ವುದು ಸ್ಪಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಬೀದಿಗೆ ಬೀಳುವ ಸ್ಥಿತಿಯಲ್ಲಿರುವ ಕಾರ್ಮಿಕರ ನೆರ ವಿಗೆ ಸರ್ಕಾರ ಮುಂದಾಗಬೇಕು ಎಂದು ಮನವಿ ಮಾಡಿದರು. ಸಿಐಟಿಯು ಪ್ರಧಾನ ಕಾರ್ಯದರ್ಶಿ ಜಿ.ಜಯರಾಮು ಸೇರಿದಂತೆ ಇನ್ನಿತರರು ಪಾದಯಾತ್ರೆಯಲ್ಲಿ ಪಾಲ್ಗೊಂಡಿ ದ್ದರು. ಪಾದಯಾತ್ರೆಗೂ ಮುನ್ನ ಪುರಭವನ ಆವರಣದಲ್ಲಿರುವ ಡಾ.ಬಿ.ಆರ್.ಅಂಬೇ ಡ್ಕರ್ ಪ್ರತಿಮೆ ಹಾಗೂ ಗಾಂಧಿ ವೃತ್ತದಲ್ಲಿರುವ ಮಹಾತ್ಮಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪಾದಯಾತ್ರೆ ಮುಂದುವರೆಸಿದರು. ಅಶೋಕರಸ್ತೆ, ಫೌಂಟನ್ ಸರ್ಕಲ್ ಮಾರ್ಗ ವಾಗಿ ಬೆಂಗಳೂರಿನತ್ತ ತೆರಳಿದರು. ನ.15 ರಂದು ಬೆಂಗಳೂರು ತಲುಪಲಿರುವ ಪ್ರತಿಭಟ ನಾಕಾರರು, ನ.16ರಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿ, ನಿಯಮ ಗಾಳಿಗೆ ತೂರಿ ವರ್ಗಾವಣೆ ಮಾಡಿರುವ ಆದೇಶ ವನ್ನು ರದ್ದು ಮಾಡುವಂತೆ ಸೂಚಿಸಬೇಕು. ಅಲ್ಲದೆ ಸುಸ್ಥಿತಿಯಲ್ಲಿರುವ ಕಾರ್ಖಾನೆಯನ್ನು ಮುನ್ನಡೆಸಿಕೊಂಡು ಹೋಗುವಂತೆ ಆದೇಶಿಸ ಬೇಕೆಂದು ಮನವಿ ಸಲ್ಲಿಸಿ, ಬಳಿಕ ಫ್ರೀಡಂ ಪಾರ್ಕ್‍ನಲ್ಲಿ ಧರಣಿ ನಡೆಸಲಿದ್ದಾರೆ.

Translate »