ಪ್ರಯಾಣಿಕ ಟೆಂಪೊಗೆ ದಂಡ ವಿಧಿಸದಂತೆ ಜಿಟಿಡಿ ಸೂಚನೆ
ಮೈಸೂರು

ಪ್ರಯಾಣಿಕ ಟೆಂಪೊಗೆ ದಂಡ ವಿಧಿಸದಂತೆ ಜಿಟಿಡಿ ಸೂಚನೆ

September 18, 2020

ಮೈಸೂರು, ಸೆ.17(ಎಂಟಿವೈ)- ಮೈಸೂರು ತಾಲೂಕಿನ ಇಲವಾಲದಿಂದ ಮೈಸೂರಿಗೆ ಪ್ರಯಾಣಿಕರನ್ನು ಕರೆ ತರುವ ಟೆಂಪೋಗಳಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‍ಆರ್‍ಟಿಸಿ) ಅಧಿಕಾರಿ ಗಳು ದಂಡ ವಿಧಿಸುತ್ತಿರುವುದನ್ನು ತಪ್ಪಿಸು ವಂತೆ ಶಾಸಕ ಜಿ.ಟಿ.ದೇವೇಗೌಡರ ಬಳಿ ಟೆಂಪೋ ಚಾಲಕರು ಮನವಿ ಸಲ್ಲಿಸಿ, ಕಿರುಕುಳ ನೀಡದಂತೆ ಸಾರಿಗೆ ಅಧಿಕಾರಿ ಗಳಿಗೆ ಸೂಚಿಸುವಂತೆ ಕೋರಿದರು.

ಮೈಸೂರಿನ ಕಲಾಮಂದಿರದಲ್ಲಿ ಗುರು ವಾರ ಮಧ್ಯಾಹ್ನ ಕಾರ್ಯಕ್ರಮವೊಂದ ರಲ್ಲಿ ಪಾಲ್ಗೊಂಡಿದ್ದ ಶಾಸಕ ಜಿ.ಟಿ.ದೇವೇ ಗೌಡ ಅವರನ್ನು ಭೇಟಿ ಮಾಡಿದ 30ಕ್ಕೂ ಹೆಚ್ಚು ಮಂದಿಯ ಪ್ರಯಾಣಿಕ ಟೆಂಪೋ ಚಾಲಕರ ನಿಯೋಗ, ಈಗಾಗಲೇ ಲಾಕ್ ಡೌನ್‍ನಿಂದಾಗಿ ಟೆಂಪೋ ಚಾಲಕರು ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಲಾಕ್‍ಡೌನ್ ಸಡಿಲಿಸಿದ ಬಳಿಕ ಟೆಂಪೋ ಸಂಚಾರ ಆರಂ ಭಿಸಿದ್ದೇವೆ. ಕಳೆದ 30 ವರ್ಷದಿಂದಲೂ ಮೈಸೂರು-ಇಲವಾಲ ನಡುವೆ ಪ್ರಯಾ ಣಿಕರನ್ನು ಕರೆದೊಯ್ಯುವುದೇ ನಮ್ಮ ಪ್ರಮುಖ ವೃತ್ತಿಯಾಗಿದೆ. ಈಗ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ. ಇದರ ನಡುವೆ ಕೆಎಸ್ ಆರ್‍ಟಿಸಿ ಅಧಿಕಾರಿಗಳು ಮೈಸೂರು-ಇಲ ವಾಲ ನಡುವೆ ಸಂಚರಿಸುವ ಪ್ರಯಾಣಿಕರ ಟೆಂಪೋಗಳಿಗೆ ದಂಡ ವಿಧಿಸುತ್ತಿದ್ದಾರೆ ಎಂದು ಅಳಲು ತೋಡಿಕೊಂಡಿತು.

ಸಾರಿಗೆ ಸಂಸ್ಥೆ ಬಸ್‍ಗಳಿಗೂ ಪ್ರಯಾಣಿ ಕರ ಕೊರತೆಯಿದೆ. ಇದಕ್ಕಾಗಿ ಟೆಂಪೋ ದಲ್ಲಿ ಪ್ರಯಾಣಿಕರನ್ನು ಕರೆದುಕೊಂಡು ಹೋಗದಂತೆ ನಮ್ಮನ್ನು ಬೆದರಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಶಾಸಕರ ಸ್ಪಂದನೆ: ಇದಕ್ಕೆ ಸ್ಪಂದಿಸಿದ ಶಾಸಕ ಜಿ.ಟಿ.ದೇವೇಗೌಡ ಅವರು, ಕೆಎಸ್ ಆರ್‍ಟಿಸಿ ನಗರ ವಿಭಾಗದ ಉಪ ನಿಯಂ ತ್ರಣಾಧಿಕಾರಿ ನಾಗರಾಜು ಅವರಿಗೆ ಕರೆ ಮಾಡಿ, ಮೈಸೂರಿಂದ ಇಲವಾಲ ಹಾಗೂ ಇಲವಾಲದಿಂದ ಮೈಸೂರು ನಡುವೆ ಸಂಚರಿಸುವ ಪ್ರಯಾಣಿಕ ಟೆಂಪೋಗಳಿಗೆ ದಂಡ ಹಾಕದಂತೆ ಸೂಚನೆ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ನಾಗರಾಜು, ಟೆಂಪೋ ಚಾಲಕರು ಬೇಕಂತಲೇ ಬಸ್ ನಿಲ್ದಾಣದ ಪ್ರವೇಶ ದ್ವಾರ, ಬಸ್ ತಂಗು ದಾಣಗಳಲ್ಲಿಯೆ ಟೆಂಪೊ ನಿಲ್ಲಿಸುತ್ತಾರೆ. ಸಾರಿಗೆ ಸಂಸ್ಥೆ ಬಸ್‍ಗಳ ಸುಗಮ ಸಂಚಾ ರಕ್ಕೆ ಅಡ್ಡಿಪಡಿಸುತ್ತಾರೆ, ಬಸ್‍ಗೆ ಪ್ರಯಾ ಣಿಕರು ಹತ್ತದಂತೆ ತಡೆಯೊಡ್ಡುತ್ತಿ ದ್ದಾರೆ. ಇಂತಹವರಿಗೆ ಮಾತ್ರ ದಂಡ ಹಾಕುತ್ತಿದ್ದೇವೆ. ನಿಯಮಾನುಸಾರ ಬಸ್ ನಿಲ್ದಾಣದಿಂದ 200 ಮೀ. ವರೆಗೂ ಖಾಸಗಿ ಪ್ರಯಾಣಿಕ ವಾಹನ ಗಳ ನಿಲುಗಡೆಗೆ ಅವಕಾಶವಿಲ್ಲ. ನಿಯಮ ಗೊತ್ತಿದ್ದರೂ ಕೆಲ ಟೆಂಪೊ ಚಾಲಕರು ಉದ್ದಟತನ ತೋರುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಬಳಿಕ ಶಾಸಕರು, ಟೆಂಪೋ ಚಾಲಕ ರಿಗೂ ಬುದ್ಧಿಮಾತು ಹೇಳಿ ನಿಯಮ ಪಾಲಿಸುವಂತೆ ಸೂಚಿಸಿದರು.

 

Translate »