ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಓಡಿಪಿಯಿಂದ 160 ಮಹಿಳೆಯರ ಆರೋಗ್ಯ ತಪಾಸಣೆ
ಮೈಸೂರು

ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಓಡಿಪಿಯಿಂದ 160 ಮಹಿಳೆಯರ ಆರೋಗ್ಯ ತಪಾಸಣೆ

September 18, 2020

ಮೈಸೂರು,ಸೆ.17(ಎಂಟಿವೈ)- ಮೈಸೂರಿನ ಸೌತ್ ಕಿರಿಯ ಪುಷ್ಪಾ ಟ್ರಸ್ಟ್‍ನಲ್ಲಿ ನಡೆದ ಆರೋಗ್ಯ ತಪಾಸಣಾ ಶಿಬಿರದಲ್ಲಿ 160ಕ್ಕೂ ಹೆಚ್ಚು ಮಹಿಳೆ ಯರು ಆರೋಗ್ಯ ತಪಾಸಣೆ ಮಾಡಿಸಿಕೊಂಡು ತಜ್ಞ ವೈದ್ಯರಿಂದ ಚಿಕಿತ್ಸೆ ಪಡೆದರು.

ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಮತ್ತು ಓಡಿಪಿ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಸೆ.14 ರಿಂದ 17ರವರೆಗೆ 4 ದಿನ ನಡೆದ ಆರೋಗ್ಯ ತಪಾಸಣಾ ಶಿಬಿರ ಹಾಗೂ ಸ್ಪರ್ಶ ಕ್ಯಾನ್ಸರ್ ಪತ್ತೆ ಅಭಿಯಾನದಲ್ಲಿ ಉಚಿತವಾಗಿ ಮಹಿಳೆ ಯರ ಆರೋಗ್ಯ ತಪಾಸಣೆ ನಡೆಸಲಾಯಿತು.

ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ `ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ’ (ಸಿಎಸ್‍ಆರ್) ಕಾರ್ಯದಡಿ ತಜ್ಞ ವೈದ್ಯರಾದ ಡಾ.ಅಮೃತ, ಡಾ.ಪ್ರಸಾದ್, ಡಾ.ಶೀತಲ್ ಆರೋಗ್ಯ ತಪಾಸಣಾ ಶಿಬಿರ ನಡೆಸಿಕೊಟ್ಟರು. ಶಿಬಿರದಲ್ಲಿ ಅಶೋಕ ಪುರಂ, ಪಿ.ಕೆ.ಕಾಲೋನಿ, ವಿದ್ಯಾರಣ್ಯಪುರಂ, ಬನ್ನಿ ಮಂಟಪ, ರಮಾಬಾಯಿನಗರ, ಜೆ.ಪಿ.ನಗರ, ನಾಚನಹಳ್ಳಿ ಪಾಳ್ಯ, ಶ್ರೀರಾಮಪುರ, ಕೆ.ಆರ್. ವನಂ, ಮಹದೇವಪುರ, ದೇವಯ್ಯನಹುಂಡಿಯ ಮಹಿಳೆ ಯರು ತಪಾಸಣೆ ಮಾಡಿಸಿಕೊಂಡು, ಮಧುಮೇಹ, ರಕ್ತದೊತ್ತಡ, ಉಸಿರಾಟದ ತೊಂದರೆ ಮೊದ ಲಾದ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಪಡೆದರು.

ಇದೇ ಸಂದರ್ಭ, ಕೊರೊನಾದಿಂದ ಪಾರಾ ಗಲು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮ, ರೋಗ ನಿರೋಧಕ ಶಕ್ತಿ ವೃದ್ಧಿಸಲು ಸೇವಿಸ ಬೇಕಾದ ಆಹಾರಗಳ ಬಗ್ಗೆ, ಬಿಸಿನೀರು ಸೇವನೆ ಮೊದಲಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಡಾ.ಅಮೃತ ಉಪ ನ್ಯಾಸ ನೀಡಿದರು.

ತಪಾಸಣೆಗೆಂದು ಬಂದಿದ್ದ ಮಹಿಳೆಯರಿಗೆ ಮೊದಲಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಿ, ಅವರು ಸ್ಯಾನಿಟೈಸರ್‍ನಿಂದ ಕೈಸ್ವಚ್ಛಗೊಳಿಸಿಕೊಂಡ ನಂತ ರವೇ ಸಭಾಂಗಣಕ್ಕೆ ಪ್ರವೇಶಿಸಲು ಅವಕಾಶ ನೀಡಲಾಯಿತು. ಎಲ್ಲರೂ ಕಡ್ಡಾಯವಾಗಿ ಸಾಮಾ ಜಿಕ ಅಂತರ ಕಾಯ್ದುಕೊಳ್ಳಲು ಸೂಚಿಸಲಾಗಿತ್ತು. ಗುರುವಾರ ಮಧ್ಯಾಹ್ನ ಸಮಾರೋಪ ಸಮಾರಂಭ ದಲ್ಲಿ ವೈದ್ಯರ ತಂಡವನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಓಡಿಪಿ ಸಂಸ್ಥೆಯ ನಿರ್ದೇಶಕ ಪಾ.ಅಲೆಕ್ಸ್ ಪ್ರಶಾಂತ್ ಸಿಕ್ವೇರಾ, ಕಾರ್ಯಕ್ರಮ ಸಂಯೋಜಕಿ ಯಮುನಾ, ಮೆಲ್ವಿನ್, ಕಿರಿಯ ಪುಷ್ಪ ಟ್ರಸ್ಟ್‍ನ ಜಯಬಾಲನ್, ಕಾರ್ಯಕರ್ತೆಯರಾದ ಭಾಗ್ಯ, ಮಂಚಮ್ಮ ಮತ್ತಿತರಿದ್ದರು.

 

 

 

Translate »