ವಿಶ್ವಕರ್ಮ ಜಯಂತಿ; ಮೈಸೂರಲ್ಲಿ ಸರಳ ಆಚರಣೆ
ಮೈಸೂರು

ವಿಶ್ವಕರ್ಮ ಜಯಂತಿ; ಮೈಸೂರಲ್ಲಿ ಸರಳ ಆಚರಣೆ

September 18, 2020

ಮೈಸೂರು,ಸೆ.17(ಎಂಟಿವೈ)- ಕೊರೊನಾ ಹಿನ್ನೆಲೆಯಲ್ಲಿ ವಿಶ್ವಕರ್ಮ ಜಯಂತಿಯನ್ನು ಗುರುವಾರ ಮೈಸೂರಲ್ಲಿ ಸರಳ ಹಾಗೂ ಸಾಂಕೇತಿಕವಾಗಿ ಆಚರಿಸಲಾಯಿತು. ಜಿಲ್ಲಾಡಳಿತ ಹಾಗೂ ಕನ್ನಡ-ಸಂಸ್ಕøತಿ ಇಲಾಖೆಯಿಂದ ಕಲಾಮಂದಿರದ ಮನೆಯಂಗಳದಲ್ಲಿ ಗುರುವಾರ ಆಯೋ ಜಿಸಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮಕ್ಕೆ ಶಾಸಕ ರಾದ ಜಿ.ಟಿ.ದೇವೇಗೌಡ, ಎಲ್.ನಾಗೇಂದ್ರ ಶ್ರೀ ವಿಶ್ವಕರ್ಮರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು. ನೆರೆದಿದ್ದವರಿಗೆ ಶುಭಕೋರಿದರು.

ಪ್ರತಿವರ್ಷ ವಿಶ್ವಕರ್ಮ ಜಯಂತಿಯನ್ನು ಜಿಲ್ಲಾಡ ಳಿತ ಮತ್ತು ನಗರದಲ್ಲಿನ ವಿಶ್ವಕರ್ಮ ಸಮುದಾಯದ ವಿವಿಧ ಸಂಘಟನೆಗಳ ವತಿಯಿಂದ ಜಂಟಿಯಾಗಿ ಬಹಳ ಅದ್ಧೂರಿಯಾಗಿ ಆಚರಿಸಲಾಗುತ್ತಿತ್ತು. ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಮಂಜುನಾಥ ಸ್ವಾಮಿ, ಕನ್ನಡ-ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇ ಶಕ ಹೆಚ್.ಚೆನ್ನಪ್ಪ, ವಿಶ್ವಕರ್ಮ ಜಯಂತ್ಯೋತ್ಸವ ಸಮಿತಿ ಅಧ್ಯಕ್ಷೆ ಶಾಂತಮ್ಮ, ವಿಶ್ವಕರ್ಮ ಮಂಡಳಿ ಮಾಜಿ ಅಧ್ಯಕ್ಷ ನಂದಕುಮಾರ್, ರಿಷಿ ವಿಶ್ವಕರ್ಮ ಇತರರು ಉಪಸ್ಥಿತರಿದ್ದರು.

Translate »