ರಸ್ತೆಗಳಲ್ಲಿ ಗುಂಡಿ, ಭಾರೀ ವೆಚ್ಚದಲ್ಲಿ ದೀಪಾಲಂಕಾರ: ಟೀಕೆ
ಮೈಸೂರು

ರಸ್ತೆಗಳಲ್ಲಿ ಗುಂಡಿ, ಭಾರೀ ವೆಚ್ಚದಲ್ಲಿ ದೀಪಾಲಂಕಾರ: ಟೀಕೆ

October 24, 2020

ಮೈಸೂರು, ಅ.23(ಪಿಎಂ)- ಕೊರೊನಾ ಹಾವಳಿ ಹಾಗೂ ಉತ್ತರ ಕರ್ನಾಟಕದ ಪ್ರವಾಹದಿಂದ ರಾಜ್ಯದಲ್ಲಿ ಸೂತಕದ ವಾತಾ ವರಣ ನಿರ್ಮಾಣವಾಗಿದೆ. ಇಂಥ ಪರಿಸ್ಥಿತಿ ಯಲ್ಲಿ 15 ಕೋಟಿ ರೂ.ಗಳಷ್ಟು ದುಬಾರಿ ವೆಚ್ಚದಲ್ಲಿ ದಸರಾ ಆಚರಿಸುತ್ತಿರುವುದು ಎಷ್ಟು ಸರಿ? ರಾಜ್ಯ ಸರ್ಕಾರ, ದಸರಾ ವೆಚ್ಚದ ಶ್ವೇತ ಪತ್ರ ಹೊರಡಿಸಬೇಕು ಎಂದು ಮೈಸೂರು ಜಿಲ್ಲಾ ಕನ್ನಡ ಚಳವಳಿಗಾರರ ಸಂಘ ಆಗ್ರಹಿಸಿದೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಸಂಘದ ಅಧ್ಯಕ್ಷ ಬಿ.ಎ.ಶಿವಶಂಕರ್, ಕೊರೊನಾ ದಿಂದ ಸಾವಿರಾರು ಮಂದಿ ರಾಜ್ಯದಲ್ಲಿ ಮೃತ ಪಟ್ಟಿದ್ದಾರೆ. ಇನ್ನೊಂದೆಡೆ ಉತ್ತರ ಕರ್ನಾಟಕ ದಲ್ಲಿ ಅತಿವೃಷ್ಟಿ, ಪ್ರವಾಹದಿಂದ ಜನಜೀವನ ದುಸ್ತರವಾಗಿದೆ. ಇಂಥ ಸ್ಥಿತಿಯಲ್ಲಿ ಸರ್ಕಾರ ದಸರಾಗೆ 15 ಕೋಟಿ ರೂ. ವೆಚ್ಚ ಮಾಡು ತ್ತಿದೆ. ಕಳೆದ ಬಾರಿಯ ಅದ್ಧೂರಿ ದಸರಾ ಉತ್ಸವಕ್ಕೂ 18.5 ಕೋಟಿ ರೂ. ವೆಚ್ಚ ಮಾಡಿದೆ. ಕಳೆದ ಬಾರಿಯ ಹಾಗೂ ಪ್ರಸಕ್ತ ಸಾಲಿನ ದಸರಾ ಮಹೋತ್ಸವದ ವೆಚ್ಚ ಕುರಿತು ರಾಜ್ಯ ಸರ್ಕಾರ ಶ್ವೇತಪತ್ರ ಹೊರಡಿಸಬೇಕು ಎಂದು ಆಗ್ರಹಿಸಿದರು.

ಮೈಸೂರು ಅರಮನೆಯಲ್ಲಿ ಸಾಂಪ್ರದಾ ಯಿಕ ದಸರಾ ಆಚರಿಸಲು ರಾಜವಂಶಸ್ಥರಿಗೆ ಅವಕಾಶ ನೀಡಿದ್ದರೆ ಸಾಕಿತ್ತು. ಆದರೆ ಸರಳ ದಸರಾ ಹೆಸರಿನಲ್ಲಿ 15 ಕೋಟಿ ರೂ. ವೆಚ್ಚ ಮಾಡಲು ಹೊರಟಿರುವುದು ಸರಿಯಲ್ಲ. ಪ್ರತಿವರ್ಷ ದಸರಾ ಸಂದರ್ಭ ರಸ್ತೆ ಗುಂಡಿ ಗಳನ್ನಾದರೂ ಮುಚ್ಚುತ್ತಿದ್ದರು. ಆದರೆ ಈ ಬಾರಿ ರಸ್ತೆಗುಂಡಿ ಮುಚ್ಚುವ ಗೋಜಿಗೆ ಹೋಗಿಲ್ಲ. ಬದಲಾಗಿ ಭಾರೀ ಹಣ ಖರ್ಚು ಮಾಡಿ ವಿದ್ಯುತ್ ದೀಪಾಲಂಕಾರ ಮಾಡ ಲಾಗಿದೆ. ಇದನ್ನು ನೋಡಲು ಕೊರೊನಾ ವನ್ನೂ ಲೆಕ್ಕಿಸದೇ ಜನ ಮುಗಿಬೀಳುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ದಸರಾ ವೇಳೆ ಪ್ರವಾಸಿ ತಾಣಗಳಲ್ಲಿ ಜನ ದಟ್ಟಣೆಯಾಗುತ್ತದೆ ಎಂದು ಜಿಲ್ಲಾಧಿಕಾರಿ ಪ್ರವೇಶ ನಿರ್ಬಂಧಿಸಿದರೆ, ಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಆ ನಿರ್ಬಂಧ ತೆರವುಗೊಳಿಸಿದರು. ಇಂಥ ತೀರ್ಮಾನ ಗಳ ಮೂಲಕ ಜನರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ ಎಂದು ಟೀಕಿಸಿದರು.

ಸಂಘದ ಉಪಾಧ್ಯಕ್ಷ ಸೋಗಳ್ಳಿ ತುಂಗಾ, ಕಾರ್ಯದರ್ಶಿ ದೂರ ಸುರೇಶ್, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಮುಖಂಡ ಗೋವಿಂದರಾಜು ಗೋಷ್ಠಿಯಲ್ಲಿದ್ದರು.

 

 

 

Translate »