ಪ್ರಮೋದಾದೇವಿ ಅವರಿಗೆ ಜನ್ಮದಿನದ  ಶುಭಾಶಯ ಕೋರಿದ ಸಚಿವ ಸೋಮಶೇಖರ್
ಮೈಸೂರು

ಪ್ರಮೋದಾದೇವಿ ಅವರಿಗೆ ಜನ್ಮದಿನದ ಶುಭಾಶಯ ಕೋರಿದ ಸಚಿವ ಸೋಮಶೇಖರ್

October 28, 2021

ಮೈಸೂರು,ಅ.27(ಆರ್‍ಕೆಬಿ)-ಮೈಸೂರು ಸಂಸ್ಥಾನಕ್ಕೆ ಅದರದ್ದೇ ಆದ ವಿಶೇಷ, ಗೌರವ, ಸ್ಥಾನಮಾನಗಳು ಇವೆ. ಇಂಥ ಒಂದು ರಾಜ ಪರಂಪರೆಯನ್ನು ಸಮರ್ಥವಾಗಿ ನಿಭಾಯಿಸಿಕೊಂಡು, ಸಾರ್ವಜನಿಕವಾಗಿಯೂ ಉತ್ತಮ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿರುವ ರಾಜಮಾತೆ ಡಾ. ಪ್ರಮೋದಾದೇವಿ ಒಡೆಯರ್ ಅವರಿಗೆ ಮೈಸೂರು ಮತ್ತು ಚಾ.ನಗರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮ ಶೇಖರ್ ಜನ್ಮದಿನದ ಶುಭಾಶಯ ತಿಳಿಸಿದ್ದಾರೆ.

ರಾಜ್ಯ ಹಾಗೂ ಮೈಸೂರು ವಿಷಯಕ್ಕೆ ಬಂದಾಗ ಮೈಸೂರು ಒಡೆಯರು ಸದಾ ಸರ್ಕಾರದ ಬೆನ್ನುಲುಬಾಗಿ ನಿಲ್ಲುತ್ತಾರೆ. ಇಂದಿಗೂ ಆ ಪರಂಪರೆಯನ್ನು ತಾವು ಮುಂದುವರಿಸಿಕೊಂಡು ಬರುತ್ತಿದ್ದೀರಿ. ಕಾಲ ಕಾಲಕ್ಕೆ ಸರ್ಕಾ ರಕ್ಕೆ ಸಲಹೆ, ಸಹಕಾರ ಹಾಗೂ ಮಾರ್ಗದರ್ಶನ ನೀಡುತ್ತಿದ್ದೀರಿ. ಇನ್ನು ಸಾರ್ವಜನಿಕ ಕಾರ್ಯಕ್ರಮಗಳ ಸಂದರ್ಭದಲ್ಲಿ ನೀವು ತೋರುವ ಕಾಳಜಿ ಸಹ ಅವಿಸ್ಮರಣೀಯ. ದಸರಾ ಮಹೋತ್ಸವ ಯಶಸ್ವಿಯಾಗಿ ನಡೆಯಲು ತಾವು ಪ್ರತಿ ವರ್ಷ ಸಹಕಾರ ನೀಡು ತ್ತಿದ್ದೀರಿ. ಈ ವರ್ಷವೂ ನಿಮ್ಮ ಸಹಕಾರವನ್ನು ನಮ್ಮ ಸರ್ಕಾರ ಮರೆಯುವುದಿಲ್ಲ ಎಂದು ಸಚಿವರು ಧನ್ಯವಾದ ತಿಳಿಸಿದ್ದಾರೆ. ನಾಡಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿ ದೇವಿಯು ನಿಮಗೆ ಆರೋಗ್ಯ, ದೀರ್ಘಾಯುಷ್ಯ ನೀಡಿ ಆಶೀರ್ವದಿಸಲಿ. ನಿಮ್ಮಿಂದ ಮತ್ತಷ್ಟು ಉತ್ತಮ ಸಮಾಜಮುಖಿ ಕಾರ್ಯಗಳಾಗಲಿ ಎಂದು ಆಶಿಸಿದ್ದಾರೆ.

Translate »