ಶುರು ಮಾಡಿದ ಅವರೇ ಅಂತ್ಯ ಮಾಡುತ್ತೇನೆ ಅಂದ್ರೆ ಸಂತೋಷ
News

ಶುರು ಮಾಡಿದ ಅವರೇ ಅಂತ್ಯ ಮಾಡುತ್ತೇನೆ ಅಂದ್ರೆ ಸಂತೋಷ

July 11, 2021

ಬೆಂಗಳೂರು, ಜು. 10- ಕಳೆದೊಂದು ವಾರದಿಂದ ಆರೋಪ-ಪ್ರತ್ಯಾರೋಪಗಳನ್ನು ನಡೆಸುತ್ತಿದ್ದ ಸಂಸದೆ ಸುಮಲತಾ ಮತ್ತು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಕಡೆಗೂ ತಮ್ಮ ವಾಕ್ಸಮರಕ್ಕೆ ಅಂತ್ಯವಾಡಿ ದ್ದಾರೆ. ಕೆಆರ್‍ಎಸ್ ಅಣೆಕಟ್ಟು ಬಿರುಕು ವಿಚಾರದಲ್ಲಿ ಆರಂಭವಾದ ಈ ವಾಗ್ದಾಳಿ ಗಳು ಕಡೆಗೆ ವೈಯಕ್ತಿಕ ಮಟ್ಟಕ್ಕೆ ಇಳಿದಿದ್ದವು. ಎಚ್‍ಡಿಕೆ ಪರವಾಗಿ ದೇವೇಗೌಡ, ರೇವಣ್ಣ ಮತ್ತು ಮಗ ನಿಖಿಲ್ ಜೊತೆಗೆ ಮೈಸೂರು -ಕೊಡಗು ಸಂಸದ ಪ್ರತಾಪ್ ಸಿಂಹ ಕೂಡ ಹರಿಹಾಯ್ದಿದ್ದರು. ರಾಜಕೀಯ ಜೊತೆಗೆ ವೈಯಕ್ತಿಕ ದಾಳಿ ನಡೆಸಿದ ಹಿನ್ನೆಲೆ ಸುಮ ಲತಾಗೆ ಅಂಬರೀಶ್ ಬಳಗ ಕೂಡ ಸಾಥ್ ನೀಡಿ, ಮಾಜಿ ಸಿಎಂ ವಿರುದ್ಧ ಹರಿಹಾಯ್ದರು. ಇದಾದ ಬೆನ್ನಲ್ಲೇ ಕುಮಾರಸ್ವಾಮಿ ಈ ವಾಗ್ವಾದಕ್ಕೆ ಅಂತ್ಯವಾಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಸಂಸದೆ ಸುಮಲತಾ, ಈ ವಿಷಯ ಶುರು ಮಾಡಿದ್ದೇ ಅವರು ಈಗ ಅಂತ್ಯ ಮಾಡ್ತೀನಿ ಅಂದರೆ ಸಂತೋಷ ಎಂದಿದ್ದಾರೆ.

ನಾನು ಯಾವತ್ತೂ ವಿಷಯ ಡೈವರ್ಟ್ ಮಾಡಲು ಪ್ರಯತ್ನಿಸಿಲ್ಲ. ನಾನು ಯಾವುದೇ ವೈಯಕ್ತಿಕ ಟೀಕೆಯನ್ನು ಮಾಡಲಿಲ್ಲ. ಕೆಆರ್‍ಎಸ್‍ಗೆ ನಾನು ಯಾವುದೇ ಅನಾ ಹುತ ಆಗಲು ಬಿಡುವುದಿಲ್ಲ. ಈ ಕುರಿತು ನನ್ನ ಹೋರಾಟ ನಿಲ್ಲುವುದಿಲ್ಲ. ಅಕ್ರಮ ಗಣಿ ಗಾರಿಕೆ ವಿಷಯ ಪ್ರಸ್ತಾಪಿಸಿದ್ದಾಗ ಯಾರ ಹೆಸ ರನ್ನೂ ನಾನು ಹೇಳಿರಲಿಲ್ಲ. ನನ್ನ ಹೋರಾಟ ಮುಂದುವರೆಸುತ್ತೇನೆ. ಗಣಿ ಸಚಿವರ ಸಮಯ ಕೇಳಿದ್ದೇನೆ ವಿವರಣೆ ಕೊಡ್ತೇನೆ. ಮೊನ್ನೆ ಸಿಎಂ ಭೇಟಿಯಾದಗಲೂ ಈ ವಿಚಾರವನ್ನು ಗಮನಕ್ಕೆ ತಂದಿದ್ದೇನೆ ಎಂದರು.

ರವೀಂದ್ರ ಶ್ರೀಕಂಠಯ್ಯ ಸಂಸದೆ ಸುಮ ಲತಾ ಕ್ಷಮೆ ಕೇಳಬೇಕು ಎಂಬ ಮಾತಿಗೆ ಪ್ರತಿಕ್ರಿಯಿಸಿದ ಸಂಸದೆ, ಅವರು ತಾವೇ ಡಿಕ್ಟೇಟರ್ ಅನ್ನೋ ಭಾವನೆಯಲ್ಲಿದ್ದಾರೆ. ಅವರು ಹೇಳಿದಂತೆ ನಾನು ನಡೆಯೋದಿ ಕ್ಕಾಗಲ್ಲ. ನಾನು ಮಂಡ್ಯ ಜಿಲ್ಲಾ ಸಂಸದೆ ಇದ್ದೇನೆ. ಏನು ಮಾಡಬೇಕು ಮಾಡ್ಕೊಂಡು ಹೋಗ್ತೇನೆ. ದಿಶಾ ಸಭೆಯಲ್ಲಿ ಮಾತಾ ಡಿದ್ದೇ ಇಲ್ಲಿವರೆಗೂ ಎಳೆದು ತಂದಿದ್ದಾರೆ. ಅವರು ಯಾವುದ್ಯಾವುದೋ ಪ್ರಸ್ತಾಪ ತಂದ್ದರು. ಸಾಕಷ್ಟು ಆರೋಪ ಮಾಡಿದ್ದರು. ಅದಕ್ಕೂ ನನಗೂ ಸಂಬಂಧ ಇಲ್ಲ. ಆದರೆ ನನ್ನ ಹೋರಾಟ ನಿಲ್ಲುವುದಿಲ್ಲ ಎಂದರು.

ತಮ್ಮ ಹಾಗೂ ಸುಮಲತಾ ಈ ವಾಕ್ಸ ಮರ ಕುರಿತು ಇಂದು ಅಂತ್ಯವಾಡಲು ಮುಂದಾದ ಎಚ್‍ಡಿಕೆ, ಟ್ವೀಟ್ ಮೂಲಕ ಇದರ ಹೊರತಾಗಿ ಬೇರೆ ವಿಷಯಗಳ ಬಗ್ಗೆ ನಾವು ಗಮನ ಕೊಡಬೇಕಿದೆ. ನಾವು ಹೋರಾಟ ಮಾಡಬೇಕಾದ ವಿಚಾರ ಬಹಳ ಷ್ಟಿವೆ. ಕನ್ನಡ, ಕನ್ನಡಿಗ, ಕರ್ನಾಟಕಕ್ಕೆ ಸಂಬಂ ಧಿಸಿದ ವಿಷಯಗಳಲ್ಲಿ ನಮಗೆ ಬಹುದೊಡ್ಡ ನ್ಯಾಯ ಸಿಗಬೇಕಿದೆ. ನನ್ನ ಹೋರಾಟವನ್ನು ಈಗಾಗಲೇ ಅತ್ತ ಕೇಂದ್ರೀಕರಿಸಿದ್ದೇನೆ. ನಾಡು ನುಡಿಗಾಗಿ ಹೋರಾಡೋಣ. ಬೇರೆಲ್ಲ ವಿಷಯ ಗಳನ್ನು ನಾವು ಉಪೇಕ್ಷಿಸೋಣ ಎನ್ನುವ ಮೂಲಕ ಸುಮಲತಾರೊಂದಿಗಿನ ಜಟಾ ಪಟಿಗೆ ಅಂತ್ಯ ಹಾಡಲು ಮುಂದಾದರು.

Translate »