ಶಿಕ್ಷಕರು ಆರೋಗ್ಯ ರಕ್ಷಣೆಗೆ ಕಾಳಜಿ ವಹಿಸಿ
ಮೈಸೂರು

ಶಿಕ್ಷಕರು ಆರೋಗ್ಯ ರಕ್ಷಣೆಗೆ ಕಾಳಜಿ ವಹಿಸಿ

July 11, 2021

ಮೈಸೂರು, ಜು.10 (ವೈಡಿಎಸ್)- ಬದುಕಿನಲ್ಲಿ ನಿಜವಾದ ಸಂಪತ್ತೆಂದರೆ ಆರೋಗ್ಯ. ಅದರಲ್ಲೂ ಕೊರೊನಾ ಸಂದರ್ಭದ ಸಂಕಷ್ಟಗಳನ್ನು ಎದುರಿಸಿ ನಿಲ್ಲು ವುದು ದೊಡ್ಡ ಸವಾಲು. ಆದ್ದರಿಂದ ಗ್ರಾಮೀಣ ಪ್ರದೇಶದಲ್ಲಿ ಕರ್ತವ್ಯ ನಿರ್ವ ಹಿಸುತ್ತಿರುವ ಶಿಕ್ಷಕರು ಆರೋಗ್ಯದತ್ತ ಹೆಚ್ಚು ಕಾಳಜಿ ವಹಿಸಬೇಕೆಂದು ಜಿಲ್ಲಾ ನೌಕರರ ಸಂಘದ ನಿರ್ದೇಶಕ ಟಿ.ಸತೀಶ್ ಜವರೇಗೌಡ ಸಲಹೆ ನೀಡಿದರು.

ಮೈಸೂರು ತಾಲೂಕಿನ ಮೆಲ್ಲಹಳ್ಳಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೀಳ್ಕೊಡುಗೆ ಸಮಾರಂಭದಲ್ಲಿ ಶಿಕ್ಷಕಿ ವಿ.ಕಮಲಮ್ಮ ಅವರನ್ನು ಸನ್ಮಾನಿಸಿ ಮಾತನಾಡಿದ ಸತೀಶ್, ಶಿಕ್ಷಕರು ತಮ್ಮ ಆರೋಗ್ಯ ಕಾಪಾಡಿಕೊಳ್ಳುವುದರ ಜತೆಗೇ ಮಕ್ಕಳ ಶೈಕ್ಷಣಿಕ ಪ್ರಗತಿಗೂ ಶ್ರಮಿಸಬೇಕು ಎಂದರು. ಸರ್ಕಾರಿ ಅಧಿಕಾರಿಗಳು, ನೌಕರರು ನಿವೃತ್ತಿ ಬಳಿಕ ಕೌಟುಂ ಬಿಕ ಜಂಜಾಟದಲ್ಲಿ ಮುಳುಗದೇ ಕೃಷಿ, ಹೈನುಗಾರಿಕೆ, ಕಲೆ, ಸಾಹಿತ್ಯ, ಸಾಂಸ್ಕøತಿಕ ಚಟುವಟಿಕೆ ಗಳಲ್ಲಿ ತೊಡಗಿಸಿಕೊಂಡು ಸಮಾಜಮುಖಿಯಾಗಬೇಕು. 2.5 ದಶಕಗಳ ಕಾಲ ವಿ.ಕಮಲಮ್ಮ ಉತ್ತಮ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಅವರ ವಿಶ್ರಾಂತಿ ಜೀವನ ಆರೋಗ್ಯ ಪೂರ್ಣವಾಗಿರಲಿ ಎಂದು ಆಶಿಸಿದರು. ಮುಖ್ಯ ಶಿಕ್ಷಕಿ ಎನ್.ಅನುಪಮ, ಹಾರೋಹಳ್ಳಿ ಶಾಲೆ ಮುಖ್ಯ ಶಿಕ್ಷಕ ಸಂತೋಷ್ ಎಸ್.ಶೆಟ್ಟಿ, ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕ ಸುನಿಲ್ ಕುಮಾರ್, ಹಿರಿಯ ಶಿಕ್ಷಕ ಆನಂದಮೂರ್ತಿ, ವಲಯ ಸಂಪನ್ಮೂಲ ವ್ಯಕ್ತಿ ಎಸ್.ದೀಪು ಇದ್ದರು.

Translate »