ಮತದಾರರಿಗೆ ನುಡಿದಂತೆ ನಡೆದಿದ್ದೇನೆ: ಶಾಸಕ ಬಿ.ಹರ್ಷವರ್ಧನ್
ಮೈಸೂರು

ಮತದಾರರಿಗೆ ನುಡಿದಂತೆ ನಡೆದಿದ್ದೇನೆ: ಶಾಸಕ ಬಿ.ಹರ್ಷವರ್ಧನ್

July 11, 2021

ನಂಜನಗೂಡು, ಜು.10- ನುಗು ಏತ ನೀರಾವರಿ ಯೋಜನೆ ಜಾರಿಗೊಳಿಸದಿದ್ದರೆ ಮುಂಬರುವ ಚುನಾವಣೆಯಲ್ಲಿ ನಿಲ್ಲುವುದಿಲ್ಲ ಎಂದು ಮತದಾರರಿಗೆ ವಾಗ್ದಾನ ಕೊಟ್ಟಿದ್ದೆ. ಇದೀಗ ಯೋಜನೆಗೆ ಸರ್ಕಾರ ಅನುಮೋದನೆ ನೀಡಿದ್ದು ನುಡಿದಂತೆ ನಡೆಯುವ ಮೂಲಕ ರೈತರ 3 ದಶಕಗಳ ಕನಸನ್ನು ಸಾಕಾರಗೊಳಿಸಿದ್ದೇನೆ ಎಂದು ಶಾಸಕ ಬಿ.ಹರ್ಷವರ್ಧನ್ ತಿಳಿಸಿದರು.

ನಗರದ ಶ್ರೀಕಂಠೇಶ್ವರಸ್ವಾಮಿ ದೇವಾ ಲಯದಲ್ಲಿ ಶನಿವಾರ ನುಗು ಯೋಜನೆ ಜಾರಿಯಾದ ಹಿನ್ನೆಲೆಯಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ಸುದ್ದಿಗಾರ ರೊಂದಿಗೆ ಅವರು ಮಾತನಾಡಿದರು.

ಕಳೆದ 3 ವರ್ಷದ ಹಿಂದೆ ಚುನಾವಣಾ ಪ್ರಚಾರಕ್ಕೆ ಹೋದಾಗ ರೈತರು ನುಗು ಏತ ನೀರಾವರಿ ಯೋಜನೆಗೆ ಬೇಡಿಕೆ ಇಡುತ್ತಿದ್ದರು. ಈ ಬಗ್ಗೆ ನನಗೂ ಅಷ್ಟಾಗಿ ಗೊತ್ತಿರಲಿಲ್ಲ. ಜನರು ಕೇಳುವುದನ್ನು ನೋಡಿ ಇದೊಂದು ಮಹತ್ವ ಯೋಜನೆ ಎಂಬುದನ್ನು ಅರಿತು ಈ ಯೋಜನೆ ಸಾಕಾರಗೊಳಿಸಲು ನಾನು ಮೊದಲ ಆದ್ಯತೆ ನೀಡಿದ್ದೇನೆ. ಒಂದು ವೇಳೆ ಜಾರಿ ಗೊಳಿಸದಿದ್ದರೆ ಮುಂದಿನ ಚುನಾವಣೆ ಯಲ್ಲಿ ನಿಲ್ಲುವುದಿಲ್ಲ ಎಂದು ವಾಗ್ದಾನ ನೀಡಿದ್ದೆ. ರೈತರ ಬವಣೆ ಹಾಗೂ ಜನರ ನಿರೀಕ್ಷೆ ನೆರವೇರಿಸಲು ಇಚ್ಛಾಶಕ್ತಿ, ಬದ್ಧತೆ ಹಾಗೂ ಕಾಯಕನಿಷ್ಠೆ ಇದ್ದರೆ ಮಾತ್ರ ಸಾಧ್ಯ ಎಂದ ಅವರು, ಇದೀಗ ನುಗು ಏತ ನೀರಾವರಿ ಯೋಜನೆಗೆ ಸರ್ಕಾರ 80 ಕೋಟಿ ಅನುದಾನ ಬಿಡು ಗಡೆಗೊಳಿಸಿದೆ ಎಂದರು.

ನುಗು ಏತ ನೀರಾವರಿ ಯೋಜನೆ ಜಾರಿಗೊಳಿಸಬೇಕೆಂಬುದು ರೈತರ 35 ವರ್ಷಗಳ ಬೇಡಿಕೆಯಾಗಿತ್ತು. ಚುನಾವಣೆ ಸಂದರ್ಭ ಮುನ್ನೆಲೆಗೆ ಬಂದು ನಂತರ ಅದು ಗೌಣ ಆಗುತ್ತಿತ್ತು. ಆದರೆ ನಾನು ಆ ರೀತಿ ಮಾಡಿದರೆ ಮತದಾರರ ಭಾವನೆಗೆ ದ್ರೋಹ ಬಗೆದಂತಾಗುತ್ತದೆ ಎಂದು ಅರಿತು ಯೋಜನೆ ಜಾರಿಗೆ ಇದ್ದ ಕಾನೂನು ತೊಡಕುಗಳನ್ನು ನಿವಾರಿಸಿ ವ್ಯವಸ್ಥಿತವಾಗಿ ಜಾರಿಗೊಳಿಸುವ ಮೂಲಕ ಅವರ ಆಶೋ ತ್ತರಗಳಿಗೆ ಧ್ವನಿಯಾಗಿದ್ದೇನೆ. ಕೇವಲ ಭರವಸೆ ಹಾಗೂ ಪ್ರಚಾರಕ್ಕೆ ಸೀಮಿತ ವಾಗದೇ ಅಭಿವೃದ್ಧಿಯನ್ನೇ ಮಾನದಂಡ ವನ್ನಾಗಿ ಮಾಡಿಕೊಂಡು ಜನರ ಭಾವನೆಗಳಿಗೆ ಸ್ಪಂದಿಸುತ್ತಿದ್ದೇನೆ ಎಂದರು.

ಈ ಯೋಜನೆ ಜಾರಿ ಹಿಂದೆ ಸುತ್ತೂರು ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳ ಆಶೀರ್ವಾದ, ಸಿಎಂ ಬಿ.ಎಸ್. ಯಡಿಯೂರಪ್ಪ, ಸಂಸದ ವಿ.ಶ್ರೀನಿವಾಸ ಪ್ರಸಾದ್ ಮಾರ್ಗದರ್ಶನ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜ ಯೇಂದ್ರ ಅವರ ಸಹಕಾರ ಮೆರೆಯುವಂತಿಲ್ಲ. ಕ್ಷೇತ್ರದ ಯಾವುದೇ ಯೋಜನೆಯಿದ್ದರೂ ತಕ್ಷಣ ಸ್ಪಂದಿಸುತ್ತಾರೆ ಎಂದರು.

ಅಲ್ಲದೇ, ದೊಡ್ಡಕವಲಂದೆ ಹೋಬಳಿಯ 54 ಬಹು ಗ್ರಾಮಗಳ ಕುಡಿಯುವ ನೀರಿನ ಯೋಜನೆಯ ಹೊಸ ಪೈಪ್‍ಲೈನ್ ಅಳ ವಡಿಕೆಗೆ 8 ಕೋಟಿ ಬಿಡುಗಡೆ ಮಾಡ ಲಾಗಿದೆ. ಹೆಡಿಯಾಲ ಹಾಗೂ ಬದನ ವಾಳು ಭಾಗದ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿಗೆ ಕ್ರಮ ವಹಿಸಲಾಗಿದೆ. ಕ್ಷೇತ್ರದ ಸಮಗ್ರ ಅಭಿವೃದ್ಧಿ ಮಾಡುವಲ್ಲಿ ಹಗಲಿರುಳು ಶ್ರಮಿಸುತ್ತಿರುವುದಾಗಿ ತಿಳಿಸಿದರು.

ಬಿಜೆಪಿ ತಾಲೂಕು ಅಧ್ಯಕ್ಷ ಪಿ. ಮಹೇಶ್, ನಗರಸಭಾಧ್ಯಕ್ಷ ಮಹದೇವ ಸ್ವಾಮಿ, ಮುಖಂಡರಾದ ಸಿ.ಚಿಕ್ಕರಂಗನಾಯ್ಕ, ಎಸ್.ಎಂ.ಕೆಂಪಣ್ಣ, ಬಿ.ಎಸ್.ಮಹದೇವಪ್ಪ, ಬಿ.ಎಸ್.ರಾಮು ಸೇರಿದಂತೆ ಹಲವರಿದ್ದರು.

ಸುತ್ತೂರು ಶ್ರೀಗಳಿಂದ ಶ್ಲಾಘನೆ: ನುಗು ಏತ ನೀರಾವರಿ ಯೋಜನೆ ಜಾರಿ ಹಿನ್ನೆಲೆಯಲ್ಲಿ ಶಾಸಕ ಬಿ.ಹರ್ಷವರ್ಧನ್ ಸುತ್ತೂರು ಮಠಕ್ಕೆ ಭೇಟಿ ನೀಡಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಆಶೀರ್ವಾದ ಪಡೆದರು. ಈ ವೇಳೆ ಏತ ನೀರಾವರಿ ಯೋಜನೆ ಜಾರಿಗೊಳಿಸಲು ಹಿಂದೆ ಇದ್ದವರಿಂದ ಸಾಧ್ಯವಾಗಿರಲಿಲ್ಲ. ನೀವು ಜಾರಿಗೊಳಿಸುವಲ್ಲಿ ಯಶಸ್ವಿಯಾಗಿದ್ದೀರಿ ಎಂದು ಸುತ್ತೂರು ಶ್ರೀಗಳು ಪ್ರಶಂಸೆ ವ್ಯಕ್ತಪಡಿಸಿದರು. ಇನ್ನು ನುಗು ಏತ ನೀರಾವರಿ ಯೋಜನೆ ಜಾರಿಯಾದರೆ ಶ್ರೀಕಂಠೇಶ್ವರಸ್ವಾಮಿ ದೇವಾಲಯ ಹಾಗೂ ಸಂಗಮದಲ್ಲಿರುವ ಮಹದೇವ ತಾತಾ ಗದ್ದುಗೆಯಲ್ಲಿ ವಿಶೇಷ ಪೂಜೆ ಸಲ್ಲಿಸುವುದಾಗಿ ಹರಕೆ ಹೊತ್ತಿದ್ದೆ. ಅಂತೆಯೇ ಇಂದು ಹರಕೆ ತೀರಿಸುತ್ತಿದ್ದೇನೆ ಎಂದು ಶಾಸಕ ಹರ್ಷವರ್ಧನ್ ತಿಳಿಸಿದರು.

Translate »