ಡಿ.30ರಂದು ಕೃಷ್ಣರಾಜ ಬುಲೆವಾರ್ಡ್ ರಸ್ತೆಯಲ್ಲಿ ಹಸಿರು ಸಂತೆ, ಚಿತ್ರ ಸಂತೆ
ಮೈಸೂರು

ಡಿ.30ರಂದು ಕೃಷ್ಣರಾಜ ಬುಲೆವಾರ್ಡ್ ರಸ್ತೆಯಲ್ಲಿ ಹಸಿರು ಸಂತೆ, ಚಿತ್ರ ಸಂತೆ

December 28, 2018

ಮೈಸೂರು:  ಮೈಸೂರು ಮಾಗಿ ಉತ್ಸವದ ಭಾಗವಾಗಿ ಡಿ.30 ರಂದು ಈ ಹಿಂದೆ ಸ್ಟ್ರೀಟ್ ಫೆಸ್ಟಿವಲ್ ನಡೆದಂತಹ ಮೈಸೂರಿನ ಕೃಷ್ಣರಾಜ ಬುಲೆವಾರ್ಡ್ ರಸ್ತೆಯಲ್ಲಿ ಹಸಿರು ಸಂತೆ ಮತ್ತು ಚಿತ್ರ ಸಂತೆ ಆಯೋಜಿಸಲಾಗಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ತಿಳಿಸಿದರು.

ಮೈಸೂರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿ ಯಲ್ಲಿ ಹಸಿರು ಸಂತೆ (ರೈತರ ಸಂತೆ)ಯ ಮಾಹಿತಿ ನೀಡಿದ ಅವರು, ಅಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಕೃಷ್ಣರಾಜ ಬುಲೆವಾರ್ಡ್ ರಸ್ತೆಯಲ್ಲಿ, ಓರಿ ಯಂಟಲ್ ರೀಸರ್ಚ್ ಇನ್ಸ್‍ಟಿಟ್ಯೂಟ್ ಬಳಿಯಿಂದ ಜಿಲ್ಲಾ ಪಂಚಾಯಿತಿ ಕಚೇರಿ ಬಳಿಯ ಗಾಂಧಿ ಪುತ್ಥಳಿ ವೃತ್ತದವರೆಗೆ ಹಸಿರು ಸಂತೆ ಏರ್ಪಡಿಸಲಾಗಿದೆ. ಪ್ರಗತಿ ಪರ ರೈತರು ಸಾವಯವ ಉತ್ಪನ್ನ ತಯಾ ರಕರು ಬೇರೆ ಬೇರೆ ಜಿಲ್ಲೆಗಳಿಂದ ಆಗ ಮಿಸಲಿದ್ದಾರೆ. ಈಗಾಗಲೇ ಅಂತಹ 55 ಮಂದಿ ರೈತರು ನೋಂದಣಿ ಮಾಡಿಕೊಂಡಿ ದ್ದಾರೆ. ಸಾವಯವ ಉತ್ಪನ್ನ, ಅಡುಗೆ ಮತ್ತು ಪ್ರದರ್ಶನ, ವಿವಿಧ ಹಣ್ಣು, ಸೊಪ್ಪು, ಇವು ಗಳಿಂದ ತಯಾರಿಸಿದ ಪಾನೀಯಗಳ ಮಾರಾಟ ಇರುತ್ತದೆ ಎಂದು ಹೇಳಿದರು.

ಕೃಷಿ ಇಲಾಖೆ, ಪ್ರಾಂತೀಯ ಸಾವಯವ ಒಕ್ಕೂಟಗಳು ಜಂಟಿಯಾಗಿ ಇದನ್ನು ಆಯೋ ಜಿಸಿದ್ದು, ಕೃಷಿ ಉತ್ಪನ್ನಗಳು, ಮೌಲ್ಯವರ್ಧಿತ ಉತ್ಪನ್ನಗಳು, ಸಾವಯವ, ಸಿರಿಧಾನ್ಯಗಳಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು ಗ್ರಾಹ ಕರಿಗೆ ಪರಿಚಯಿಸುವ ಜೊತೆಗೆ ಮಾರಾಟ ಮಾಡಲು ಅವಕಾಶವಿದೆ. ಇದಕ್ಕಾಗಿ ನೂರಕ್ಕೂ ಹೆಚ್ಚು ಮಳಿಗೆಗಳಿರುತ್ತವೆ ಎಂದರು.

ಇದೇ ಸಂದರ್ಭದಲ್ಲಿ ಚಿತ್ರ ಸಂತೆಯನ್ನು ಆಯೋಜಿಸಲಾಗುತ್ತಿದ್ದು, ಕಾವಾ, ರವಿ ವರ್ಮ ಚಿತ್ರಕಲಾ ಶಾಲೆ, ಶ್ರೀ ಕಲಾನಿ ಕೇತನ ಇನ್ನಿತರ ಸಂಸ್ಥೆಗಳ ವತಿಯಿಂದ ನೂರಕ್ಕೂ ಹೆಚ್ಚು ಕಲಾವಿದರು ಚಿತ್ರಸಂತೆ ಯಲ್ಲಿ ಪಾಲ್ಗೊಳ್ಳಲಿದ್ದಾರೆ. ನಾನಾ ರೀತಿಯ, ವಿಶಿಷ್ಟ ಚಿತ್ರಕಲೆಗಳನ್ನು ಇಲ್ಲಿ ಪ್ರದರ್ಶಿ ಸಲಿದ್ದಾರೆ ಎಂದು ಹೇಳಿದರು.

ಸಿಸಿ ಕ್ಯಾಮರಾ ಕಣ್ಣು: ಹಸಿರು ಸಂತೆ ಮತ್ತು ಚಿತ್ರ ಸಂತೆಯಲ್ಲಿ ಸಾವಿರಾರು ಜನರು ಭಾಗಿ ಯಾಗುವುದರಿಂದ ಈಗಾಗಲೇ ಕೃಷ್ಣರಾಜ ಬುಲೆವಾರ್ಡ್ ರಸ್ತೆಯಲ್ಲಿ ಪೊಲೀಸ್ ಬಂದೋಬಸ್ತ್‍ಗೆ ತಿಳಿಸಲಾಗಿದೆ. ಅಲ್ಲದೆ 60 ಸಿಸಿ ಕ್ಯಾಮರಾಗಳನ್ನು ಅಳವಡಿಸಿ, ಎಚ್ಚರಿಕೆ ಯಿಂದ ನಿಗಾ ವಹಿಸಲಾಗುತ್ತದೆ. ನಗರ ಪಾಲಿಕೆ ಸ್ವಚ್ಛತಾ ವ್ಯವಸ್ಥೆಯನ್ನು ನೋಡಿ ಕೊಳ್ಳುತ್ತದೆ. ಸಾರ್ವಜನಿಕರು ಹೆಚ್ಚು ಸಂಖ್ಯೆಯಲ್ಲಿ ಇದರಲ್ಲಿ ಪಾಲ್ಗೊಳ್ಳುವಂತೆ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಮನವಿ ಮಾಡಿದರು.

Translate »